ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ ಫೋರ್ ಸಮೀಕ್ಷೆ: ಹೈದರಾಬಾದ್ ಕರ್ನಾಟಕದಲ್ಲಿ 'ಕೈ' ಮೇಲು

|
Google Oneindia Kannada News

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹೈದರಾಬಾದ್ ಕರ್ನಾಟಕದ 40 ಸ್ಥಾನಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಲಭಿಸಬಹುದು ಎಂದು ಸಿ-ಫೋರ್ ಸಮೀಕ್ಷೆ ಬಹಿರಂಗಪಡಿಸಿದೆ. ಹೈದರಾಬಾದ್ ಕರ್ನಾಟಕ ಅಂದರೆ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಕ್ಷೇತ್ರಗಳು ಬರುತ್ತವೆ.

ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ 26-28, ಬಿಜೆಪಿ 10-12, ಜೆಡಿಎಸ್ 1-2 ಮತ್ತು ಇತರೆ 1 ಸ್ಥಾನ ಪಡೆಯಬಹುದು ಎಂದು ಹೇಳಲಾಗಿದೆ.

ಸಮೀಕ್ಷೆ: ಕಾಂಗ್ರೆಸ್ ನಾಗಾಲೋಟದ ಮುಂದೆ ಬಿಜೆಪಿ, ಜೆಡಿಎಸ್ ಛಿದ್ರಸಮೀಕ್ಷೆ: ಕಾಂಗ್ರೆಸ್ ನಾಗಾಲೋಟದ ಮುಂದೆ ಬಿಜೆಪಿ, ಜೆಡಿಎಸ್ ಛಿದ್ರ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಗಬಹುದು ಎಂದು ಎರಡು ಸಮೀಕ್ಷೆಯಲ್ಲಿ ಸುಳಿವು ನೀಡಿದ್ದ ಸಿ- ಫೋರ್ ನ ಮತ್ತೊಂದು ಸಮೀಕ್ಷೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುತ್ತದೆ ಎಂದು ತಿಳಿಸಿದೆ.

Karnataka Elections : C-Fore survey - Congress to lead in Hyderabad Karnataka region

ಇದೇ ಏಪ್ರಿಲ್ ನ 20ನೇ ತಾರೀಕಿನಿಂದ 30ನೇ ತಾರೀಕಿನ ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ ರಾಂಡಮ್ ಸಾಂಪ್ಲಿಂಗ್ ವಿಧಾನ ಅನುಸರಿಸಲಾಗಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿಕೊಂಡಿದೆ.

ಸಿ ಫೋರ್ 3 ಸಮೀಕ್ಷೆಗಳಲ್ಲೂ ಸಿದ್ದರಾಮಯ್ಯ ಕೈ ಪಡೆಗೆ ಗೆಲುವುಸಿ ಫೋರ್ 3 ಸಮೀಕ್ಷೆಗಳಲ್ಲೂ ಸಿದ್ದರಾಮಯ್ಯ ಕೈ ಪಡೆಗೆ ಗೆಲುವು

61 ವಿಧಾನಸಭೆ ಕ್ಷೇತ್ರಗಳಿಗೆ ಸೇರಿದ 6,247 ಮತದಾರರನ್ನು ಸಂದರ್ಶಿಸಿ, ಈ ಸಮೀಕ್ಷೆ ನಡೆಸಲಾಗಿದೆ. ವಿಧಾನಸಭೆ ಕ್ಷೇತ್ರಗಳನ್ನು ವಿಭಾಗವಾರು ಆಯ್ಕೆ ಮಾಡಲಾಗಿದೆ. ಜೊತೆಗೆ ಮತದಾರರು ಬೇರೆ ಬೇರೆ ಜಾತಿ, ಸಮುದಾಯಕ್ಕೆ ಸೇರಿರುವಂತೆ ನೋಡಿಕೊಳ್ಳಲಾಗಿದೆ ಎಂದು ಸಮೀಕ್ಷೆ ನಡೆಸಿದ ಸಂಸ್ಥೆ ಹೇಳಿದೆ. ಸಮೀಕ್ಷೆಯಲ್ಲಿ ಶೇಕಡಾ 2 ತಪ್ಪುಗಳಿರಬಹುದು ಎಂದು ಸಿ-ಫೋರ್ ಸಮೀಕ್ಷೆ ಸ್ಪಷ್ಟನೆ ನೀಡಿದೆ.

English summary
C-Fore pre-poll survey for Karnataka Assembly Elections 2018. Congress will emerge strong in Hyderabad Karnataka region much ahead of BJP. JDS not in a competition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X