ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಎಲ್‌ಐಸಿ ಏಜೆಂಟ್ ಅಂತೆ

By Manjunatha
|
Google Oneindia Kannada News

ತುಮಕೂರು, ಏಪ್ರಿಲ್ 24: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಶನಿವಾರದಂದು ಕೊರಟಗೆರೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ನಾಮಪತ್ರದ ಜೊತೆಗೆ ಆಸ್ತಿ ವಿವರ ಮತ್ತು ವೈಯಕ್ತಿಕ ದಾಖಲೆಗಳನ್ನು ಸಲ್ಲಿಸಿದ್ದ ದಾಖಲೆಗಳ ಪ್ರಕಾರ ಪರಮೇಶ್ವರ್ ಅವರ ಅಧಿಕೃತ ಉದ್ಯೋಗ 'ಎಲ್‌ಐಸಿ ಏಕೆಂಟ್‌'.

ನಾಮತ್ರದಲ್ಲಿ ಅವರು ತಾವೊಬ್ಬ ಎಲ್‌ಐಸಿ ಏಜೆಂಟ್ ಹಾಗೂ ಕೃಷಿ ಸಲಹೆಗಾರ ಎಂದು ನಮೂದಿಸಿದ್ದು, ಪರಮೇಶ್ವರ್ ಅವರ ಪತ್ನಿ ಕೆ.ಪರಮೇಶ್ವರಿ ಅವರ ವೃತ್ತಿ ಕಲಾವಿದೆ ಎಂದು ನಮೂದಿಸಲಾಗಿದೆ.

ವಿಶೇಷವೆಂದರೆ ಪರಮೇಶ್ವರ್ ಹಾಗೂ ಅವರ ಪತ್ನಿಯ ಹೆಸರಲ್ಲಿ ಯಾವುದೇ ಕೃಷಿ ಭೂಮಿ, ವಾಣಿಜ್ಯ ಕಟ್ಟಡಗಳು ಪರಮೇಶ್ವರ್ ಅವರ ಕೈಯಲ್ಲಿರುವ ನಗದು ಕೇವಲ ರೂ.26, 635 ಪತ್ನಿ ಕೆ.ಪರಮೇಶ್ವರಿ ಬಳಿ ಇರುವುದು ರೂ.10,840 ಅಷ್ಟೆ.

KPCC president G.Parameshwars is a LIC agent by job

ಪರಮೇಶ್ವರ್ ಅವರ ಒಟ್ಟು ಚರಾಸ್ತಿಯ ಮೌಲ್ಯ 3,47,43,770 (ಮೂರು ಕೋಟಿ ನಲವತ್ತೇಳು ಲಕ್ಷ ನಲವತ್ತ ಮೂರು ಸಾವಿರ ಏಳುನೂರ ಎಪ್ಪತ್ತು) ಕೆ.ಪರಮೇಶ್ವರಿ ಅವರ ಚರಾಸ್ತಿ ಮೌಲ್ಯ 3,32,94,305 (ಮೂರು ಕೋಟಿ ಮುವತ್ತೆರಡು ಲಕ್ಷ ತೊಂಬತ್ತನಾಲ್ಕು ಸಾವಿರ ಮುನ್ನೂರ ಐದು).

ಪರಮೇಶ್ವರ್ ಅವರ ಒಟ್ಟಿ ಸ್ಥಿರಾಸ್ತಿಯ ಮೌಲ್ಯ ರೂ.5,88,48,176. ಕೆ.ಪರಮೇಶ್ವರಿ ಅವರ ಒಟ್ಟು ಸ್ಥಿರಾಸ್ತಿ ಮೌಲ್ಯ ರೂ.5,73,98,702. ಪರಮೇಶ್ವರ್ ಅವರ ಬಳಿ ಒಂದು ಟಾಟಾ ಸಫಾರಿ ಕಾರು ಮತ್ತು ಒಂದು ಸ್ಕೋಡಾ ಕಾರಿದೆ. ಕೆ.ಪರಮೇಶ್ವರಿ ಅವರ ಬಳಿ ಎರಡು ಕೋಟಿ ರೂಪಾಯಿ ಮೌಲ್ಯದ ಒಂದು ಪೋರ್ಷ್ ಕಾರಿದೆ.

ಪರಮೇಶ್ವರ್‌ ಅವರು ರೂ.4,88,66,878 ಕೋಟಿ ಸಾಲ ಮಾಡಿದ್ದರೆ, ಪತ್ನಿ ಕೆ.ಪರಮೇಶ್ವರಿ ಅವರು ರೂ.4,44,37,350 ಸಾಲ ಮಾಡಿದ್ದಾರೆ.

ಪರಮಶೇಶ್ವರ್ ಅವರು ಕೃಷಿ ವಿಷಯದಲ್ಲಿ ಎಂಎಸ್‌ಸಿ ಮಾಡಿದ್ದು ಸಿಎಚ್‌ಡಿ ಎಂಬ ಉನ್ನತ ಶಿಕ್ಷಣವನ್ನು ಆಸ್ಟ್ರೇಲಿಯಾದಲ್ಲಿ ಪೂರೈಸಿದ್ದಾರೆ.

English summary
KPCC president G.Parameshwar is filed nomination from koratagere. As per his nomination details he is a LIC Agent by job. he his a agriculture adviser also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X