ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಸಂದರ್ಶನ | Oneindia Kannada

ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಚುನಾವಣಾ ಕಾವು ತಾರಕಕ್ಕೇರಿದೆ. ಜೆಡಿಎಸ್ ಮತ್ತು ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಯ ನಡುವೆ ಇಲ್ಲಿ ನೇರ ಫೈಟ್. ಇಡೀ 224ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವ ಏಕೈಕ ಕ್ಷೇತ್ರವೆಂದರೆ ಅದು ಮೇಲುಕೋಟೆ.

ಚುನಾವಣೆಯ ಸಂದರ್ಭದಲ್ಲಿ ಮೇಲುಕೋಟೆ ಅಸೆಂಬ್ಲಿ ಕ್ಷೇತ್ರದಲ್ಲಿ ಸುತ್ತಾಡಿದಾಗ ಇಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತಿರುವುದು ಜೆಡಿಎಸ್ ಪಕ್ಷದ ಹಿರಿಯ ಮುಖಂಡ, ಹಾಲೀ ಮಂಡ್ಯ ಸಂಸದ ಮತ್ತು ಈ ಬಾರಿ ಇಲ್ಲಿನ ಅಭ್ಯರ್ಥಿ ಸಿ ಎಸ್ ಪುಟ್ಟರಾಜು ಮತ್ತು ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ನಡುವೆ.

ತಂದೆ, ರೈತ ನಾಯಕ ಕೆ ಎಸ್ ಪುಟ್ಟಣ್ಣಯ್ಯ ಅವರ ಅಕಾಲಿಕ ನಿಧನದ ನಂತರ, ತೀವ್ರ ಒತ್ತಡ ವ್ಯಕ್ತವಾದ ಹಿನ್ನಲೆಯಲ್ಲಿ ರಾಜಕೀಯಕ್ಕೆ ಧುಮುಕಿದ ದರ್ಶನ್, ಅಮೆರಿಕಾದಲ್ಲಿ Qwinix ಟೆಕ್ನಾಲಜೀಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಓ.

ಮೇಲುಕೋಟೆ : ರೈತ ನಾಯಕನಿಗೆ ರಾಷ್ಟ್ರೀಯ ಪಕ್ಷಗಳ ಸವಾಲು!<br>ಮೇಲುಕೋಟೆ : ರೈತ ನಾಯಕನಿಗೆ ರಾಷ್ಟ್ರೀಯ ಪಕ್ಷಗಳ ಸವಾಲು!

ಬೆಳಗ್ಗೆ ಏಳು ಗಂಟೆಯಿಂದಲೇ ಪ್ರಚಾರ ಆರಂಭಿಸುವ ಯುವ ಮುಖಂಡ ದರ್ಶನ್, 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಹೀಗೆ. ಅವರ ಸಂದರ್ಶನದ ಆಯ್ದಭಾಗ ಇಂತಿದೆ.

ಅಮೆರಿಕಾದಿಂದ ಮೇಲುಕೋಟೆಗೆ: ರಾಜಕೀಯ ಅಖಾಡದಲ್ಲಿ ದರ್ಶನ್ ಪುಟ್ಟಣ್ಣಯ್ಯ ಸದ್ದುಅಮೆರಿಕಾದಿಂದ ಮೇಲುಕೋಟೆಗೆ: ರಾಜಕೀಯ ಅಖಾಡದಲ್ಲಿ ದರ್ಶನ್ ಪುಟ್ಟಣ್ಣಯ್ಯ ಸದ್ದು

ಪ್ರ: ತಂದೆಯ ನಿಧನದ ನಂತರ ಬಲವಂತವಾಗಿ ರಾಜಕೀಯಕ್ಕೆ ಬರಬೇಕಾಯಿತಾ?
ದರ್ಶನ್: ಹೌದು, ರಾಜಕೀಯಕ್ಕೆ ಬರುವ ಯಾವ ಆಲೋಚನೆಗಳೂ ನನಗಿರಲಿಲ್ಲ. ತಂದೆಯವರ ನಿಧನದ ನಂತರ ಬಹಳಷ್ಟು ಬೆಳವಣಿಗೆಗಳಾದವು. ಈಗ ರಾಜಕೀಯಕ್ಕೂ ಬಂದಿದ್ದೇನೆ, ಹೋರಾಟದಲ್ಲೂ ತೊಡಗಿಸಿಕೊಂಡಿದ್ದೇನೆ. ಜೊತೆಗೆ, ಚುನಾವಣೆಯಲ್ಲೂ ಸ್ಪರ್ಧೆ ಮಾಡುತ್ತಿದ್ದೇನೆ.

 ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸ್ಪರ್ಧಿಯನ್ನು ಹಾಕಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸ್ಪರ್ಧಿಯನ್ನು ಹಾಕಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಪ್ರ: ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸ್ಪರ್ಧಿಯನ್ನು ಹಾಕಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ದರ್ಶನ್: ಹೌದು ಕಾಂಗ್ರೆಸ್ಸಿನವರು ಯಾವ ಸ್ಪರ್ಧಿಯನ್ನೂ ಹಾಕಿಲ್ಲ. ಕಾಂಗ್ರೆಸ್ಸಿನ ಹಿರಿಯ ಮುಖಂಡರು ನನ್ನ ತಂದೆಯ ಮೇಲಿಟ್ಟ ಗೌರವ. ಇದು ರೈತರ ಪರ ಚಳವಳಿಗೆ ಕೊಟ್ಟ ಗೌರವ ಅಂತ ನಾನು ಭಾವಿಸುತ್ತೇನೆ.

ಪ್ರ: ಪ್ರಚಾರದಲ್ಲಿ ತೊಡಗಿದ್ದೀರಾ, ಮೇಲುಕೋಟೆ ಕ್ಷೇತ್ರದ ಜನರ ನಾಡಿಮಿಡಿತ ಹೇಗಿದೆ?
ದರ್ಶನ್: ತುಂಬಾ ಚೆನ್ನಾಗಿದೆ, ಯಾವ ಹಳ್ಳಿಗೂ ಹೋದರೂ, ಜನರು ನಮ್ಮಪ್ಪ ಮಾಡಿರುವಂತಹ ಕೆಲಸದ ಬಗ್ಗೆ ವಿವರಿಸುತ್ತಿದ್ದರು. ತುಂಬಾ ಅಭಿವೃದ್ದಿ ಕೆಲಸವನ್ನು ಮಾಡಿದ್ದಾರೆ. ನಿಮ್ಮಪ್ಪನ ಹೆಸರನ್ನು ಉಳಿಸಿಕೋ ಅನ್ನುತ್ತಾರೆ. ಯುವಕರು ಹೊಸ ಆಲೋಚನೆಯನ್ನು ತೆಗೆದುಕೊಂಡು ಬನ್ನಿ, ನಿಮ್ಮ ಜೊತೆಯಲ್ಲಿ ನಾವಿರುತ್ತೇವೆ ಎಂದು ಎಲ್ಲಾ ವರ್ಗದವರು ನನ್ನನ್ನು ಹರಸುತ್ತಿದ್ದಾರೆ.

 ನಂಬರ್ ಒನ್ ಸಮಸ್ಯೆಯೆಂದರೆ ನೀರಾವರಿ

ನಂಬರ್ ಒನ್ ಸಮಸ್ಯೆಯೆಂದರೆ ನೀರಾವರಿ

ಪ್ರ: ಮೇಲುಕೋಟೆ ಕ್ಷೇತ್ರದ ಪ್ರಮುಖ ಸಮಸ್ಯೆ ಏನು?
ದರ್ಶನ್: ಕ್ಷೇತ್ರದ ನಂಬರ್ ಒನ್ ಸಮಸ್ಯೆಯೆಂದರೆ ನೀರಾವರಿ. ಕಳೆದೆರಡು ವರ್ಷಗಳಿಂದ ಇಲ್ಲಿ ಬರವಿದೆ. ಅದಾದ ನಂತರ ರೈತರ ಸಾಲ. ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಯಾಗುತ್ತಿಲ್ಲ. ಈ ರೀತಿಯ ಪ್ರಮುಖ ಸಮಸ್ಯೆಗಳು ಕ್ಷೇತ್ರದಲ್ಲಿವೆ, ಅದರಲ್ಲಿ ಪ್ರಮುಖವಾಗಿ ನೀರಿನದ್ದೇ ತೊಂದರೆ.

 ಅಭಿವೃದ್ದಿ ವಿಚಾರಕ್ಕೆ ಆದ್ಯತೆ ಕೊಡಬೇಕಾ?

ಅಭಿವೃದ್ದಿ ವಿಚಾರಕ್ಕೆ ಆದ್ಯತೆ ಕೊಡಬೇಕಾ?

ಪ್ರ: ಯುವಕರು ನೀವು, ಜಾತಿ ರಾಜಕಾರಣ ಮಾಡಬೇಕಾ, ಅಭಿವೃದ್ದಿ ವಿಚಾರಕ್ಕೆ ಆದ್ಯತೆ ಕೊಡಬೇಕಾ?
ದರ್ಶನ್: ಯೋಚನೆಯೇ ಮಾಡುವುದು ಬೇಡ, ಅಭಿವೃದ್ದಿ ಕೆಲಸವೇ ಮುಖ್ಯ. ಕ್ಷೇತ್ರದ ಅಭಿವೃದ್ದಿ, ಜನರ ಜೀವನಮಟ್ಟ ಸುಧಾರಣೆಯ ಬಗ್ಗೆ ನೋಡಬೇಕೋ ಹೊರತು ಜಾತಿಯಲ್ಲ. ರೈತ ಸಂಘ ಮತ್ತು ಸ್ವರಾಜ್ ಇಂಡಿಯಾ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಲದೇ ಕೆಲಸ ಮಾಡುತ್ತಿದೆ.

ಪ್ರ: ನರೇಂದ್ರ ಮೋದಿ ಸರಕಾರದ ಬಗ್ಗೆ ನಿಮ್ಮ ಅಭಿಪ್ರಾಯ?
ದರ್ಶನ್: ಎಲ್ಲಾ ಸರಕಾರದಲ್ಲೂ ಅಭಿವೃದ್ದಿ ಕೆಲಸಗಳು ಆಗಿವೆ, ಆಗತ್ತಲೂ ಇದೆ. ಅವರ ಸರಕಾರ ಇನ್ನೂ ಇದೆ, ಇನ್ನೂ ಹೆಚ್ಚಿನ ಅಭಿವೃದ್ದಿ ಕೆಲಸಕ್ಕೆ ಆದ್ಯತೆ ನೀಡಬೇಕಾಗಿದೆ.

 ನಮ್ಮ ವ್ಯವಸಾಯದ ಪದ್ದತಿ ಬದಲಾಗಬೇಕಾ?

ನಮ್ಮ ವ್ಯವಸಾಯದ ಪದ್ದತಿ ಬದಲಾಗಬೇಕಾ?

ಪ್ರ: ಶಾಸಕರಾಗಿ ಆಯ್ಕೆಯಾದರೆ, ಮೇಲುಕೋಟೆ ಕ್ಷೇತ್ರದ ಪ್ರಮುಖ ಆದ್ಯತೆಯ ಕೆಲಸ ಯಾವುದು?
ದರ್ಶನ್: ಮೊದಲು ಜನರನ್ನು ಕೇಳಬೇಕು. ನೀರಿನ ಸಮಸ್ಯೆಯಿದೆ, ಯಾವ ರೀತಿ ಸುಧಾರಣೆ ಮಾಡಬಹುದು. ನಮ್ಮ ವ್ಯವಸಾಯದ ಪದ್ದತಿ ಬದಲಾಗಬೇಕಾ, ಈ ರೀತಿ ಜನರ ಜೊತೆ ಚರ್ಚಿಸಿ ಕೆಲಸ ಮಾಡಬೇಕಾಗುತ್ತದೆ. ರೈತರಿಗೆ ಯಾವ ರೀತಿಯ ಟ್ರೈನಿಂಗ್ ಕೊಡಬಹುದು ಇದನ್ನೆಲ್ಲಾ ಕುಳಿತು ಮೊದಲು ಚರ್ಚಿಸಬೇಕಾಗಿದೆ. ಇದಾದ ನಂತರ ಮೂಲಭೂತ ಸೌಕರ್ಯ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

 ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸವನ್ನು ಮಾಡುತ್ತೇವೆ

ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸವನ್ನು ಮಾಡುತ್ತೇವೆ

ಪ್ರ: ಮೇಲುಕೋಟೆ ಕ್ಷೇತ್ರದ ಜನತೆಯಲ್ಲಿ ನಿಮ್ಮ ಮನವಿ?
ದರ್ಶನ್: ನನ್ನ ಮನವಿ ಏನಂದರೆ, ನನ್ನ ತಂದೆಯವರು ಏನು ಹೋರಾಟ ಮತ್ತು ಕ್ಷೇತ್ರದ ಅಭಿವೃದ್ದಿ ಕೆಲಸ ಮಾಡಿಕೊಂಡು ಬಂದಿದ್ರೋ ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನನ್ನ ತಂದೆ ಹಲವಾರು ಕನಸುಗಳನ್ನು ಕಂಡಿದ್ದರು. ಅದನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪರಿಶ್ರಮವನ್ನು ಹಾಕುತ್ತೇನೆ. ಹೊಸ ಆಲೋಚನೆಗಳ ಮೂಲಕ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸವನ್ನು ಮಾಡುತ್ತೇವೆ. ಇನ್ನೂ ಒಳ್ಳೆಯ ಕೆಲಸವನ್ನು ಮಾಡುತ್ತೇನೆ.

English summary
Melukote assembly constituency in Mandya district: Swaraj India party candidate Darshan Puttannaiah exclusive interview. Darshan is the son of late farmer leader K S Puttannaiah said, he will give the priority to irrigation related work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X