ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ರಂಜಾನ್: ಮಾಂಸಾಹಾರ ನಿಷೇಧ ವದಂತಿಗಳಿಗೆ ಬಿಬಿಎಂಪಿ ತೆರೆ

|
Google Oneindia Kannada News

ಬೆಂಗಳೂರು ಮೇ 2: ಈ ತಿಂಗಳ ಮೇ 3 ರಂದು ಒಂದೇ ದಿನ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಆಚರಣೆ ಇರುವುದರಿಂದ ಮಾಂಸಾಹಾರ ನಿಷೇಧ ಮಾಡಲಾಗಿದೆ ಎನ್ನುವ ಸುದ್ದಿ ಹಬ್ಬಿತ್ತು. ಆದರೀಗ ಈ ಊಹಾಪೋಹಕ್ಕೆ ಬಿಬಿಎಂಪಿ ತೆರೆ ಎಳೆದಿದೆ.

ಭಾರತದ 10 ರಲ್ಲಿ 7 ಮಂದಿ ಮಾಂಸಾಹಾರ ಪ್ರಿಯರು: ಇಲ್ಲಿದೆ ದೇಶದ ನಾನ್‌ವೆಜ್‌ ಲೋಕಭಾರತದ 10 ರಲ್ಲಿ 7 ಮಂದಿ ಮಾಂಸಾಹಾರ ಪ್ರಿಯರು: ಇಲ್ಲಿದೆ ದೇಶದ ನಾನ್‌ವೆಜ್‌ ಲೋಕ

ಒಂದೇ ದಿನದಲ್ಲಿ ಎರಡು ಹಬ್ಬಗಳು ನಡೆಯುವುದರಿಂದ ಮುಸ್ಲಿಮರ ದೊಡ್ಡ ಹಬ್ಬದಲ್ಲಿ ಮಾಂಸ ಮಾರಾಟಕ್ಕೆ ಅವಕಾಶವಿಲ್ಲ ಎಂಬ ವದಂತಿ ಹಬ್ಬಿತ್ತು. ಬಸವ ಜಯಂತಿಯ ಜೊತೆಗೆ ಈದ್ ಉಲ್ ಫಿತರ್ ಬರುವ ಮಂಗಳವಾರ ಬೆಂಗಳೂರಿನಲ್ಲಿ ಮಾಂಸಾಹಾರ ನಿಷೇಧದ ವದಂತಿಗೆ ಬಿಬಿಎಂಪಿ ತೆರೆ ಎಳೆದಿದೆ.

No meat ban on Eid in Bengaluru, BBMP clarify

ನಾಗರಿಕ ಸಂಸ್ಥೆಯ ಪಶುಸಂಗೋಪನಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ವದಂತಿಗಳಿಗೆ ತೆರೆ ಎಳೆದಿದ್ದಾರೆ. ನಗರಾಭಿವೃದ್ಧಿ ಇಲಾಖೆಯು ಗುರುತುಪಡಿಸಿದ ಒಂಬತ್ತು ದಿನಗಳಲ್ಲಿ ಮಾಂಸಾಹಾರ ಮಾರಾಟ ಮಾಡುವಂತಿಲ್ಲ. ಅವುಗಳೆಂದರೆ ಹುತಾತ್ಮರ ದಿನ (ಜನವರಿ 30), ಮಹಾಶಿವರಾತ್ರಿ (ಮಾರ್ಚ್ 1), ಶ್ರೀ ರಾಮ ನವಮಿ (ಏಪ್ರಿಲ್ 10), ಮಹಾವೀರ ಜಯಂತಿ (ಏಪ್ರಿಲ್ 14), ಬುದ್ಧ ಪೂರ್ಣಿಮಾ (ಮೇ 16), ಕೃಷ್ಣ ಜನ್ಮಾಷ್ಟಮಿ (ಆಗಸ್ಟ್ 19), ಗಣೇಶ ಚತುರ್ಥಿ (ಆಗಸ್ಟ್ 31), ಗಾಂಧಿ ಜಯಂತಿ (ಅಕ್ಟೋಬರ್ 2), ಮತ್ತು ಸಾಧು ವಾಸ್ವಾನಿ ಜಯಂತಿ (ನವೆಂಬರ್ 25). ಆದರೆ ಈ ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆಯು ಮಾಂಸ ನಿಷೇಧಕ್ಕೆ ಈ ವರ್ಷ ನಿರ್ದಿಷ್ಟಪಡಿಸಿದ ಒಂಬತ್ತು ದಿನಗಳಲ್ಲಿ ಬಸವ ಜಯಂತಿ ಇಲ್ಲ. ಹೀಗಾಗಿ ಈ ಬಾರಿ ರಂಜಾನ್ ಆಚರಣೆಗೆ ಮಾಂಸಾಹಾರ ಮಾರಾಟ ನಿಷೇಧ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

English summary
BBMP has scotched rumours of a meat ban in Bengaluru on Tuesday when Eid-ul-Fitr falls along with Basava Jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X