ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಆಯೋಗಕ್ಕೆ ಸಿದ್ದು ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆಯೆ?

By ಕಿಕು
|
Google Oneindia Kannada News

ಇತ್ತೀಚಿಗಷ್ಟೇ ಮೈಸೂರಿನ ಚಾಮುಂಡೇಶ್ವರಿ ಹಾಗು ಬಾಗಲಕೋಟೆಯ ಬದಾಮಿ - ಎರಡೂ ಕ್ಷೇತ್ರಗಳಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆಯೆ? ಹೀಗೆ ಸಂಶಯ ಬರಲು ಹಲವಾರು ಕಾರಣಗಳಿವೆ.

ತಮ್ಮ ಪ್ರಮಾಣಪತ್ರದ 3ನೇ ವಿಷಯವಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನು ತಿಳಿಸಿದ್ದು, ತಮ್ಮ ಬಳಿ ಇಮೇಲ್ ಐಡಿ, ಫೇಸ್ಬುಕ್ ಖಾತೆ, ವಾಟ್ಸ್ ಆಪ್ ಸಂಖ್ಯೆ, ಟ್ವಿಟ್ಟರ್ ಖಾತೆ ಹಾಗು ಯಾವುದೇ ಸಾಮಾಜಿಕ ಜಾಲತಾಣದ ಖಾತೆ ಇಲ್ಲ ಎಂದು ನಮೂದಿಸಿದ್ದಾರೆ.

ಬಾದಾಮಿಯಿಂದ ಸ್ಪರ್ಧಿಸಲು ಮನಸ್ಸಿರಲಿಲ್ಲ: ಸಿದ್ದರಾಮಯ್ಯಬಾದಾಮಿಯಿಂದ ಸ್ಪರ್ಧಿಸಲು ಮನಸ್ಸಿರಲಿಲ್ಲ: ಸಿದ್ದರಾಮಯ್ಯ

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರಾಸರಿ ದಿನಂಪ್ರತಿಯೂ ತಮ್ಮ ಟ್ವಿಟ್ಟರ್ ಖಾತೆ @siddaramaiah ಖಾತೆ ಇಂದ ಟ್ವೀಟ್ ಮಾಡುತ್ತಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಎಲ್ಲರಿಗೂ ಗೊತ್ತಿರುವ ವಿಚಾರ. ಈ ತಾಣದಲ್ಲಿ ಸಾಕಷ್ಟು ವಾಗ್ವಾದಗಳೂ ನಡೆಯುತ್ತಿರುತ್ತವೆ.

ಮುರಳೀಧರ ರಾವ್ ಅವರ ಟ್ವೀಟಿಗೆ ತಿರುಗೇಟು

ಮುರಳೀಧರ ರಾವ್ ಅವರ ಟ್ವೀಟಿಗೆ ತಿರುಗೇಟು

ಇತ್ತೀಚಿಗಷ್ಟೇ ಬಿಜೆಪಿಯ ಮುರಳೀಧರ ರಾವ್ ಅವರು ಸಿದ್ದರಾಮಯ್ಯರಿಗೆ ಟ್ವೀಟ್ ಮಾಡಿ ಬಾದಾಮಿಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಛೇಡಿಸಿದ್ದರು. ಇದೆ ಟ್ವೀಟ್ ಗೆ ರೀ ಟ್ವೀಟ್ ಮಾಡಿ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಸರ್. ಹಿಂದಿ ಅರ್ಥವಾಗುವುದಿಲ್ಲ ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಪ್ರತಿಯಾಗಿ, ಏನ್ ಸಿದ್ದರಾಮಯ್ಯನವರೇ, ಹೆದರಿಬಿಟ್ರಾ, ಭಾರೀ ಮಸಲತ್ತು ಮಾಡಿ ಚಾಮುಂಡೇಶ್ವರಿ ಆರಿಸಿಕೊಂಡ್ರಿ ಎಂದು ಕನ್ನಡದಲ್ಲಿಯೇ ಮುರಳೀಧರ್ ರಾವ್ ಅವರು ಟ್ವೀಟ್ ಮಾಡಿದ್ದಕ್ಕೆ ಸಿದ್ದರಾಮಯ್ಯನವರು ಇಂಗ್ಲಿಷಿನಲ್ಲಿ ಉತ್ತರ ಕೊಟ್ಟಿದ್ದರು.

ಚಾಮುಂಡೇಶ್ವರಿಯಲ್ಲಿ ಸಿದ್ದು ಸೋಲಿಗೆ ಕೈಜೋಡಿಸಿವೆಯಾ ಬಿಜೆಪಿ-ಜೆಡಿಎಸ್?! ಚಾಮುಂಡೇಶ್ವರಿಯಲ್ಲಿ ಸಿದ್ದು ಸೋಲಿಗೆ ಕೈಜೋಡಿಸಿವೆಯಾ ಬಿಜೆಪಿ-ಜೆಡಿಎಸ್?!

ಪ್ರಮಾಣಪತ್ರದಲ್ಲಿ ತಿಳಿಸಿರುವುದು ಸುಳ್ಳು

ಪ್ರಮಾಣಪತ್ರದಲ್ಲಿ ತಿಳಿಸಿರುವುದು ಸುಳ್ಳು

ಈ ವಾದವಿವಾದಗಳು ಏನೇ ಇರಲಿ, ಅವರ ಬಳಿ ವೈಯಕ್ತಿಕ ಟ್ವಿಟ್ಟರ್ ಖಾತೆ ಇಲ್ಲ ಎನ್ನುವುದಾದರೆ, ಇಂತಹ ಟ್ವೀಟ್ ಗಳಿಗೆ ಉತ್ತರಿಸುತ್ತಿರುವವರು ಯಾರು? ತಮ್ಮ ಹೆಸರಲ್ಲಿ ಇಂಥ ವಾದ ವಿವಾದ ಮಾಡುವುದು ಬೇಡ ಎಂದು ಸಿದ್ದರಾಮಯ್ಯನವರೇ ಹೇಳಬಹುದಲ್ಲ? ಈ ವಿಚಾರದಲ್ಲಿ ತಮ್ಮ ಪ್ರಮಾಣಪತ್ರದಲ್ಲಿ ತಿಳಿಸಿರುವುದು ಸುಳ್ಳೆಂದು ಜನಸಾಮಾನ್ಯನೂ ಹೇಳಬಹುದು. ನನ್ನ ಬಳಿ ಟ್ವಿಟ್ಟರ್, ಫೇಸ್ ಬುಕ್ ಖಾತೆಗಳಿವೆ ಅಂದಿದ್ರೆ ಪ್ರಮಾದವೂ ಆಗುತ್ತಿರಲಿಲ್ಲ. ಅಂದ ಹಾಗೆ, ಮುಖ್ಯಮಂತ್ರಿಗಳಿಗೆ ಸರ್ಕಾರದ ವತಿಯಿಂದ ಅಧಿಕೃತ ಸಾಮಾಜಿಕ ಜಾಲತಾಣಗಳಿರುವುದರ ಬಗ್ಗೆ ಈ ಪ್ರಶ್ನೆಯಲ್ಲ. ಅವರ ವೈಯಕ್ತಿಕ ಖಾತೆಯ ಬಗೆಗೆ.

ಡಿನೋಟಿಫಿಕೇಶನ್ ಪ್ರಕರಣ: ಸಿಎಂಗೆ ಸಂಕಷ್ಟ ಎದುರಾಗಲಿದೆಯೇ? ಡಿನೋಟಿಫಿಕೇಶನ್ ಪ್ರಕರಣ: ಸಿಎಂಗೆ ಸಂಕಷ್ಟ ಎದುರಾಗಲಿದೆಯೇ?

ಸಿದ್ದು ಹೆಸರಲ್ಲಿರುವುದು ನಕಲಿ ಖಾತೆಯೆ?

ಸಿದ್ದು ಹೆಸರಲ್ಲಿರುವುದು ನಕಲಿ ಖಾತೆಯೆ?

@siddaramaiah ಖಾತೆ ಸಿದ್ದರಾಮಯ್ಯರ ವೈಯಕ್ತಿಕ ಖಾತೆ ಅಲ್ಲ ಎಂದಾದರೆ, ಮತ್ಯಾರೋ ಸಿದ್ದರಾಮಯ್ಯನವರ ಹೆಸರಿನಲ್ಲಿ ನಕಲಿ ಖಾತೆ ಹೊಂದಿದ್ದು ಟ್ವೀಟ್ ಮಾಡುತ್ತಿದ್ದಾರೆ ಎಂದಾಗುತ್ತದೆ. ಅದು ಹೇಗೆ ಸಾಧ್ಯ? ಅನೇಕ ಬಾರಿ ಸರ್ಕಾರದ ಮಾಹಿತಿಯನ್ನು ಟ್ವೀಟ್ ಮಾಡಲು ಯಾರಿಂದಲೋ ಹೇಗೆ ಸಾಧ್ಯ? ಹಾಗೇ ಮಾಡುತ್ತಿದ್ದಾರೆ ಎಂದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಲ್ಲಿ ನಕಲಿ ಖಾತೆ ತೆರೆದು ಟ್ವೀಟ್ ಮಾಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ಕ್ರಮವೇಕೆ ಜರುಗಿಸಲಾಗುತ್ತಿಲ್ಲಅಥವಾ ಅಂತಹ ಖಾತೆಯನ್ನು ಏಕೆ ನಿರ್ಬಂಧಿಸಲಾಗುತ್ತಿಲ್ಲ?

ಸಿದ್ದರಾಮಯ್ಯರ ಮೇಲೆ ಏನಾದರು ಕ್ರಮ?

ಸಿದ್ದರಾಮಯ್ಯರ ಮೇಲೆ ಏನಾದರು ಕ್ರಮ?

ಹಾಗೆಯೆ ಸಿದ್ದರಾಮಯ್ಯರ ವೈಯಕ್ತಿಕ ಈ ಮೇಲ್ ಐಡಿ ಹಾಗು ಫೇಸ್ ಬುಕ್ ಖಾತೆ ಹೊಂದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಮೇಲೆ ಚುನಾವಣಾ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಏನಾದರು ಕ್ರಮ ಕೈಗೊಳ್ಳಬಹುದಾ?

English summary
Karnataka Assembly Elections 2018 : Has chief minister Siddaramaiah, who is contesting from Chamundeshwari in Mysuru and Badami in Bagalkot, submitted false affidavit to election commission? This question arises as he has mentioned he has no email or social media accounts and not using whats app also. If that is the case, is the twitter account created in his name fake?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X