ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೆಂಥ ಸಮ್ಮಿಶ್ರ ಸರ್ಕಾರ? ಕರ್ನಾಟಕ ರಾಜಕೀಯ ಕಲಸುಮೇಲೋಗರ

|
Google Oneindia Kannada News

Recommended Video

ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಕಲಸುಮೇಲೋಗರ | ಇಲ್ಲಿದೆ ಟ್ವಿಟ್ಟರ್ ಪ್ರತಿಕ್ರಿಯೆಗಳು | Oneindia Kannada

'ಸಮ್ಮಿಶ್ರ ಸರ್ಕಾರದ ಅಡ್ಡ ಪರಿಣಾಮ ಅಂದ್ರೆ ಇದೇ...' ಎಂದು ಕರ್ನಾಟಕ ರಾಜ್ಯದ ಸದ್ಯದ ರಾಜಕೀಯ ಸ್ಥಿತಿಯನ್ನು ಒಂದೇ ವಾಕ್ಯದಲ್ಲಿ ವಿವರಿಸಿದ್ದಾರೆ ಟ್ವಿಟ್ಟಿಗರೊಬ್ಬರು.

ವಿಶ್ವಾಸಮತ ಸಾಬೀತುಪಡಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗುವಲ್ಲಿ ಕಾಂಗ್ರೆಸ್ಸಿಗಿದ್ದ ಉತ್ಸುಕತೆ ಸರ್ಕಾರ ರಚನೆಯಲ್ಲಿ ಯಾಕಿಲ್ಲ? ಎಂದು ಮತ್ತೊಬ್ಬರು ಪ್ರಶ್ನೆ ಹಾಕಿದ್ದಾರೆ.

ಕುಮಾರಸ್ವಾಮಿ ಆ ಮಾತಲ್ಲಿ ಸತ್ಯವಿದೆ, ವ್ಯಂಗ್ಯವಿದೆ, ಜಾಣತನವೂ ಇದೆಕುಮಾರಸ್ವಾಮಿ ಆ ಮಾತಲ್ಲಿ ಸತ್ಯವಿದೆ, ವ್ಯಂಗ್ಯವಿದೆ, ಜಾಣತನವೂ ಇದೆ

ಒಟ್ಟಿನಲ್ಲಿ ಈ ಸಾಂದರ್ಭಿಕ ಶಿಶು, ಮೈತ್ರಿ ಸರ್ಕಾರ, ಮುಲಾಜಿನ ಮಾತು, ಸಂಪುಟ ರಚನೆಯ ಕರಾಮತ್ತು, ಮಂತ್ರಿ ಸ್ಥಾನಕ್ಕೆ ಕಸರತ್ತು, ರಾಹುಲ್ ಗಾಂಧಿ ವಿದೇಶಿ ಪ್ರವಾಸ ಎಲ್ಲವೂ ಸೇರಿ ಕರ್ನಾಟಕದ ರಾಜಕೀಯ ಕಲಸುಮೇಲೋಗರವಾಗಿದೆ. ರಾಷ್ಟ್ರಮಟ್ಟದಲ್ಲಿ ಸದಾ ಚರ್ಚೆಗೆ ಗುರಿಯಾಗುತ್ತಿರುವ ಈ ರಾಜಕೀಯ ಪ್ರಹಸನದ ಕುರಿತು ಟ್ವಿಟ್ಟರ್ ನಲ್ಲಿ ಕಂಡ ಕೆಲವು ಇಂಟರೆಸ್ಟಿಂಗ್ ಪೋಸ್ಟ್ ಗಳು ಇಲ್ಲಿವೆ.

ಮೈತ್ರಿ ಸರ್ಕಾರದ ಅಡ್ಡ ಪರಿಣಾಮ

ಇದು ಮೈತ್ರಿ ಸರ್ಕಾರದ ಅಡ್ಡಪರಿಣಾಮ. ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ. ಅವರು ಹಿಂದಿರುಗಿ ಬರುವವರೆಗೂ ಮಂತ್ರಿಮಂಡಲ ರಚನೆ ಸಾಧ್ಯವಿಲ್ಲ. ರಾಹುಲ್ ಗಾಂಧಿ ದೇಶಕ್ಕಿಂತ ಕುಟುಂಬ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದರೂ ಅವರಿಗೆ ಪ್ರಧಾನಿಯಾಗುವ ಆಸೆ! ಎಂದಿದ್ದಾರೆ ದೀಪಕ್ ಸೋನಾರ್.

Array

ಬಿಜೆಪಿ ಸುಪ್ರೀಂ ಕದತಟ್ಟಲಿ

ಬಿಜೆಪಿ ತಕ್ಷಣ ಸುಪ್ರೀಂ ಕೋರ್ಟ್ ಕದ ತಟ್ಟಬೇಕು. ವಿಶ್ವಾಸಮತ ಸಾಬೀತಿಗೆ ಇದ್ದ ಅವಸರ ಸರ್ಕಾರ ರಚಿಸುವಲ್ಲಿ ಯಾಕಿಲ್ಲ? ಅವರ್ಯಾಕೆ ಮಂತ್ರಿಮಂಡಲ ರಚನೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ ಸಂದೀಪ್ ಘೋಸ್.

ಕಾಂಗ್ರೆಸ್ ಮುಲಾಜಿಗೆ ಬಿದ್ದ ಕುಮಾರಸ್ವಾಮಿ, 'ಕೈ'ಗೆ ಹಣಕಾಸು ಇಲಾಖೆ?!ಕಾಂಗ್ರೆಸ್ ಮುಲಾಜಿಗೆ ಬಿದ್ದ ಕುಮಾರಸ್ವಾಮಿ, 'ಕೈ'ಗೆ ಹಣಕಾಸು ಇಲಾಖೆ?!

ಹೃದಯದಲ್ಲಿದ್ದಿದ್ದೇ ಮಾತಾಗಿ ಬರುತ್ತದೆ!

ಹೃದಯದಲ್ಲಿ ಏನು ತುಂಬಿರುತ್ತದೆಯೋ ಅದನ್ನೇ ನಾಲಿಗೆ ಆಡುತ್ತದೆ. ಅಸಹಾಯಕ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮನ್ನು ಜನರು ಆರಿಸಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇವರ ಸರ್ಕಾರದಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ನಿಮ್ಮ 'ಕನ್ನಡ ಅಸ್ಮಿತೆ' ಎಲ್ಲಿಗೆ ಹೋಯಿತು ಮುಖ್ಯಮಂತ್ರಿಗಳೇ? ಕನ್ನಡಿಗರಿಗೆ ಇದಕ್ಕಿಂತ ಅವಮಾನ ಇನ್ನೇನೂ ಬೇಕಿಲ್ಲ" ಎಂದು ಬಿಜೆಪಿಯ ಮಲ್ಲೇಶ್ವರ ಶಾಸಕ ಡಾ ಅಶ್ವತ್ಥ್ ನಾರಾಯಣ್ ಟ್ವೀಟ್ ಮಾಡಿದ್ದಾರೆ.

Array

ನಿಜಕ್ಕೂ ಅವರು ಕಾಂಗ್ರೆಸ್ ಮುಲಾಜಿನಲ್ಲಿದ್ದಾರೆ!

'ಇದು ಕಾಂಗ್ರೆಸ್ ಶೈಲಿಯ ಪ್ರಜಾಪ್ರಭುತ್ವ. ಒಬ್ಬ ಮುಖ್ಯಮಂತ್ರಿಗೆ ತನ್ನ ಮಂಗತ್ರಿಗಳನ್ನೂ ಆರಿಸುವ ಸ್ವಾತಂತ್ರ್ಯವಿಲ್ಲ. ಅದಕ್ಕೂ ಕಾಂಗ್ರೆಸ್ ಹೈಕಮಾಂಡ್ ಅನುಮತಿ ಬೇಕು. ಅವರು ನಿಜಕ್ಕೂ ಕಾಂಗ್ರೆಸ್ಸಿನ ಮುಲಾಜಿನಲ್ಲಿದ್ದಾರೆ ಎಂಬುದನ್ನು ಈ ಮೂಲಕ ಒಪ್ಪಿಕೊಂಡಿದ್ದಾರೆ' ಎಂದಿದ್ದಾರೆ ಶಶಾಂಕ್ ಶೇಖರ್.

ಮತ್ತೊಬ್ಬ ಮನಮೋಹನ್ ಸಿಂಗ್

ಮಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಮಟ್ಟಿಗೆ ಮತ್ತೊಬ್ಬ ಮನಮೋಹನ್ ಸಿಂಗ್. ಅವರು ಕಾಂಗ್ರೆಸ್ಸಿಗೆ ಒಬ್ಬ ಬೊಂಬೆ ಅಷ್ಟೆ. ಅದನ್ನು ಅವರು ಗೌರವದಿಂದಲೇ ಒಪ್ಪಿಕೊಂಡಿದ್ದಾರೆ ಎಂದು ಕೆಣಕಿದ್ದಾರೆ ಕುಲದೀಪ್ ಸಿಂಗ್.

English summary
Karnataka assembly elections 2018: Karnataka politics has become a subject of national debate now. Many twitterians blame Karnataka mandate mocked by Congress and JDS, here are twitter comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X