ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಆರ್.ಗೋಪಾಲರಾವ್ ಪರಿಚಯ

|
Google Oneindia Kannada News

ಮೈಸೂರು, ಏಪ್ರಿಲ್ 20 : ಕರ್ನಾಟಕ ಬಿಜೆಪಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಅವರ ನಡುವಿನ ಮುಖಾಮುಖಿ ಸ್ಪರ್ಧೆಯಿಂದಾಗಿ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು ಶುಕ್ರವಾರ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಶುಕ್ರವಾರ ಸಂಜೆ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಆರ್.ಗೋಪಾಲರಾವ್ ಅವರನ್ನು ಘೋಷಣೆ ಮಾಡಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದ ಎಲೆಕ್ಷನ್ ಕಿಂಗ್!ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದ ಎಲೆಕ್ಷನ್ ಕಿಂಗ್!

ಮೂರು ಪಕ್ಷಗಳ ಅಭ್ಯರ್ಥಿಗಳು ಘೋಷಣೆಯಾದ ಬಳಿಕ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಕಣ ಅಂತಿಮವಾಗಿದೆ. ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡರ ನಡುವೆ ನೇರ ಪೈಪೋಟಿ ನಡೆಯುವ ನಿರೀಕ್ಷೆ ಇದೆ.

ಚಾಮುಂಡೇಶ್ವರಿಯಲ್ಲಿ ಒಕ್ಕಲಿಗರ ಒಲಿಸಿಕೊಳ್ಳುವರೇ ಸಿದ್ದರಾಮಯ್ಯ?ಚಾಮುಂಡೇಶ್ವರಿಯಲ್ಲಿ ಒಕ್ಕಲಿಗರ ಒಲಿಸಿಕೊಳ್ಳುವರೇ ಸಿದ್ದರಾಮಯ್ಯ?

SR Gopal Rao

ಸಿದ್ದರಾಮಯ್ಯ ಸೋಲಿಗಾಗಿ ಕಾದು ಕುಳಿತ ನಾಯಕರ ಪಟ್ಟಿ!ಸಿದ್ದರಾಮಯ್ಯ ಸೋಲಿಗಾಗಿ ಕಾದು ಕುಳಿತ ನಾಯಕರ ಪಟ್ಟಿ!

ಬಿಜೆಪಿ ಅಭ್ಯರ್ಥಿ ಸಂಕ್ಷಿಪ್ತ ಪರಿಚಯ


* ಎಸ್.ಆರ್.ಗೋಪಾಲರಾವ್

* ಜನನ 1956

* ಸ್ಥಳ : ಮೈಸೂರು

* ತಂದೆ : ಎಸ್ ಕೆ ರಾಜಾರಾವ್

* ತಾಯಿ : ರಂಗಲಕ್ಷಮ್ಮ

* ಶಿಕ್ಷಣ : ಬಿಎ

* ಶೇಷಾಂದ್ರಿಪುರಂ ಕಾಲೇಜ್, ಬೆಂಗಳೂರು

* ತುರ್ತು ಪರಿಸ್ಥಿತಿ ಯಲ್ಲಿ ಬಂಧನಕ್ಕೊಳಗಾಗಿ ಕಾಲೇಜು ವ್ಯಾಸಂಗ ನಿಲ್ಲಿಸಿದರು.

* 1975 ರ ತುರ್ತು ಪರಿಸ್ಥಿತಿ ಸಮಯದಿಂದ ಜನಸಂಘದೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡರು.
* ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು.

* 1982 ರಲ್ಲಿ ಭಾರತೀಯ ಜನತಾಪಕ್ಷವಾಗಿ ಪರಿವರ್ತನೆಯಾದ ಜನಸಂಘದೂಂದಿಗೆ ಅಂದಿನಿಂದಲೂ ಗುರುತಿಸಿಕೊಂಡವರು.

* ಬಿಜೆಪಿ ಸಾಮಾನ್ಯ ಕಾರ್ಯಕರ್ತರಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 1996 ಮತ್ತು 2006 ಕ್ಷೇತ್ರದ ಅಧ್ಯಕ್ಷರಾಗಿ ಆಯ್ಕೆಯಾದರು.

* ತಾಲೂಕು, ಜಿಲ್ಲಾ ಕಾರ್ಯದರ್ಶಿ, ವಕ್ತಾರ, ಅಧ್ಯಕ್ಷ ಹೀಗೆ ಬಿಜೆಪಿಯಲ್ಲಿ ಹಲವು ಹುದ್ದೆಗಳನ್ನು ಪಡೆದವರು.

* ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಕೌನ್ಸಿಲ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary
Mysuru Chamundeshwari assembly constituency BJP candidate S.R.Gopal Rao profile. Chief Minister Siddaramaiah is Congress candidate in constituency. JD(S) leader G.T.Deve Gowda sitting MLA and Karnataka assembly elections 2018 candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X