ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೆ, ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಡಿಕೆಶಿಗ್ಯಾಕೆ ಇಂಥ ಸ್ಥಿತಿ?!

|
Google Oneindia Kannada News

Recommended Video

ಕಾಂಗ್ರೆಸ್ ನ ಹೀರೋ ಡಿ ಕೆ ಶಿವಕುಮಾರ್ ಗೆ ಇಂಥಾ ಸ್ಥಿತಿ ಬಂದಿದಕ್ಕೆ ಅಭಿಮಾನಿಗಳು ಬೇಸರ | Oneindia Kannada

ಬೆಂಗಳೂರು, ಮೇ 24: ಛೆ, ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರಿಗೆ ಖಂಡಿತ ಹೀಗಾಗಬಾರದಿತ್ತು. ಕಷ್ಟ ಬಂದಾಗ ಎಲ್ಲವನ್ನೂ ತಮ್ಮ ಭುಜದ ಮೇಲೆ ಹಾಕಿಕೊಂಡು ಸಮರ್ಥವಾಗಿ ನಿಭಾಯಿಸಿದ ಡಿಕೆ ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾದರೆ ಜಾತಿ ಲೆಕ್ಕಾಚಾರ ಶುರುವಾಗಬೇಕೆ? ಹಾಗಂತ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪ್ರಶ್ನಿಸುತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಬಂಡಾಯ ನಾಯಕ ಶೆಹ್ಜಾದ್ ಪೂನಾವಾಲಾ, ಎಚ್ ಡಿ ಕುಮಾರಸ್ವಾಮಿ ಮತ್ತು ಜಿ ಪರಮೇಶ್ವರ್ ಅವರಿಗೆ ಅಭಿನಂದನೆಗಳು ಮತ್ತು ಡಿಕೆಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ನನ್ನ ಸಂತಾಪಗಳು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಕಾಂಗ್ರೆಸ್ಸಿನ ಆಪದ್ಬಾಂಧವ ಡಿಕೆಶಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್?!ಕಾಂಗ್ರೆಸ್ಸಿನ ಆಪದ್ಬಾಂಧವ ಡಿಕೆಶಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್?!

ಕಾಂಗ್ರೆಸ್ಸು ತನ್ನ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿ ಇಲ್ಲ ಎಂದು ನೇರವಾಗಿಯೇ ಟಾಂಗ್ ಕೊಟ್ಟಿದ್ದಾರೆ ಶೆಹ್ಜಾದ್.

Array

ಡಿಕೆಶಿ, ಸಿದ್ದುಗೆ ನನ್ನ ಸಂತಾಪ!

"ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಎಚ್ ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರಿಗೆ ನನ್ನ ಅಭಿನಂದನೆಗಳು. ಹಾಗೆಯೇ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರೂ ತಕ್ಕುದಾದ ಹುದ್ದೆ ಪಡೆಯುವಲ್ಲಿ ವಿಫಲರಾದ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಸಂತಾಪಗಳು. ಹಾಗೂ ರಾಜಕೀಯ ಸ್ವಾರ್ಥಕ್ಕಾಗಿ ಉಪಯೋಗಿಸಲ್ಪಟ್ಟು, ತಿರಸ್ಕೃತರಾದ ಮುಸ್ಲಿಂ ಮತ್ತು ಲಿಂಗಾಯತ ಸಮುದಾಯದ ಜನರಿಗೂ ನನ್ನ ಸಂತಾಪಗಳು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಶೆಹ್ಜಾದ್ ಪೂನಾವಾಲಾ

ಡಿಸಿಎಂ ಪಟ್ಟ ಕೈತಪ್ಪಿದ್ದಕ್ಕೆ ಡಿಕೆ ಬ್ರದರ್ಸ್ ಗರಂ!ಡಿಸಿಎಂ ಪಟ್ಟ ಕೈತಪ್ಪಿದ್ದಕ್ಕೆ ಡಿಕೆ ಬ್ರದರ್ಸ್ ಗರಂ!

ಬೂದಿ ಮುಚ್ಚಿದ ಕೆಂಡ!

ಬೂದಿ ಮುಚ್ಚಿದ ಕೆಂಡ!

ಸದ್ಯಕ್ಕೆ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ಇಬ್ಬರೂ ಬೂದಿ ಮುಚ್ಚಿದ ಕೆಂಡದಂತಾಗಿದ್ದಾರೆ. ಯಾವಾಗ ಗಾಳಿ ಜೋರಾಗಿ ಬೀಸುತ್ತದೋ, ಬೂದಿ ಹಾರಿ, ಕೆಂಡ ಮತ್ತೆ ಉರಿಯುತ್ತದೋ ಗೊತ್ತಿಲ್ಲ! ಕಾಂಗ್ರೆಸ್ ನ ಮಾನ ಮರ್ಯಾದೆ ಕಾಪಾಡಿ, ಗೆದ್ದ್ ಶಾಸಕರೆಲ್ಲ ಕೈತಪ್ಪಿ ಹೋಗದಂತೆ "ಗೇಟು ಕಾದವರು ನಾವು, ಆದರೆ ಅಧಿಕಾರ ಬೇರೆ ಯಾರಿಗೋ ಎಂದರೆ ಅದ್ಯಾವ ನ್ಯಾಯ" ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ ಡಿ ಕೆ ಸುರೇಶ್. ಇದರಿಂದ ಕಾಂಗ್ರೆಸ್ ಹೈಕಮಾಂಡಿಗೆ ಇರಿಸುಮುರಿಸಾಗಿದ್ದು ಸತ್ಯ. ಆದರೆ ದಲಿತ ಉಪಮುಖ್ಯಮಂತ್ರಿಯನ್ನೇ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಜಿ ಪರಮೇಶ್ವರ್ ಅವರನ್ನು ಆರಿಸಲಾಗಿದ್ದು, ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಜೊತೆಗೆ, ಕ್ಯಾಬಿನೇಟ್ ಸಚಿವ ಸ್ಥಾನವನ್ನೂ ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ. ಆದರೆ ಇದಕ್ಕೆ ಒಲ್ಲದ ಮನಸ್ಸಿನಿಂದಲೇ ತಲೆಯಲ್ಲಾಡಿಸಿದ್ದಾರೆ ಡಿಕೆಶಿ.

ಕಷ್ಟ ಕಾರ್ಪಣ್ಯ ಬಂದಾಗ ಮಾತ್ರ ಡಿಕೆಶಿ ನೆನಪು

ಪಕ್ಷಕ್ಕೆ ಕಷ್ಟ ಕಾರ್ಪಣ್ಯಗಳು ಬಂದಾಗ ಮಾತ್ರ ಡಿ ಕೆ ಶಿವಕುಮಾರ್ ಅವರ ನೆನಪು ಬರುತ್ತದೆ ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಿಗೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಸೌಮ್ಯಾ ಗೌಡ ಎಂಬುವವರು.

ಅನ್ಯಮನಸ್ಕರಾಗಿದ್ದರೇ ಡಿಕೆಶಿ?

ಅನ್ಯಮನಸ್ಕರಾಗಿದ್ದರೇ ಡಿಕೆಶಿ?

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಶಾಸಕರನ್ನೆಲ್ಲ ಒಂದೆಡೆ ಸೇರಿಸಿ ಕಾಂಗ್ರೆಸ್ಸಿನ ಮಾನ ಉಳಿಸುವಾಗ ಇದ್ದ ಹುಮ್ಮಸ್ಸು, ಎಚ್ ಡಿ ಕುಮಾರಸ್ವಾಮಿಯವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಡಿ ಕೆ ಶಿ ಅವರ ಮುಖದಲ್ಲಿ ಯಾಕೋ ಕಾಣಲಿಲ್ಲ. ವೈಮನಸ್ಯ, ಅಸಮಾಧಾನವನ್ನು ಎಷ್ಟೇ ಮುಚ್ಚಿಹಾಕಲು ಪ್ರಯತ್ನಿಸಿದ್ದರೂ ಅವರ ಮುಖದಲ್ಲಿ ಅದು ಕಾಣಿಸುತ್ತಿತ್ತು. ಗುಜರಾತ್ ರಾಜ್ಯಸಭಾ ಚುನಾವಣೆಯ ಸಮಯದಲ್ಲಿ, ರಾಜ್ಯದ ವಿಧಾನಸಭೆ ಚುನಾವಣೆಯ ಅತಂತ್ರ ಫಲಿತಾಂಶದ ನಂತರ ಇಡೀ ಕರ್ನಾಟಕದ ರಾಜಕೀಯ ಸ್ಥಿತ್ಯಂತರದ ರೂವಾರಿ ಡಿಕೆಶಿ ಎಂದರೆ ಉತ್ಪ್ರೇಕ್ಷಯಲ್ಲ. ಇಂಥ ಪಕ್ಷನಿಷ್ಠರಿಗ್ಯಾಕೆ ಇಂದು ಇಂಥ ದೈನೇಸಿ ಸ್ಥಿತಿ ಎಂಬುದು ಅವರ ಅಭಿಮಾನಿಗಳ ಪ್ರಶ್ನೆ!

English summary
Karnataka Election results 2018: Congress rebel leader Shehzad Poonawalla tweets, Congratulations to HD Kumaraswamy and Dr Parameshwara for selection as CM & Dy CM. Condolences to D K Shivakumar, Sh Siddaramaiah who will find no place at the top despite their contribution.Condolences to Muslim and Lingayat communities for being used and left out (as predicted)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X