ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯೋ ಪಾಪ: ಕಾಂಗ್ರೆಸ್ ಸೋತಿದ್ದಕ್ಕೆ ಕಣ್ಣೀರಿಟ್ಟ ಸಿದ್ದರಾಮಯ್ಯ.!

By Harshitha
|
Google Oneindia Kannada News

ಸಿಎಂ ಕುರ್ಚಿಯಲ್ಲಿ ಕೂರುತ್ತಿದ್ದಾಗ, ಅಕ್ಷರಶಃ ಹುಲಿಯಂತೆ ಘರ್ಜಿಸುತ್ತಿದ್ದ ಸಿದ್ದರಾಮಯ್ಯ ಇದೀಗ 'ಕುರಿ'ಯಂತಾಗಿದ್ದಾರೆ. ಸದನದಲ್ಲಿ ವಿರೋಧ ಪಕ್ಷಗಳಿಗೆ ಮಾತಲ್ಲೇ ಪೆಟ್ಟು ಕೊಡುತ್ತಿದ್ದ ಸಿದ್ದರಾಮಯ್ಯ ಈಗ ತಾವೇ ಮಂಕಾಗಿಬಿಟ್ಟಿದ್ದಾರೆ.

ನಿನ್ನೆಯಷ್ಟೇ (ಮೇ 15) ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿತ್ತು. ''ಈ ಬಾರಿ ಸರ್ಕಾರ ನಮ್ದೇ'' ಎಂದು ಬೀಗುತ್ತಿದ್ದ ಸಿದ್ದರಾಮಯ್ಯ, ಜನಾದೇಶ ನೋಡಿ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ.

'ದಾಸ' ಬಂದರೂ ಸಿದ್ದು ಗೆಲ್ಲಲಿಲ್ಲ: ದರ್ಶನ್ ಪ್ರಚಾರ ಫಲಿಸಲಿಲ್ಲ.! 'ದಾಸ' ಬಂದರೂ ಸಿದ್ದು ಗೆಲ್ಲಲಿಲ್ಲ: ದರ್ಶನ್ ಪ್ರಚಾರ ಫಲಿಸಲಿಲ್ಲ.!

''ಗೆದ್ದೇ ಗೆಲ್ಲುವೆ'' ಎಂಬ ಆತ್ಮವಿಶ್ವಾಸದಿಂದ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ರವರಿಗೆ ಅಲ್ಲೂ 'ಕೈ' ಸುಟ್ಟಿದೆ. 'ಚಾಮುಂಡೇಶ್ವರಿ' ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹೀನಾಯ ಸೋಲು ಕಂಡಿದ್ದಾರೆ. 'ಬಾದಾಮಿ' ಕ್ಷೇತ್ರದಲ್ಲೂ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಪ್ರಯಾಸದ ಗೆಲುವಷ್ಟೇ ಸಿದ್ದುಗೆ ಸಿಕ್ಕಿದೆ.

'ಕಾಂಗ್ರೆಸ್‌ ಸೋಲಿಗೆ ಸಿದ್ದರಾಮಯ್ಯ ಕಾರಣ, ಅವರಿದ್ದರೆ ಪಕ್ಷಕ್ಕೆ ಗೆಲುವಿಲ್ಲ' 'ಕಾಂಗ್ರೆಸ್‌ ಸೋಲಿಗೆ ಸಿದ್ದರಾಮಯ್ಯ ಕಾರಣ, ಅವರಿದ್ದರೆ ಪಕ್ಷಕ್ಕೆ ಗೆಲುವಿಲ್ಲ'

ಇನ್ನೂ ಸಿದ್ದು ಕ್ಯಾಬಿನೆಟ್ ನಲ್ಲಿದ್ದ ಸಚಿವರೆಲ್ಲ ಸಾಲಾಗಿ ಮಕಾಡೆ ಮಲಗಿದ್ದಾರೆ. ಒಮ್ಮಿದೊಮ್ಮೆಗೆ ಸಿದ್ದು ಖೇಲ್ ಖತಂ ಆಗಿರೋದ್ರಿಂದ ಅವರೀಗ ಬಹಳ ಅಪ್ ಸೆಟ್ ಆಗ್ಬಿಟ್ಟಿದ್ದಾರೆ. ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಂತೂ ಸಿದ್ದರಾಮಯ್ಯ ಕಣ್ಣೀರು ಸುರಿಸಿದ್ದಾರೆ. ಮುಂದೆ ಓದಿರಿ...

ಕಣ್ಣೀರಿಟ್ಟ ಸಿದ್ದರಾಮಯ್ಯ

ಕಣ್ಣೀರಿಟ್ಟ ಸಿದ್ದರಾಮಯ್ಯ

ಇಂದು ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಕಣ್ಣೀರು ಸುರಿಸಿದ್ದಾರೆ. ಸಿದ್ದರಾಮಯ್ಯ ಮಾತ್ರ ಅಲ್ಲ, ಅವರ ಜೊತೆಗೆ ಧರ್ಮಸೇನಾ ಸೇರಿದಂತೆ ಕೆಲ ಶಾಸಕರೂ ಕೂಡ ಕಣ್ಣೀರಿಟ್ಟಿದ್ದಾರೆ.

ಹುಲಿಯಂತಿದ್ದ ಸಿದ್ದರಾಮಯ್ಯ ಕುರಿಯಂತಾಗಿದ್ದೇಕೆ? ಛೇ, ಹೀಗಾಗಬಾರದಿತ್ತು! ಹುಲಿಯಂತಿದ್ದ ಸಿದ್ದರಾಮಯ್ಯ ಕುರಿಯಂತಾಗಿದ್ದೇಕೆ? ಛೇ, ಹೀಗಾಗಬಾರದಿತ್ತು!

ಭಾವೋದ್ವೇಗಕ್ಕೆ ಒಳಗಾದ ಸಿದ್ದರಾಮಯ್ಯ

ಭಾವೋದ್ವೇಗಕ್ಕೆ ಒಳಗಾದ ಸಿದ್ದರಾಮಯ್ಯ

ಉತ್ತಮ ಆಡಳಿತ ನೀಡಿದರೂ ಬಹುಮತ ಬರಲಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವುದಕ್ಕೆ ಬೇಸರಗೊಂಡ ಸಿದ್ದರಾಮಯ್ಯ ಭಾವೋದ್ವೇಗಕ್ಕೆ ಒಳಗಾದರು.

ನಿನ್ನೆ ಕೈಕಟ್ಟಿ ಹಿಂದೆ ನಿಂತಿದ್ದ ಸಿದ್ದರಾಮಯ್ಯ

ನಿನ್ನೆ ಕೈಕಟ್ಟಿ ಹಿಂದೆ ನಿಂತಿದ್ದ ಸಿದ್ದರಾಮಯ್ಯ

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದ ನಂತರ, ಆಘಾತಗೊಂಡಿದ್ದ ಸಿದ್ದರಾಮಯ್ಯ, ಪತ್ರಿಕಾಗೋಷ್ಟಿಯಲ್ಲಿ ಡಾ.ಜಿ.ಪರಮೇಶ್ವರ ಹಿಂದೆ ಕೈಕಟ್ಟಿ ನಿಂತಿದ್ದ ದೃಶ್ಯ ನಿನ್ನೆ ಕಂಡುಬಂದಿತ್ತು. {ಕೃಪೆ: ಎ.ಎನ್.ಐ}

ಇಂದು ಶಾಸಕಾಂಗ ಸಭೆಯಲ್ಲಿ ನಡೆದಿದ್ದೇನು.?

ಇಂದು ಶಾಸಕಾಂಗ ಸಭೆಯಲ್ಲಿ ನಡೆದಿದ್ದೇನು.?

ಜೆಡಿಎಸ್ ಜೊತೆಗೆ ಸರ್ಕಾರ ರಚಿಸುವ ನಿಟ್ಟಿನಲ್ಲಿ ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಇದೇ ವೇಳೆ ಶಾಸಕರ ಸಹಿ ಸಂಗ್ರಹವನ್ನೂ ಕಾಂಗ್ರೆಸ್ ಮಾಡಿದೆ. ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಿ, ಶಾಸಕರ ಸಹಿ ಸಂಗ್ರಹವನ್ನ ಅವರಿಗೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.

English summary
Karnataka Election Results 2018: Siddaramaiah becomes emotional in LP meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X