ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮೀರ್ ಅಹ್ಮದ್ ಗೂ ಕರೆ ಮಾಡಿತ್ತು ಬಿಜೆಪಿ!

|
Google Oneindia Kannada News

Recommended Video

ಬಿಜೆಪಿ ಸೇರೋ ಬಗ್ಗೆ ಜಮೀರ್ ಏನ್ ಹೇಳಿದ್ದಾರೆ ನೋಡಿ | Oneindia Kannada

ಬೆಂಗಳೂರು, ಮೇ 17: ಬಹುಮತ ಸಾಬೀತುಪಡಿಸುವ ಒತ್ತಡದಲ್ಲಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಗೆ ಕರೆ ಮಾಡಿದ್ದರು ಎಂದು ಸ್ವತಃ ಜಮೀರ್ ಅಹ್ಮದ್ ತಿಳಿಸಿದ್ದಾರೆ.

"ನನಗೂ ಕರೆ ಬಂದಿತ್ತು. ಆದರೆ ನಾನು ಮತ್ತು ಕುಮಾರಸ್ವಾಮಿ ಇಬ್ಬರೂ ಹಳೇ ದೋಸ್ತಿಗಳು. ನಾವು ಮತ್ತೆ ಒಂದಾಗುತ್ತಿದ್ದೇವೆ. ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ" ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ.

ಎಚ್‌ಡಿಕೆ ಮುಖ್ಯಮಂತ್ರಿಯಾದ್ರೆ, ಎಂಬ ಪ್ರಶ್ನೆಗೆ ಜಮೀರ್ ಕೊಟ್ಟ ಉತ್ತರಎಚ್‌ಡಿಕೆ ಮುಖ್ಯಮಂತ್ರಿಯಾದ್ರೆ, ಎಂಬ ಪ್ರಶ್ನೆಗೆ ಜಮೀರ್ ಕೊಟ್ಟ ಉತ್ತರ

ಜೆಡಿಎಸ್ ನಲ್ಲಿದ್ದ ಜಮೀರ್ ಅಹ್ಮದ್ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದರು. ನಂತರ ಕಾಂಗ್ರೆಸ್ಸಿನಿಂದ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಗೆಲುವು ಸಾಧಿಸಿದ್ದರು.

Karnataka results: Zameer Ahmed claims BJP leaders called him and forced to join BJP

ಮೇ 12 ರಂದು ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 15 ರಂದು ಹೊರಬಿದ್ದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ಕಾಂಗ್ರೆಸ್ 78 ಸ್ಥಾನ, ಜೆಡಿಎಸ್ 38 ಸ್ಥಾನ ಮತ್ತು ಇತರರು 2 ಸ್ಥಾನ ಗೆದ್ದಿದ್ದರು. ಇದೀಗ 104 ಸ್ಥಾನ ಗೆದ್ದಿರುವ ಬಿಜೆಪಿ ಬಹುಮತ ಸಾಬೀತು ಪಡಿಸಬೇಕಿದ್ದು, ಎಂಟು ಶಾಸಕರ ಅಗತ್ಯವಿದೆ.

English summary
Karnataka Elections results: To cross magic number in Karnataka assembly, BJP is trying every possible ways. 'As a part of it BJP leaders called me', Congress's Chamarajpet MLA Zameer Ahmed said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X