ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋತು ಸುಣ್ಣವಾದ ಸಿದ್ದರಾಮಯ್ಯ ಸಂಪುಟದ 15 ಸಚಿವರು

By Mahesh
|
Google Oneindia Kannada News

ಬೆಂಗಳೂರು, ಮೇ 15: ನಿರೀಕ್ಷೆಯನ್ನು ಮೀರಿ ಮತದಾರ ಮಹಾಪ್ರಭು ತನ್ನ ಜನಾದೇಶವನ್ನು ಮೇ 15ರಂದು ನೀಡಿದ್ದಾನೆ. ಅತಂತ್ರ ವಿಧಾನಸಭೆ ಸೃಷ್ಟಿಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಾಧ್ಯತೆ ಉಂಟಾಗಿದ್ದು, ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಈ ನಡುವೆ ಸಿದ್ದರಾಮಯ್ಯ ಸಚಿವ ಸಂಪುಟದ 15 ಸಚಿವರು ಸೋತು ಸುಣ್ಣವಾಗಿದ್ದಾರೆ.

ಸಿದ್ದರಾಮಯ್ಯ ಸಚಿವ ಸಂಪುಟದ ಪ್ರಮುಖ ಶಾಸಕರು, ಸಚಿವರನ್ನು ಆಯ್ಕೆ ಮಾಡುವಲ್ಲಿ ಮತದಾರ ತೆಗೆದುಕೊಂಡ ನಿಲುವು ಹಲವು ಅಚ್ಚರಿಯ ಫಲಿತಾಂಶ ನೀಡಿದೆ.

ಶಾಪ ಮುಂದುವರಿಕೆ : ಮುಜರಾಯಿ ಸಚಿವರು ಚುನಾವಣೆ ಸೋಲು ಶಾಪ ಮುಂದುವರಿಕೆ : ಮುಜರಾಯಿ ಸಚಿವರು ಚುನಾವಣೆ ಸೋಲು

ಬೆಂಗಳೂರಿನಲ್ಲಿ ಸರ್ವಜ್ಞ ನಗರದಲ್ಲಿ ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದರೆ, ಮಗನ ತಪ್ಪಿಗೆ ತಂದೆಗೇಕೆ ಶಿಕ್ಷೆ ಎಂಬ ಆಶಯದೊಂದಿಗೆ ಹ್ಯಾರೀಸ್ ಅವರನ್ನು ಆರಿಸಿದ್ದಾರೆ.

Karnataka Assembly Election Results 2018 : 15 ministers from Siddaramaiah’s cabinet have lost this election

ದಕ್ಷಿಣ ಕನ್ನಡದ ಕೋಮುಲಗಭೆಯ ಹಿಂದಿನ ಕೈವಾಡ ಎಂಬ ಆರೋಪ ಹೊತ್ತ ರಮಾನಾಥ್ ರೈ, ಇದೇ ನನ್ನ ಕೊನೆ ಚುನಾವಣೆ ಎಂದ ಹಿರಿಯ ರಾಜಕೀಯ ಮುಖಂಡ ಕಾಗೋಡು ತಿಮ್ಮಪ್ಪ, ನಾನು ಹರಕೆಯ ಕುರಿ ಎಂದ ಎಚ್ ಎಂ ರೇವಣ್ಣ, ಸಿಎಂ ಸಿದ್ದರಾಮಯ್ಯ ಅವರ ಪರಮಾಪ್ತ ಎಚ್ ಸಿ ಮಹಾದೇವಪ್ಪ, ಜಿಲ್ಲಾಧಿಕಾರಿ ವಿರುದ್ಧ ತಿರುಗಿಬಿದ್ದ ಅರಕಲಗೂಡು ಮಂಜು, ಪುಂಡಾಟ ಮಾಡಿದ ವಿನಯ್ ಕುಲಕರ್ಣಿ ಸೇರಿದಂತೆ ಹಲವರನ್ನು ಆಡಳಿತ ವಿರೋಧಿ ಅಲೆಯಿಂದಾಗಿ ಕೊಚ್ಚಿ ಹೋಗುವಂತೆ ಮಾಡಿದ್ದಾರೆ.

ಸೋಲು ಕಂಡ ಸಿದ್ದರಾಮಯ್ಯ ಸರ್ಕಾರದ 15 ಸಚಿವರುಗಳು ಯಾರು ಯಾರು? ಎಲ್ಲೆಲ್ಲಿ ಸೋಲು ಕಂಡಿದ್ದಾರೆ? ಮುಂದೆ ಓದಿ..

ರಮಾನಾಥ್ ರೈ- ಬಂಟ್ವಾಳ

ರಮಾನಾಥ್ ರೈ- ಬಂಟ್ವಾಳ

ಹಿರಿಯ ಕಾಂಗ್ರೆಸ್ ನಾಯಕ, ಅರಣ್ಯ ಖಾತೆ ಸಚಿವ ರಮಾನಾಥ್ ರೈ ಅವರು ಬಿಜೆಪಿಯ ಯುವ ಮುಖಂಡ ರಾಜೇಶ್ ನಾಯ್ಕ್ ವಿರುದ್ಧ ಸೋಲು ಕಂಡಿದ್ದಾರೆ.
ರಮಾನಾಥ್ ರೈ ಅವರ ಸೋಲಿಗೆ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ವಿರುದ್ಧ ಆಡಳಿತ ವಿರೋಧಿ ಅಲೆ, ಹಿಂದೂ ವಿರೋಧಿ ಎಂಬ ಹಣೆ ಪಟ್ಟಿ, ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಅನುದಾನ ನಿಲ್ಲಿಸಿದ್ದು ಕಾರಣ ಎನ್ನಬಹುದು.
2018ರ ಬಂಟ್ವಾಳ ಫಲಿತಾಂಶ:
* ರಮಾನಾಥ್ ರೈ : 81,831

* ರಾಜೇಶ್ ನಾಯ್ಕ್ : 97,802

ಗೆಲುವಿನ ಅಂತರ : 15,971

ಎಚ್ಎಂ ರೇವಣ್ಣ- ಚನ್ನಪಟ್ಟಣ

ಎಚ್ಎಂ ರೇವಣ್ಣ- ಚನ್ನಪಟ್ಟಣ

ಬೆಂಗಳೂರಿನಲ್ಲಿ ಸ್ಪರ್ಧಿಸಲು ಬಯಸಿದ್ದ ಸಾರಿಗೆ ಎಚ್ಎಂ ರೇವಣ್ಣ ಅವರನ್ನು ಚನ್ನಪಟ್ಟಣದಲ್ಲಿ ಸ್ಪರ್ಧಿಸುವಂತೆ ಸೂಚಿಸಲಾಯಿತು. ನಾನು ಇಲ್ಲಿ ಹರಕೆಯ ಕುರಿ ಎಂದು ಹೇಳುತ್ತಾ ಕ್ಷೇತ್ರಕ್ಕೆ ಬಂದ ರೇವಣ್ಣ, ನಂತರ ಟಗರುವಿನಂತೆ ಗುಮ್ಮುತ್ತೇನೆ ಎಂದಿದ್ದರು. ಆದರೆ, ಚನ್ನಪಟ್ಟಣದಲ್ಲಿ ಎಚ್ ಡಿ ಕುಮಾರಸ್ವಾಮಿ 87,995 ಮತಗಳಿಸಿ ಜಯಭೇರಿ ಬಾರಿಸಿದರೆ, ಬಿಜೆಪಿಯ ಸಿ.ಪಿ ಯೋಗೇಶ್ವರ್ 66,465 ಮತಗಳಿಸಿ ಎರಡನೇ ಸ್ಥಾನ ಗಳಿಸಿದರೆ, ಎಚ್ ಎಂ ರೇವಣ್ಣ 30,208 ಮತಗಳಿಸಿ ಮೂರನೇ ಸ್ಥಾನಕ್ಕೆ ಕುಸಿದರು.

ಕಾಗೋಡು ತಿಮ್ಮಪ್ಪ- ಸಾಗರ

ಕಾಗೋಡು ತಿಮ್ಮಪ್ಪ- ಸಾಗರ

ಕರ್ನಾಟಕ ರಾಜಕೀಯ ರಂಗದ ಅತ್ಯಂತ ಹಿರಿಯ(86) ಮುಖಂಡ ಕಾಗೋಡು ತಿಮ್ಮಪ್ಪ ಅವರು ಸಾಗರ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಹರತಾಳು ಹಾಲಪ್ಪ ವಿರುದ್ಧ ಸೋಲು ಕಂಡಿದ್ದಾರೆ.

ಹಾಲಪ್ಪ 78, 475 ಮತಗಳನ್ನು ಗಳಿಸಿದರೆ, ಕಾಗೋಡು ತಿಮ್ಮಪ್ಪ 70436 ಮತಗಳನ್ನು ಗಳಿಸಿದರು. 8039 ಮತಗಳ ಅಂತರದಿಂದ ಹಾಲಪ್ಪ ಗೆಲುವು ಸಾಧಿಸಿದ್ದಾರೆ. ಇದೇ ನನ್ನ ಕೊನೆ ಚುನಾವಣೆ ಎಂದಿದ್ದ ಕಾಗೋಡು ಅವರಿಗೆ ಕೊನೆ ಕ್ಷಣದಲ್ಲಿ ಅಳಿಯ ಬೇಳೂರು ಗೋಪಾಲಕೃಷ್ಣ ಜತೆಗೂಡಿದರೂ ಗೆಲುವು ಲಭಿಸಲಿಲ್ಲ
ಸಂತೋಷ್ ಲಾಡ್- ಕಲಘಟಗಿ

ಸಂತೋಷ್ ಲಾಡ್- ಕಲಘಟಗಿ

ಸಚಿವ ಸ್ಥಾನ ಕಳೆದುಕೊಂಡು ಅನೇಕ ಕೇಸುಗಳನ್ನು ಮೈಮೇಲೆ ಎಳೆದುಕೊಂಡಿದ್ದ ಸಂತೋಷ್ ಲಾಡ್ ಅವರು ಬಳ್ಳಾರಿಯ ಉದ್ಯಮಿಗಳಾದ ಆನಂದ್ ಸಿಂಗ್, ನಾಗೇಂದ್ರ ಅವರನ್ನು ಕಾಂಗ್ರೆಸ್ಸಿಗೆ ಕರೆತಂದಿದ್ದೇ ಸಾಧನೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸದಿರುವುದು ಅವರಿಗೆ ಮುಳುವಾಯಿತು.

ಬಿಜೆಪಿಯ ಸಿಎಂ ನಿಂಬಣ್ಣವರ 83,267 ಮತಗಳನ್ನು ಗಳಿಸಿದರೆ, ಸಂತೋಷ್ ಲಾಡ್ 57,214 ಮತಗಳಿಸಿ, 25,849 ಅಂತರದಿಂದ ಹೀನಾಯ ಸೋಲು ಕಂಡರು.

English summary
15 ministers from Siddaramaiah’s cabinet have lost this election. There has been a major anti-incumbency against them. The names of those who lost their seat are Ramanath Rai, H.M. Revanna and others
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X