ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರತಾ ಲೋಪ: ಮಮತಾ ಬ್ಯಾನರ್ಜಿ ಆಕ್ರೋಶಕ್ಕೆ ಎಚ್ಡಿಕೆ ಕಸಿವಿಸಿ!

|
Google Oneindia Kannada News

Recommended Video

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಭದ್ರ ಲೋಪದ ಕಾರಣಕ್ಕೆ ಎಚ್ ಡಿ ಕೆ ಬಳಿ ಆಕ್ರೋಶ | Oneindia Kannada

ಬೆಂಗಳೂರು, ಮೇ 24: ಎಚ್ ಡಿ ಕುಮಾರಸ್ವಾಮಿಯವರ ಪ್ರಮಾಣವಚನ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನೆರವೇರಿದೆ. ರಾಷ್ಟ್ರದ ನಾನಾ ರಾಜ್ಯದ ಮುಖ್ಯಮಂತ್ರಿಗಳು, ಗಣ್ಯರು ಆಗಮಿಸಿದ್ದ ಈ ಕಾರ್ಯಕ್ರಮದ ನಂತರ ರಾಜ್ಯದ ನೂತನ ಮುಖ್ಯಮಂತ್ರಿಗೆ ಕಸಿವಿಸಿಯಾಗಿದ್ದು ನಿಜ.

ಕುಮಾರಸ್ವಾಮಿ ಪ್ರಮಾಣದ ಮುಹೂರ್ತ ಹೇಗಿತ್ತು? ಭವಿಷ್ಯ ಹೇಗಿದೆಕುಮಾರಸ್ವಾಮಿ ಪ್ರಮಾಣದ ಮುಹೂರ್ತ ಹೇಗಿತ್ತು? ಭವಿಷ್ಯ ಹೇಗಿದೆ

ನಿನ್ನೆ ವಿಧಾನಸೌಧದ ಸುತ್ತ ಮುತ್ತ ಮತ್ತು ಬೆಂಗಳೂರಿನ ಹಲವೆಡೆ ಸುರಿದ ಭಾರೀ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ಥವಾಗಿತ್ತು. ಬೆಂಗಳೂರಿನ ಟ್ರಾಫಿಕ್ಕಿನ ವಿರಾಟ ದರ್ಶನ ಪಶ್ಚಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೂ ಆಯಿತು! ರಸ್ತೆಯ ಮೇಲೆ ತಟಸ್ಥವಾಗಿ ನಿಂತ ವಾಹನಗಳನ್ನು ಕಂಡು ರೋಸಿಹೋದ ಮಮತಾ ಬ್ಯಾನರ್ಜಿ ಚಾಲುಕ್ಯ ವೃತ್ತದಿಂದ, ವಿಧಾನಸೌಧದವರೆಗೆ ನಡೆದೇ ಬಂದರು! ಇನ್ನೂ ಬೇಸರದ ಸಂಗತಿಯೆಂದರೆ ಅವರೊಂದಿಗೆ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ!

Mamata Banerjee complains about failure in security in HDKs oath taking ceremony

ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಳಿ ಟ್ರಾಫಿಕ್ ಕುರಿತು ತಮ್ಮ ಕಹಿ ಅನುಭವಗಳನ್ನು ಹೊರಹಾಕಿದ್ದ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಕಸಿವಿಸಿಗೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಮಡ ಮರುದಿನವೇ ಬೆಳ್ಳಂಬೆಳಗ್ಗೆ ತಮ್ಮ ಜೆಪಿ ನಗರದ ನಿವಾಸಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಮತ್ತು ಗುಪ್ತಚರ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಅವರನ್ನು ಕರೆದು ಭದ್ರತಾ ವೈಫಲ್ಯದ ಕುರಿತು ಪ್ರಶ್ನಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡುವಂತೆಯೂ ತಿಳಿಸಿದ್ದಾರೆ.

English summary
Karnataka election results 2018: West Bengal chief minister Mamata Banerjee blames failure in security system in Bengaluru on oath taking ceremony of HD Kumaraswamy as Chief minister of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X