ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮಿಶ್ರ ಸರ್ಕಾರದಲ್ಲಿ ಯಾರ ಪ್ರಣಾಳಿಕೆ ಜಾರಿಗೆ ಬರಲಿದೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 23: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಂದಿರುವ ಸದ್ಯದ ಮಹತ್ವದ ಸವಾಲು ಎಂದರೆ ಪ್ರಣಾಳಿಕೆಗಳಲ್ಲಿರುವ ಯೋಜನೆಗಳನ್ನು ಜಾರಿಗೆ ತರುವುದು!

ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಎರಡು ಪಕ್ಷಗಳೂ ಹೊಂದಿರುವ ಪ್ರತ್ಯೇಕ ಪ್ರಣಾಳಿಕೆಗಳಲ್ಲಿ ಎರಡನ್ನೂ ಜಾರಿಗೆ ತರಲಾಗುತ್ತದೆಯೇ? ಅಥವಾ ಅವೆರಡರಲ್ಲೂ ಜನಪ್ರಿಯವಾದವನ್ನು ಆಯ್ದು ಕೆಲವನ್ನಷ್ಟೇ ಜಾರಿಗೆ ತರಲಾಗುತ್ತದೆಯೇ ಎಂಬುದು ಸದ್ಯಕ್ಕಿರುವ ಕುತೂಹಲ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ? ಇಲ್ಲಿವೆ ಮುಖ್ಯಾಂಶಗಳುಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ? ಇಲ್ಲಿವೆ ಮುಖ್ಯಾಂಶಗಳು

ಎಚ್ ಡಿ ಕುಮಾರಸ್ವಾಮಿಯವರು ಈ ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನವನ್ನೇನೋ ಸ್ವೀಕರಿಸುತ್ತಾರೆ. ಬೇಷರತ್ ಬೆಂಬಲ ನೀಡಿದ್ದ ಕಾಂಗ್ರೆಸ್ ಇದೀಗ ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಟ್ಟು, ದಲಿತ ಮುಖಂಡ ಜಿ ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿದೆ.

Next challenge for JDS-Cong is to implement their individual manifestos

ಅದೇನೇ ಇದ್ದಿರಲಿ, 2019 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರ ನಡೆಸಲಬೇಕಾದ ಅನಿವಾರ್ಯತೆಯಲ್ಲಿರುವ ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಈ ಒಂದು ವರ್ಷದಲ್ಲಿ ತಾನು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಯತ್ನಿಸಲೇಬೇಕಿದೆ.

ಸಹಕಾರಿ ಬ್ಯಾಂಕುಗಳ 50,000 ರೂ. ವರೆಗಿನ ಸಾಲಮನ್ನಾ ಮಾಡುವ ಘೋಷಣೆಯನ್ನು ಕುಮಾರಸ್ವಾಮಿ ಚುನಾವಣೆಗೂ ಮುನ್ನ ಮಾಡಿದ್ದರು. ಆದರೆ ಬಹುಮತ ಬಂದಿಲ್ಲದ ಕಾರಣ ಸಾಲಮನ್ನಾ ಮಾಡುವುದು ಕಷ್ಟ ಎಂದು ನಿನ್ನೆಯಷ್ಟೇ ಹೇಳಿಕೆ ನೀಡೀ ಯೂ ಟರ್ನ್ ತೆಗೆದುಕೊಂದಿದ್ದರು. ಆದರೆ ಮತ್ತೀಗ ಮೈಸೂರಿನಲ್ಲಿ, 'ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಯೂಟರ್ನ್ ಹೊಡೆಯುವ ಪ್ರಶ್ನೆಯೇ ಇಲ್ಲ' ಎಂದಿದ್ದರು.

English summary
Round one has been won by the new Congress-JD(S) alliance. Kumaraswamy will take over as Chief Minister and Dr. Parameshwar will be his deputy. The post of Speaker would go to the Congress while that of deputy will be with the JD(S).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X