ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ದಿನಾಂಕ ಸೋರಿಕೆಯಾಗಿರಲಿಲ್ಲ: ಸಮಿತಿ ವರದಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ಸೋರಿಕೆ ಕೇವಲ ಊಹೆಯ ಮೇಲೆ ನಡೆದಿರುವುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗವು ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟಿಸುವುದಕ್ಕೆ ಮುನ್ನವೇ ಕೆಲವು ರಾಜಕೀಯ ಪಕ್ಷಗಳು ಚುನಾವಣಾ ವೇಳಾಪಟ್ಟಿಯ ಕುರಿತು ಹೇಳಿಕೆ ನೀಡಿದ್ದವು. ಈ ಸಂಬಂಧ ಆಯೋಗವು ತನಿಖೆಗೆ ಸಮಿತಿಯೊಂದನ್ನು ರಚಿಸಿತ್ತು.

ಕಾಂಗ್ರೆಸ್ ನ ಚುನಾವಣೆ ಗುರುತಿಗೇ ಕುತ್ತು! ಏಪ್ರಿಲ್ಕಾಂಗ್ರೆಸ್ ನ ಚುನಾವಣೆ ಗುರುತಿಗೇ ಕುತ್ತು! ಏಪ್ರಿಲ್

ಚುನಾವಣಾ ವೇಳಾಪಟ್ಟಿ ಕುರಿತು ಮಾಧ್ಯಮಗಳು ಹಿಂದಿನಿಂದಲೂ ಊಹೆಗಳನ್ನು ಮಾಡಿಕೊಂಡು ಬಂದಿವೆ. ಈ ಪ್ರಕರಣದಲ್ಲಿಯೂ ಅದೇ ರೀತಿ ದಿನಾಂಕ ಊಹಿಸುವ ಪ್ರಯತ್ನ ನಡೆದಿದೆ ಎಂದು ಸಮಿತಿಯ ವರದಿ ಹೇಳಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ವಿವಿಧ ಮೂಲಗಳಿಂದ ವಿವರ ಪಡೆದುಕೊಂಡಿರುವುದಾಗಿ ಟೈಮ್ಸ್ ನೌ ವಾಹಿನಿ ಸಮಿತಿಗೆ ಪ್ರತಿಕ್ರಿಯೆಯಲ್ಲಿ ತಿಳಿಸಿದೆ. ಅದರಲ್ಲಿ ನೀಡಿರುವ ಮಾಹಿತಿ ಸಂಪೂರ್ಣ ನಿಖರವಾಗಿರಲಿಲ್ಲ. ಹೀಗಾಗಿ ಅದು ಸೋರಿಕೆಯಲ್ಲ. ಸೋರಿಕೆಯಾಗಿದೆ ಎಂಬ ಆರೋಪ ಸತ್ಯವಲ್ಲ. ಅದು ಕೇವಲ ಊಹೆಯಷ್ಟೇ ಎಂದು ತಿಳಿಸಿದೆ.

Karnataka poll date leak based on mere speculation says EC committee

ಇಂತಹ ಸನ್ನಿವೇಶ ಎದುರಾಗದಂತೆ ತಡೆಯಬಹುದಾಗಿತ್ತು. ವಾಹಿನಿ ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕಾಗಿತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಪ್ರಸ್ತುತದ ಚುನಾವಣಾ ವ್ಯವಸ್ಥೆ ಮತ್ತು ಪ್ರಕ್ರಿಯೆ ಸಾಕಷ್ಟು ಸದೃಢವಾಗಿದೆ. ಆದರೆ, ಗೋಪ್ಯತೆಯನ್ನು ಪರಿಗಣಿಸಿ, ಪ್ರಕ್ರಿಯೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಬಂಧ ಆಯೋಗಕ್ಕೆ ಪ್ರತ್ಯೇಕವಾಗಿ ವರದಿ ನೀಡಲಾಗುವುದು ಎಂದು ತಿಳಿಸಿದೆ.

ಇಂಡಿಯಾ ಟುಡೇ, ಕಾರ್ವಿ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸೀಟು?ಇಂಡಿಯಾ ಟುಡೇ, ಕಾರ್ವಿ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸೀಟು?

ಕರ್ನಾಟಕ ವಿಧಾನಸಭೆ ಚುನಾವಣೆಯು ಮೇ 12ರಂದು ನಡೆಯಲಿದೆ ಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಮಾರ್ಚ್ 27ರಂದು ಟ್ವೀಟ್ ಮಾಡಿದ್ದು ವಿವಾದ ಸೃಷ್ಟಿಸಿತ್ತು. ಚುನಾವಣಾ ಆಯೋಗವು ಚುನಾವಣೆ ಸಂಬಂಧ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗಲೇ ಅವರು ಟ್ವೀಟ್ ಮಾಡಿದ್ದರು. ಆಗ ಚುನಾವಣಾ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ.

ಕರ್ನಾಟಕ ಕಾಂಗ್ರೆಸ್‌ನ ಶ್ರೀವತ್ಸ ವೈ.ಬಿ. ಕೂಡ ಇದೇ ಮಾಹಿತಿಯನ್ನು ಟ್ವೀಟ್ ಮಾಡಿದ್ದರು. ಕನ್ನಡ ಸುದ್ದಿವಾಹಿನಿಗಳು ತಕ್ಷಣವೇ ಬ್ರೇಕಿಂಗ್ ನ್ಯೂಸ್ ನೀಡಿದ್ದವು. ತಮ್ಮನ್ನು ಸಮರ್ಥಿಸಿಕೊಳ್ಳುವ ವೇಳೆ ಅವರು ಟೈಮ್ಸ್ ನೌ ತಮ್ಮ ಸುದ್ದಿಯ ಮೂಲ ಎಂದು ಹೇಳಿದ್ದರು.

ಚುನಾವಣಾ ಆಯೋಗವು ದಿನಾಂಕವನ್ನು ಘೋಷಣೆ ಮಾಡಿದ್ದು ಬೆಳಿಗ್ಗೆ 11.20ಕ್ಕೆ. ಆದರೆ ಟೈಮ್ಸ್ ನೌ ವಾಹಿನಿ ಬೆಳಿಗ್ಗೆ 11.06ಕ್ಕೇ ಮಾಹಿತಿ ಪ್ರಸಾರ ಮಾಡಿತ್ತು.

ಹೀಗಾಗಿ, ಮಾಹಿತಿ ಸೋರಿಕೆ ಆಗಿರಬಹುದು ಎಂಬ ಸಾಧ್ಯತೆಯ ಪರಿಶೀಲನೆ ಮಾಡಲು ಚುನಾವಣಾ ಆಯೋಗ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಗೆ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಅಧ್ಯಕ್ಷರಾಗಿದ್ದರು.

English summary
The Election Commission which probed the Karnataka election date leak said that it was based on mere speculation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X