ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ಆದೇಶ : ಶನಿವಾರ ಬಹುಮತ ಸಾಬೀತು ಮಾಡಬೇಕು

By Gururaj
|
Google Oneindia Kannada News

ಬೆಂಗಳೂರು, ಮೇ 18 : ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಶನಿವಾರ ಸಂಜೆ 4 ಗಂಟೆಗೆ ಬಿಜೆಪಿ ಸರ್ಕಾರ ಬಹುಮತ ಸಾಬೀತು ಮಾಡಬೇಕು ಎಂದು ಆದೇಶ ನೀಡಿದೆ.

ಯಡಿಯೂರಪ್ಪ ಬರೆದ ಎರಡು ಪತ್ರಗಳು ಸುಪ್ರೀಂ ಟೇಬಲ್ ಮೇಲೆಯಡಿಯೂರಪ್ಪ ಬರೆದ ಎರಡು ಪತ್ರಗಳು ಸುಪ್ರೀಂ ಟೇಬಲ್ ಮೇಲೆ

ಶುಕ್ರವಾರ ತ್ರಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಬಿಜೆಪಿ ಮೇ 15, 16ರಂದು ರಾಜ್ಯಪಾಲರಿಗೆ ನೀಡಿದ್ದ ಪತ್ರದ ಪ್ರತಿಯನ್ನು ಕೋರ್ಟ್‌ಗೆ ನೀಡಲಾಯಿತು. 2018ರ ಕರ್ನಾಟಕ ವಿಧಾಸನಸಭೆ ಚುನಾವಣೆಯಲ್ಲಿ 104 ಸ್ಥಾನಗಳಿಸಿದ್ದ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ.

ರಾಜ್ಯಪಾಲರ ನಿರ್ಣಯದ ವಿರುದ್ಧ ಮಧ್ಯರಾತ್ರಿ ಸುಪ್ರೀಂ ಬಾಗಿಲು ಬಡಿದ ಕಾಂಗ್ರೆಸ್‌ರಾಜ್ಯಪಾಲರ ನಿರ್ಣಯದ ವಿರುದ್ಧ ಮಧ್ಯರಾತ್ರಿ ಸುಪ್ರೀಂ ಬಾಗಿಲು ಬಡಿದ ಕಾಂಗ್ರೆಸ್‌

Karnataka Election results : Supreme Court hearing begins

ಕೋರ್ಟ್ ಕಲಾಪದಲ್ಲಿ ನಡೆದಿದ್ದೇನು?

Newest FirstOldest First
12:18 PM, 18 May

ಸುಪ್ರೀಂಕೋರ್ಟ್ ಆದೇಶದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, 'ನ್ಯಾಯಾಲಯದ ಆದೇಶ ಪಾಲಿಸುತ್ತೇವೆ. ಶನಿವಾರ ವಿಧಾನಸಭೆ ಕಲಾಪ ನಡೆಸುತ್ತೇವೆ. ನಮಗೆ ಬಹುಮತ ದೊರೆಯುವ ವಿಶ್ವಾಸವಿದೆ' ಎಂದು ಹೇಳಿದರು.
11:59 AM, 18 May

ಬಿ.ಎಸ್.ಯಡಿಯೂರಪ್ಪ ಆಡಳಿತಾತ್ಮಕ ನಿರ್ಧಾರವನ್ನು ಕೈಗೊಳ್ಳಬಾರದು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ
11:56 AM, 18 May

ಎಲ್ಲಾ ಶಾಸಕರು ಕಡ್ಡಾಯವಾಗಿ ಪ್ರಮಾಣ ವಚನ ಸ್ವೀಕಾರ ಮಾಡಬೇಕು. ಸಿಸಿಟಿವಿ ಅಳವಡಿಸಿ ವಿಶ್ವಾಸ ಮತ ಯಾಚನೆಯನ್ನು ಮಾಡಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ
11:46 AM, 18 May

ಗೌಪ್ಯ ಮತದಾನಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ
11:45 AM, 18 May

ವಿಶ್ವಾಸ ಮತವನ್ನು ಹೇಗೆ ಯಾಚನೆ ಮಾಡಬೇಕು? ಎಂದು ಹಂಗಾಮಿ ಸ್ಪೀಕರ್ ನಿರ್ಧರಿಸಬೇಕು ಎಂದು ಕೋರ್ಟ್ ಹೇಳಿದೆ
11:42 AM, 18 May

ಶನಿವಾರ ಸಂಜೆ 4 ಗಂಟೆಗೆ ಬಹುಮತ ಸಾಬೀತು ಮಾಡಿ ಎಂದು ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠ ಆದೇಶ ನೀಡಿದೆ
11:39 AM, 18 May

ವಿಶ್ವಾಸ ಮತ ಯಾಚನೆಗೆ ಕಾಲಾವಕಾಶ ನೀಡುವಂತೆ ಬಿಜೆಪಿ ಮಾಡಿದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್
Advertisement
11:33 AM, 18 May

ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸ ಮತ ಯಾಚನೆ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ
11:32 AM, 18 May

ವಿಶ್ವಾಸ ಮತ ಯಾಚನೆಗೆ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅರ್ಜಿದಾರರಿಗೆ ಸ್ಪಷ್ಟಪಡಿಸಿದೆ
11:30 AM, 18 May

ಶನಿವಾರವೇ ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡಬಾರದು ಎಂದು ಬಿಜೆಪಿ ಪರ ವಕೀಲರು ವಾದ ಮಂಡನೆ ಮಾಡಿದರು
11:22 AM, 18 May

ಎಚ್.ಡಿ.ಕುಮಾರಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ಪರವಾಗಿ ವಾದ ಮಂಡನೆ ಆರಂಭಿಸಿದ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್
11:19 AM, 18 May

ಎಲ್ಲಾ ಶಾಸಕರು ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಹಾಜರಾಬೇಕು ಎಂದು ಡಿಜಿಪಿಗೆ ಆದೇಶ ನೀಡುತ್ತೇವೆ. ಶಾಸಕರಿಗೆ ರಕ್ಷಣೆ ನೀಡುವಂತೆ ಸೂಚಿಸುತ್ತೇವೆ ಎಂದು ಹೇಳಿದ ಕೋರ್ಟ್
Advertisement
11:18 AM, 18 May

ನೀಡಿರುವ ಪತ್ರದಲ್ಲಿ ಬಹುಮತ ಇಲ್ಲ. 15 ದಿನ ಅವಕಾಶ ಕೊಟ್ಟರೆ ಬಹುಮತವನ್ನು ಸೃಷ್ಟಿ ಮಾಡುತ್ತೀರಿ ಎಂದು ಹೇಳಿದ ಕೋರ್ಟ್
11:14 AM, 18 May

ಬಿಜೆಪಿ ಪತ್ರ ನೋಡಿದ ಕೋರ್ಟ್ ಬಿಜೆಪಿಗೆ ಶಾಸಕರ ಸಂಪೂರ್ಣ ಬಹುಮತವಿರುವ ಪತ್ರವನ್ನು ನೀಡುವಂತೆ ಕೇಳಿದೆ
11:13 AM, 18 May

ಮೊದಲು ಬಿಜೆಪಿ ಮೇ 15, 16ರಂದು ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ನೀಡಿದ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಿತು. ಇದರಲ್ಲಿ 104 ಶಾಸಕರ ಬೆಂಬಲ ನಮಗೆ ಇದೆ ಎಂದು ಹೇಳಿದ್ದು, ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ
11:11 AM, 18 May

ಅರ್ಜಿದಾರರಿಗೆ 2 ಆಯ್ಕೆಗಳನ್ನು ಸುಪ್ರೀಂಕೋರ್ಟ್ ನೀಡಿದೆ. ಯಾವ ಆಯ್ಕೆಗೆ ಒಪ್ಪಿಗೆ ಸಿಗಲಿದೆ ಎಂದು ಕಾದು ನೋಡಬೇಕು
11:10 AM, 18 May

ರಾಜ್ಯಪಾಲರು ಅನುಮತಿ ನೀಡಿದ ಬಗ್ಗೆ ವಿಚಾರಣೆ, ನಾಳೆಯೇ ವಿಶ್ವಾಸ ಮತ ಯಾಚನೆಗೆ ಸೂಚನೆ ನೀಡುವುದು ನಮ್ಮ ಮುಂದೆ ಎರಡು ಆಯ್ಕೆಗಳಿವೆ ಎಂದು ಹೇಳಿದ ಕೋರ್ಟ್
11:07 AM, 18 May

ಯಾರಿಗೆ ಮೊದಲು ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂಬುದನ್ನು ಕೋರ್ಟ್ ತೀರ್ಮಾನಿಸಬೇಕು ಎಂದು ಕಾಂಗ್ರೆಸ್‌ ಪರ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡನೆ ಮಾಡಿದರು
11:05 AM, 18 May

ನಾವು ಯಾರಿಗೂ ಕಾಲಾವಕಾಶ ನೀಡುವುದಿಲ್ಲ. ನಾಳೆಯೇ ಬಹುಮತ ಸಾಬೀತು ಪಡಿಸಿ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ
11:03 AM, 18 May

ಬಿಜೆಪಿಗೆ ಬಹುಮತ ವಿರುವ ಪತ್ರವನ್ನು ನೀಡಿ ಎಂದು ಕೋರ್ಟ್ ಬಿಜೆಪಿಗೆ ಕೇಳಿದೆ
11:02 AM, 18 May

ಬಿಜೆಪಿ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪರವಾಗಿ ಪಿ.ಚಿದಂಬರಂ, ಕೇಂದ್ರ ಸರ್ಕಾರದ ಪರವಾಗಿ ಎಜಿ ಕೆ.ಕೆ.ವೇಣುಗೋಪಾಲ್ ಅವರು ವಾದ ಮಂಡಿಸುತ್ತಿದ್ದಾರೆ.
10:59 AM, 18 May

ಎಸ್.ಕೆ.ಸಿಕ್ರಿ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ಕಾಂಗ್ರೆಸ್-ಜೆಡಿಎಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಬಿಜೆಪಿ ಮೇ 15, 16ರಂದು ರಾಜ್ಯಪಾಲರಿಗೆ ನೀಡಿದ್ದ ಪತ್ರವನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿದೆ.

English summary
Supreme Court directed for floor test in Karnataka Assembly on May 19, 2018 at 4 PM. After hearing Congress-JD(S) petition against Governor inviting BJP to form government. B.S.Yeddyurappa take oath as the 24th Chief Minister of Karnataka on May 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X