ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ

|
Google Oneindia Kannada News

Recommended Video

      ಮೇ 23ರಂದು ಕರ್ನಾಟಕದ 25ನೇ ಮುಖ್ಯಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿ | Oneindia Kannada

      ಬೆಂಗಳೂರು, ಮೇ 23: ಕರ್ನಾಟಕ ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಇಂದು(ಮೇ 23) ವಿಧಾನಸೌಧದ ಎದುರಲ್ಲಿ ಪ್ರಮಾಣವಚನ ಸ್ವೀಕರಿಸಿದರು.

      ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿದರು.

      ಪ್ರಮಾಣವಚನಕ್ಕೂ ಮುನ್ನ ಹಲವು ದೇವಾಲಯಗಳಿಗೆ ಭೇಟಿ ನೀದ್ದ ಕುಮಾರಸ್ವಾಮಿ ಇಂದು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2006 ರ ಫೆಬ್ರವರಿಯಿಂದ 2007ರ ಅಕ್ಟೋಬರ್ ವರೆಗೆ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಕೇಂದ್ರದ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

      ಪ್ರಮಾಣ ವಚನಕ್ಕೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆಯಲಿರುವ ಎಚ್ ಡಿಕೆಪ್ರಮಾಣ ವಚನಕ್ಕೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆಯಲಿರುವ ಎಚ್ ಡಿಕೆ

      ಮೇ 15 ರಂದು ಹೊರಬಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಅತಂತ್ರ ವಿಧಾನಸಭೆ ತಲೆದೂರಿದ್ದರಿಂದ 104 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಸರ್ಕಾರ ರಚಿಸಲು ವಿಫಲವಾಗಿತ್ತು.

      LIVE: HD Kumaraswamy to be sworn in as chief minister of Karnataka

      In Pics: ಪದಗ್ರಹಣಕ್ಕೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಕುಮಾರಸ್ವಾಮಿ

      ಈ ಸಂದರ್ಭದಲ್ಲಿ 78 ಸ್ಥಾನ ಗೆದ್ದ ಕಾಂಗ್ರೆಸ್, ಮತ್ತು 2 ಸ್ಥಾನ ಗೆದ್ದ ಪಕ್ಷೇತರರು 38 ಸ್ಥಾನ ಗೆದ್ದ ಜೆಡಿಎಸ್ ಪಕ್ಷಕ್ಕೆ ಸರ್ಕಾರ ರಚಿಸಲು ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದರಿಂದ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

      Newest FirstOldest First
      6:28 PM, 23 May

      ರಾಷ್ಟ್ರದ ವಿವಿಧ ನಾಯಕರು ಇಂದು ಕರ್ನಾಟಕಕ್ಕೆ ಸಂದೇಶ ಕೊಡಲು ಬಂದಿದ್ದರು, ನಾವೆಲ್ಲಾ ಒಂದು ಎಂಬ ಸಂದೇಶ ಕೊಡಲು ಇಲ್ಲಿಗೆ ಬಂದಿದ್ದಾರೆ, ಈ ಸರ್ಕಾರ ಸ್ಥಿರವಾದ ಸರ್ಕಾರ.
      6:26 PM, 23 May

      ಲಿಂಗಾಯತ-ವೀರಶೈವ ವಿವಾದಕ್ಕಿಂತಲೂ ದೊಡ್ಡ ಸಮಸ್ಯೆ ನನ್ನ ಮುಂದಿದೆ, ಜನರ ಸಮಸ್ಯೆಯೇ ದೊಡ್ಡದು ನನಗೆ. ಎರಡೂ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಮಾಡುತ್ತೇವೆ.
      6:19 PM, 23 May

      ಮೋದಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದೇವೆ, ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ, ಇಲ್ಲಿಂದ ನಿಮ್ಮ ಪಥನ ಶುರು.
      6:18 PM, 23 May

      ರಾಜಕೀಯ ಹೇಳಿಕೆ ಕೊಡುವುದನ್ನು ಸ್ವಾಮೀಜಿಗಳು ನಿಲ್ಲಿಸಲಿ, ಸ್ವಾಮೀಜಿಗಳ ಕೆಲಸ ರಾಜಕೀಯವಲ್ಲ, ರಾಜಕೀಯ ಟೀಕೆ ಅವರ ಕರ್ತವ್ಯವಲ್ಲ, ಅವರು ಸರ್ಕಾರಕ್ಕೆ ಮಾರ್ಗದರ್ಶನ ಮಾಡಲಿ, ಟೀಕೆ ಮಾಡುವಂತಿದ್ದರೆ ಸ್ವಾಮೀಜಿಗಳು ರಾಜಕೀಯಕ್ಕೆ ಬರಲಿ.
      6:15 PM, 23 May

      ಈಗ ಸಮ್ಮಿಶ್ರ ಸರ್ಕಾರದಲ್ಲಿ ಏಕಾಂಗಿಯಾಗಿ ತೀರ್ಮಾನ ಸಾಧ್ಯವಿಲ್ಲ, ಹಾಗಾಗಿ ವಿರೋಧ ಪಕ್ಷಕ್ಕೆ ಅಸ್ತ್ರವನ್ನೇ ಕೊಡುವುದಿಲ್ಲ, ನೀಲಿ ನಕ್ಷೆ ಇದೆ, ಸಾಲಮನ್ನದ ಬ್ಲೂ ಪ್ರಿಂಟ್ ತಯಾರಿದೆ, ನನ್ನ ಕಚೇರಿ ತೆರದಿರುತ್ತದೆ, ನೇರವಾಗಿ ಬರಬಹುದು, ಜನಸ್ನೇಹಿ ಸರ್ಕಾರವಾಗಿ ನಡೆಯುತ್ತದೆ, ಜೊತೆಗೂಡಿ ಕೆಲಸ ಮಾಡುತ್ತೇವೆ.
      6:15 PM, 23 May

      ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾದ ಪರಿಸ್ಥಿತಿಯಲ್ಲಿದ್ದೇನೆ, ಜನರ ನಿರೀಕ್ಷೆ ಹುಸಿಗೊಳಸದೆ, ಪ್ರಣಾಳಿಕೆ, ರೈತರಿಗೆ ಇರಬಹುದು, ನಿರುದ್ಯೋಗ ನೀಗುವದಕ್ಕೆ ಇರಬಹುದು, ಹಿರಿಯ ನಾಗರೀಕರ ಕಾರ್ಯಕ್ರಮ, ವಸತಿ, ಶಿಕ್ಷಣ ನನ್ನದೆ ಆದ ಕಲ್ಪನೆಗಳು ಇವೆ. ಕಾಂಗ್ರೆಸ್‌ ಪ್ರಣಾಳಿಕೆಗಳೂ ಇವೆ. ಆ ಕಾರ್ಯಕ್ರಮಗಳನ್ನೂ ಮುಂದುವರೆಸುತ್ತೇನೆ, ಅವರ ಪ್ರಣಾಳಿಕೆ ಭರವಸೆಗಳನ್ನೂ ಜಾರಿಗೆ ತರುತ್ತೇನೆ.
      5:58 PM, 23 May

      ಜನರ ನಿರೀಕ್ಷೆ ಹುಸಿಗೊಳಸದೆ, ಪ್ರಣಾಳಿಕೆ, ರೈತರಿಗೆ ಇರಬಹುದು, ನಿರುದ್ಯೋಗ ನೀಗುವದಕ್ಕೆ ಇರಬಹುದು, ಹಿರಿಯ ನಾಗರೀಕರ ಕಾರ್ಯಕ್ರಮ, ವಸತಿ, ಶಿಕ್ಷಣ ನನ್ನದೆ ಆದ ಕಲ್ಪನೆಗಳು ಇವೆ. ಕಾಂಗ್ರೆಸ್‌ ಪ್ರಣಾಳಿಕೆಗಳೂ ಇವೆ. ಆ ಕಾರ್ಯಕ್ರಮಗಳನ್ನೂ ಮುಂದುವರೆಸುತ್ತೇನೆ, ಅವರ ಪ್ರಣಾಳಿಕೆ ಭರವಸೆಗಳನ್ನೂ ಜಾರಿಗೆ ತರುತ್ತೇನೆ.
      Advertisement
      5:56 PM, 23 May

      20-25 ರಾಷ್ಟ್ರ ಮಟ್ಟದ ಮುಖಂಡರು, ಕಾಂಗ್ರೆಸ್‌ನ ಹಿರಿಯರುಗಳು ಪ್ರಮಾಣ ವಚನ ಸಮಾರಂಭದ ವೇದಿಕೆ ಮೇಲೆ ಒಟ್ಟಾಗಿ ಭಾಗವಹಿಸಿರುವುದು ಹೊಸ ಅಭಿಪ್ರಾಯ. ಮಹಾಒಕ್ಕೂಟಕ್ಕೆ ಇದು ಮುನ್ನಡೆ.
      5:55 PM, 23 May

      ಪ್ರಚಾರದಲ್ಲಿ ಹೇಳಿದ್ದೆ ವಿರೋಧ ಪಕ್ಷದಲ್ಲಿರುತ್ತೇನೆ ಎಂದು. ಸಾಂದರ್ಭಿಕ ಶಿಶು, ಅನಿವಾರ್ಯತೆ ಇದೆ, ರಾಷ್ಟ್ರದ ನಾಯಕರು ಫಲಿತಾಂಶದ ನಾಯಕರು ಮೈತ್ರಿ ಸಲಹೆ ನೀಡಿದರು, ದೇಶವನ್ನು ಕಾಪಾಡುವ ದೃಷ್ಠಿಯಿಂದ ಅನಿವಾರ್ಯವಾಗಿ ಕಾಂಗ್ರೆಸ್‌ ಜೊತೆ ಹೋಗಿದ್ದೇನೆ.
      5:54 PM, 23 May

      ಬಿಜೆಪಿಗೆ ಸದನದಲ್ಲೇ ಉತ್ತರ ಕೊಡುತ್ತೀನಿ, 12 ವರ್ಷಗಳ ಹಿಂದೆ ನಾನೇ ಸರ್ಕಾರ ಒಡೆದಿದ್ದೆ, ಈಗ ವಿಶ್ವಾಸ ಮೂಡುತ್ತದೆಯಾ? ಎಂಬ ಅನುಮಾನ ಜನರಲ್ಲಿದೆ. ಅತ್ಯಂತ ಸುಭದ್ರವಾದ ಸರ್ಕಾರವಾಗಿ ನಡೆಯುತ್ತದೆ, ಭಿನ್ನಾಬಿಪ್ರಾಯಗಳಿಗೆ ಅವಕಾಶ ಕೊಡದೆ, ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕಾರ್ಯ ಮಾಡಲಿದೆ.
      5:48 PM, 23 May

      ಅವರ ಶಾಸಕರ ಬೆಂಬಲದಲ್ಲಿ ನನ್ನ ನಾಯಕತ್ವದಲ್ಲಿ ಸರ್ಕಾರ ರಚನೆಗೆ ಬೆಂಬಲ ಸೂಚಿಸಿರುವುದಕ್ಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಮತ್ತು ಇತರ ಇತರ ರಾಷ್ಟ್ರ ನಾಯಕರುಗಳಿಗೆ ಹಾಗೂ ರಾಜ್ಯದ ಪರಮೇಶ್ವರ್, ಸಿದ್ದರಾಮಯ್ಯ, ಖರ್ಗೆ, ಶಿವಕುಮಾರ್ ಅವರಿಗೆ ಧನ್ಯವಾದಗಳು.
      5:47 PM, 23 May

      ಇಷ್ಟು ದಿನ ನಡೆದ ರಾಜಕೀಯ ಘಟನೆಗಳ ಇಣುಕು ನೋಟ ನೀಡಿದ ಸಿಎಂ ಕುಮಾರಸ್ವಾಮಿ.
      Advertisement
      5:43 PM, 23 May

      ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕಾರದ ಬಳಿಕ ವಿಧಾನಸೌಧದಲ್ಲಿ ಮೊದಲ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
      5:41 PM, 23 May

      ಪ್ರಮಾಣ ವಚನ ಮುಗಿದ ಕೂಡಲೇ ಹಿಲ್ಟನ್‌ ಹೊಟೆಲ್‌ಗೆ ವಾಪಾಸ್ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು.
      4:45 PM, 23 May

      ಅಮ್ಮನ ಕಾಲಿಗೆ ಕಾಲಿಗೆ ನಮಸ್ಕರಿಸಿದ ನೂತನ ಸಿಎಂ ಎಚ್ ಡಿ ಕುಮಾರಸ್ವಾಮಿ
      4:40 PM, 23 May

      ದೇವರು ಮತ್ತು ಕನ್ನಡನಾಡಿನ ಜನರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕುಮಾರಸ್ವಾಮಿ
      4:39 PM, 23 May

      ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ ರಾಜ್ಯಪಾಲ ವಾಜುಬಾಯ್ ವಾಲಅ
      4:37 PM, 23 May

      ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದರು.
      4:36 PM, 23 May

      ಕರ್ನಾಟಕ ರಾಜ್ಯದ 25 ನೇ ಮುಖ್ಯಮಂಗತ್ರಿಯಾಗಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ
      4:35 PM, 23 May

      ಪ್ರಮಾಣವಚನ ಮತ್ತು ಗೌಪ್ಯತೆ ಬೋಧನೆ ಮಾಡಿದ ರಾಜ್ಯಪಾಲ ರಾಜ್ಯಪಾಲ ವಜುಬಾಯ್ ವಾಲಾ
      4:34 PM, 23 May

      2ನೇ ಬಾರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎಚ್ ಡಿ ಕುಮಾರಸ್ವಾಮಿ.
      4:30 PM, 23 May

      ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತಿದೆ.
      4:29 PM, 23 May

      ರಾಜ್ಯಪಾಲ ವಜುಬಾಯ್ ವಾಲಾ ಅವರನ್ನು ಸ್ವಾಗತಿಸಿದ ಕುಮಾರಸ್ವಾಮಿ ಮತ್ತು ಪರಮೇಶ್ವರ್
      4:28 PM, 23 May

      ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲ ವಜುಬಾಯಿ ವಾಲಾ
      4:27 PM, 23 May

      ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ
      4:26 PM, 23 May

      ಪಂಚೆ ಶರ್ಟ್ ತೊಟ್ಟು ಪ್ರಮಾಣವಚನಕ್ಕೆ ಸಿದ್ಧರಾಗಿರುವ ಕುಮಾರಸ್ವಾಮಿ
      4:19 PM, 23 May

      ವೇದಿಕೆ ಆಗಮಿಸಿದ ನಿಯೋಜಿತ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್
      4:18 PM, 23 May

      ವಿಧಾಸೌಧದ ವೇದಿಕೆಗೆ ಆಗಮಿಸುತ್ತಿರುವ ನಿಯೋಜಿತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ
      4:15 PM, 23 May

      ವಿಧಾನಸೌಧಕ್ಕೆ ಆಗಮಿಸಿದ ದೇವೇಗೌಡರು ಮತ್ತು ಕುಟುಂಬ
      4:10 PM, 23 May

      ಎಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ವಿಧಾನಸೌಧಕ್ಕೆ ಆಗಮಿಸಿದ ಮಾಯಾವತಿ.
      READ MORE

      English summary
      Karnataka Election results 2018: JDS state chief HD Kumaraswamy to be sworn in as 25th chief minister of Karnataka today at 9 am. Here are LIVE updates. LIVE: ಎಚ್ ಡಿ ಕುಮಾರಸ್ವಾಮಿ ಪ್ರಮಾಣವಚನಕ್ಕೆ ಕ್ಷಣಗಣನೆ
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X