ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರಕ್ಕೆ ಬರುವುದು ಜೆಡಿಎಸ್ ಪಕ್ಷವೇ: ಎಚ್ ವಿಶ್ವನಾಥ್ ಸಂದರ್ಶನ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 2 : ಕರ್ನಾಟಕ ವಿಧಾನಸಭೆಯ ಚುನಾವಣೆಯ ರಣಾಂಗಣಕ್ಕೆ ಎಲ್ಲಾ ಪಕ್ಷಗಳು ಭರ್ಜರಿ ತಾಲೀಮು ನಡೆಸುತ್ತಿದೆ. ಅದೇ ರೀತಿ ನಾಡಿಗೆ ಧೀಮಂತ ಮುಖ್ಯಮಂತ್ರಿಯನ್ನು ಕೊಟ್ಟ ಹುಣಸೂರು ಕ್ಷೇತ್ರದಲ್ಲಿಯೂ ರಾಜಕೀಯ ರಂಗು ಜೋರಾಗಿದೆ. ಗುರುವಿನ ಕರ್ಮ ಭೂಮಿಗೆ ಶಿಷ್ಯನೆಂದೇ ಗುರುತಿಸಿಕೊಂಡಿರುವ ಹಳ್ಳಿ ಹಕ್ಕಿ ಅಡಗೂರು ವಿಶ್ವನಾಥ್ ಎಂಟ್ರಿ ಕೊಟ್ಟಾಗಿದೆ.

ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವುದರಿಂದ ವಿಶ್ವನಾಥ್ ಅವರು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹುಣಸೂರಿನಲ್ಲಿ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿರುವ ಎಚ್ ವಿಶ್ವನಾಥ್ ಒನ್ ಇಂಡಿಯಾಕ್ಕೆ ಸಂದರ್ಶನ ನೀಡಿದ್ದಾರೆ.

ತೂಗುಯ್ಯಾಲೆಯಲ್ಲಿ ಎಚ್ ವಿಶ್ವನಾಥ್ ರಾಜಕೀಯ ಭವಿಷ್ಯ!ತೂಗುಯ್ಯಾಲೆಯಲ್ಲಿ ಎಚ್ ವಿಶ್ವನಾಥ್ ರಾಜಕೀಯ ಭವಿಷ್ಯ!

ವಿಶ್ವನಾಥ್ ಕರ್ಮಭೂಮಿ ಕೆ.ಆರ್ ನಗರ, ಆದರೆ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ವಿಶ್ವನಾಥ್ ಮೊದಲ ಬಾರಿಗೆ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಚುನಾವಣಾ ಕಣದ ಬಗ್ಗೆ, ರಾಜಕೀಯ ಮೇಲಾಟದ ಬಗ್ಗೆ ಸ್ವತಃ ಅವರೇ ಉತ್ತರಿಸಿದ್ದಾರೆ. ಇಲ್ಲಿದೆ ಅದರ ಸಾರಾಂಶ.

ಹುಣಸೂರು: ಜನ ಮತ ಬಹಿಷ್ಕಾರ ಮಾಡುತ್ತೇವೆ ಎನ್ನಲು ಕಾರಣ ಹಲವುಹುಣಸೂರು: ಜನ ಮತ ಬಹಿಷ್ಕಾರ ಮಾಡುತ್ತೇವೆ ಎನ್ನಲು ಕಾರಣ ಹಲವು

ಮೊದಲ ಭಾರಿ ಸ್ಪರ್ಧೆ

ಮೊದಲ ಭಾರಿ ಸ್ಪರ್ಧೆ

ಪ್ರ: ಹುಣಸೂರು ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧೆ ನಿಮ್ಮದು, ಹೇಗಿದೆ ಜನರ ರೆಸ್ಪಾನ್ಸ್ ?
ಉ: ಅದ್ಭುತವಾಗಿದೆ. ನನಗೆ ಇದು ಮೊಲ ಬಾರಿಗೆ ಎಂದೆನಿಸುತ್ತಿಲ್ಲ. ನನ್ನನ್ನು ಹಿರಿಯನೆಂದು ಗೌರವಿಸುತ್ತಿರುವುದು ಸಂತಸ ತರಿಸಿದೆ. ಕ್ಷೇತ್ರದಲ್ಲಿ ನನ್ನ ಪರವಾದ ಹಾಗೂ ಕುಮಾರಸ್ವಾಮಿ ಪರವಾದ ಅಲೆ ಎದ್ದಿದೆ. ನಮ್ಮ ಪಕ್ಷದ ಕೆಲಸದ ಮೇಲೆ ಯುವಜನರಿಗೆ ನಂಬಿಕೆ ಇದೆ. ಹಾಗಾಗಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ.

ಪ್ರ: ಹುಣಸೂರನ್ನು ಏಕೆ ಆಯ್ಕೆ ಮಾಡಿಕೊಂಡದ್ದು ಏಕೆ ?
ಉ: ಇದು ನಾನು ಮೆಚ್ಚಿದ ಅಚ್ಚುಮೆಚ್ಚಿದ ಊರು. ಹುಣಸೂರಿನ ಸ್ಪರ್ಧೆ ನಾನು ಆಯ್ಕೆ ಮಾಡಿಕೊಂಡಿದ್ದಲ್ಲ. ವರಿಷ್ಠರು ಆಯ್ಕೆ ಮಾಡಿ ನನಗೆ ಕೊಟ್ಟದ್ದು. ಇಲ್ಲಿ ಯಾವುದೇ ಒಳಮರ್ಮವಿಲ್ಲ. ನನಗೆ ಇಲ್ಲಿನ ಸ್ಫರ್ಧೆ ಸಂತಸತರಿಸಿದೆ.

ಜಾತಿ ಲೆಕ್ಕಾಚಾರ

ಜಾತಿ ಲೆಕ್ಕಾಚಾರ

ಪ್ರ: ಈ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ ?
ಉ: ಹುಣಸೂರಿನಲ್ಲಿ ಒಕ್ಕಲಿಗರು ಹಾಗೂ ಕುರುಬ ಸಮುದಾಯದವರು ಹೆಚ್ಚು. ಆದರೆ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯುತ್ತವೆ ಎಂಬುದು ಸುಳ್ಳು. ಅದು ನಡೆದರೂ ಎಲ್ಲಿಯೂ ಯಶಸ್ವಿಯಾಗುವುದಿಲ್ಲ. ನಾನು ಎಂದಿಗೂ ಜಾತಿ ಮುಂದಿಟ್ಟುಕೊಂಡು ಮತ ಕೇಳಿಲ್ಲ.

ಪ್ರ:
ಜೆಡಿಎಸ್ ಗೆ ಹೋಗಬೇಕೆಂಬ ಅನಿವಾರ್ಯ ಏಕೆ ಬಂತು ?
ಉ: ನಾನು ಸೆಕ್ಯುಲರ್ ಐಡಿಯಾಲಜಿಯನ್ನು ನಂಬಿ ಬೆಳೆದವನು. ಹಾಗಾಗಿ ಈ ಪಕ್ಷಕ್ಕೆ ಸೇರ್ಪಡೆಗೊಂಡೆ. ನನಗೆ ಬಿಜೆಪಿಯಿಂದಲೂ ಆಹ್ವಾನ ಬಂದಿತ್ತು. ಯಡಿಯೂರಪ್ಪ ಕೂಡ ನನ್ನ ಒಳ್ಳೆಯ ಸ್ನೇಹಿತರು. ಕಾಂಗ್ರೆಸ್ ನಾಯಕತ್ವವನ್ನು ನಾನೆಂದಿಗೂ ಟೀಕೆ ಮಾಡಿಲ್ಲ. ಆದರೆ ನಾಯಕತ್ವವನ್ನು ನಿರ್ವಹಿಸುತ್ತಿರುವವರು ನನಗೆ ಹಿಡಿಸಿಲ್ಲ. ನಾನು ನಡವಳಿಕೆ ವಿರೋಧಿ. ಹಾಗಾಗಿ ಪಕ್ಷ ತೊರೆದೆ ಅಷ್ಟೇ. ಕಾಂಗ್ರೆಸ್ ನೊಂದಿಗಿನ 40 ವರುಷದ ಬಂಧ ತೊರೆಯಬೇಕಾದರೆ ಬಹಳ ಕಷ್ಟವಾಯಿತು. ಸಿದ್ದರಾಮಯ್ಯ ಅನುಭವಿಸುತ್ತಿರುವ ಎಲ್ಲಾ ಅಧಿಕಾರದಲ್ಲೂ ಸಖನಾಗಿ ಬಂದವನು ನಾನು, ಪ್ರತಿಯೊಂದು ಸಂದರ್ಭದಲ್ಲೂ ಮೆಟ್ಟಿಲಾದವನು ನಾನು. ನನಗೆ ಅವರಿಂದ ಏನು ಬೇಕಿಲ್ಲ. ಆದರೆ ಜನರಿಗೆ ಮೋಸ ಮಾಡಿದ್ದು ಸರಿಯೆನಿಸಲಿಲ್ಲ. ಹಾಗಾಗಿ ಪಕ್ಷ ತೊರೆದೆ. ನನಗೆ ಅದರ ಅವಶ್ಯಕತೆಯೂ ಇಲ್ಲ.

ಗೌರವಯುತ ನಿರ್ಗಮನ ಮುಖ್ಯ

ಗೌರವಯುತ ನಿರ್ಗಮನ ಮುಖ್ಯ

ಪ್ರ: ಹಾಗಾದರೆ ನನಗೇನೂ ಬೇಡ ಎನ್ನುವವರು ಜೆಡಿಎಸ್ ಗೆ ಸೇರ್ಪಡೆಗೊಂಡು ಚುನಾವಣೆ ಎದುರಿಸುತ್ತಿರುವುದೇಕೆ ?
ಉ: ನಾನು ನನ್ನ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಇದ್ದೇನೆ. ಇಷ್ಟು ದಿನ ನನ್ನ ಗುರುತಿಸಿ ಬೆಳೆಸಿದ ಜನರೊಂದಿಗೆ ಎಲ್ಲವನ್ನೂ ಮುಗಿಸಿ, ಅವರೇ ಸಾಕು ಎನ್ನುವ ತನಕ ದುಡಿಯುತ್ತೇನೆ. ಸಂಧ್ಯಾಕಾಲದಲ್ಲಿ ಗೌರವಯುತವಾದ ನಿರ್ಗಮನ ಬಹುಮುಖ್ಯ. ನನ್ನ ಸಿದ್ದರಾಮಯ್ಯನ ನಡುವೆ ಇರುವುದು ಸಾತ್ವಿಕ ಸಿಟ್ಟು. ವಚನ ಭ್ರಷ್ಟರಾಗಿ ನನ್ನ ವಿರುದ್ಧವೇ ತಿರುಗಿ ಬಿದ್ದದ್ದು ಹಿಡಿಸಲಿಲ್ಲ. ಹಾಗಾಗಿ ಕೈ ಕೊಟ್ಟೆ.

ಶಾಂತಿ ಸೌಹಾರ್ದತೆ ನನ್ನ ಆದ್ಯತೆ

ಶಾಂತಿ ಸೌಹಾರ್ದತೆ ನನ್ನ ಆದ್ಯತೆ

ನೀವು ಗೆದ್ದರೆ ಹುಣಸೂರಲ್ಲಾಗುವ ಬದಲಾವಣೆಗಳೇನು ?
ಹುಣಸೂರಿನಲ್ಲಿ ಶಾಂತಿ ಸೌಹಾರ್ದತೆ ತರುವಲ್ಲಿ ಮೊದಲ ಪ್ರಯತ್ನ ನನ್ನದಾಗುತ್ತದೆ. ಎಲ್ಲರ ಮೇಲೆ ಇಲ್ಲ ಸಲ್ಲದ ಕೇಸ್ ಗಳು ಹಾಕಲಾಗಿದೆ. ಅದನ್ನು ಪರಿಶೀಲಿಸಿ ಕೋಮು -ಸೌಹಾರ್ದತೆ ತರುವಲ್ಲಿ ಆದ್ಯತೆ ನೀಡುತ್ತೇನೆ. ನೀರಾವರಿ, ಕುಡಿಯುವ ನೀರು, ರಸ್ತೆ ಸಮಸ್ಯೆ, ಹಿಂದುಳಿದ ವರ್ಗದವರ ಅಭಿವೃದ್ಧಿಯತ್ತ ನನ್ನ ಗಮನ. 7. ಜೆಡಿಎಸ್ ಮತ್ತೊಂದು ಪಕ್ಷದೊಂದಿಗೆ ಹೊಂದಾಣಿಕೆ ನಡೆಸುವ ಸಂದರ್ಭ ಒದಗಿಬಂದರೆ ನಿಮ್ಮ ನಿಲುವೇನು ?

ಗೊತ್ತಿಲ್ಲ. ಆ ಕಾಲ ಬಂದಾಗ ನೋಡೋಣ. ಆದರೆ ನಮ್ಮ ನಾಯಕರು ಹೇಳಿದ್ದು ಒಂದೇ ಮಗ್ಗುಲಿನದ್ದು, ಹೊಂದಾಣಿಕೆ ನಡೆಯುವುದಿಲ್ಲ. ಈ ಬಗ್ಗೆ ಪ್ರಶ್ನೆಯೇ ಇಲ್ಲ.

English summary
Karnataka assembly elections 2018: An interview with Hunsur JDS candidate H Vishwanath. He confidently said that JDS will form government in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X