ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳದಲ್ಲಿ ಅರಳಿದ ಕಮಲ: ಬಿಜೆಪಿಗೆ ಮೇಲುಗೈ

By Harshitha
|
Google Oneindia Kannada News

ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕಮಲ ಅರಳಿದೆ. ಐದು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಉಳಿದ ಎರಡು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ಅಷ್ಟಕ್ಕೂ, 2013 ರ ಚುನಾವಣೆಯಲ್ಲಿ ಕೊಪ್ಪಳ ಕೈವಶವಾಗಿತ್ತು. ಐದು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿ ಆಗಿತ್ತು. ಆದ್ರೀಗ, ಆ ಮೂರು ಸ್ಥಾನಗಳಲ್ಲಿ ಎರಡನ್ನು ಕಾಂಗ್ರೆಸ್ ಕಳೆದುಕೊಂಡಿದೆ.

ಗದಗ ಜಿಲ್ಲೆಯಲ್ಲಿ ಕಮಲ ಪಕ್ಷ ಮತ್ತೆ ಕಿಲ ಕಿಲ ಗದಗ ಜಿಲ್ಲೆಯಲ್ಲಿ ಕಮಲ ಪಕ್ಷ ಮತ್ತೆ ಕಿಲ ಕಿಲ

ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಕನಕಗಿರಿಯಲ್ಲಿ ಜಯಭೇರಿ ಬಾರಿಸಿದ್ದ ಶಿವರಾಜ್ ತಂಗಡಗಿ ಹಾಗೂ ಯಲಬುರ್ಗದ ಬಸವರಾಜ್ ರಾಯರೆಡ್ಡಿ ಈ ಬಾರಿ ಸೋಲು ಕಂಡಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಎರಡು ಸ್ಥಾನಗಳು ನಷ್ಟವಾಗಿದೆ.

Karnataka Election Results 2018: Koppal District winners and losers

ಕೊಪ್ಪಳದಲ್ಲಿ ಕಳೆದ ಬಾರಿ ಗೆದ್ದಿದ್ದ ರಾಘವೇಂದ್ರ ಹಿಟ್ನಾಳ್ ಈ ಬಾರಿಯೂ ಗೆಲುವು ಕಂಡಿರುವುದರಿಂದ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಕೊಪ್ಪಳ ಜಿಲ್ಲೆ ವಿಧಾನಸಭೆ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಗಳಿಸಿದ ಮತಗಳು ಸೋತವರು ಪಕ್ಷ ಗಳಿಸಿದ ಮತಗಳು
ಕುಷ್ಟಗಿ ಅಮರೇಗೌಡ ಲಿಂಗನಗೌಡ ಪಾಟಿಲ್ ಬಯ್ಯಾಪುರ
ಕಾಂಗ್ರೆಸ್ 87567
ದೊಡ್ಡನಗೌಡ ಹನಮಗೌಡ ಪಾಟಿಲ್
ಬಿಜೆಪಿ 69536
ಕನಕಗಿರಿ ಬಸವರಾಜ್
ಬಿಜೆಪಿ 87735
ಶಿವರಾಜ್ ತಂಗಡಗಿ
ಕಾಂಗ್ರೆಸ್
73510
ಗಂಗಾವತಿ

ಪರಣ್ಣ ಮುನವಳ್ಳಿ ಬಿಜೆಪಿ 67617 ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ 59644
ಯಲಬುರ್ಗ ಹಾಲಪ್ಪ ಆಚಾರ್ ಬಿಜೆಪಿ 79072 ಬಸವರಾಜ್ ರಾಯರೆಡ್ಡಿ ಕಾಂಗ್ರೆಸ್ 65754
ಕೊಪ್ಪಳ ರಾಘವೇಂದ್ರ ಬಸವರಾಜ್ ಹಿಟ್ನಾಲ್ ಕಾಂಗ್ರೆಸ್ 98783 ಅಮರೇಶ್ ಸಂಗಣ್ಣ ಕರಡಿ ಬಿಜೆಪಿ 72432
English summary
Karnataka Election Results 2018 Koppal district results: Get complete information about winners and losers with their constituencies and party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X