ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ : ಹಾಲಿ ಶಾಸಕ ವರ್ತೂರು ಪ್ರಕಾಶ್ ಗೆ ತೀವ್ರ ಮುಖಭಂಗ

By Mahesh
|
Google Oneindia Kannada News

ಬೆಂಗಳೂರು, ಮೇ 15 : ಕರ್ನಾಟಕ ವಿಧಾನಸಭೆ ಚುನಾವಣೆಯ ಜನಾದೇಶ ಇದೀಗ ಹೊರ ಬಂದಿದೆ. ಕೋಲಾರ ಅಸೆಂಬ್ಲಿ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳಲ್ಲಿದ್ದ ವರ್ತೂರು ಪ್ರಕಾಶ್ ಅವರು ಭಾರಿ ಅಂತರದಿಂದ ಸೋಲು ಕಾಣುತ್ತಿದ್ದಾರೆ. ಜೆಡಿಎಸ್ ನ ಶ್ರೀನಿವಾಸಗೌಡ ಅವರು ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವಿನ ಘೋಷಣೆ ಬಾಕಿಯಿದೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ 12ರಂದು ಮತದಾನವಾಗಿದ್ದು, ಚುನಾವಣಾ ಪೂರ್ವ ಸಮೀಕ್ಷೆ, ಅಭಿಪ್ರಾಯಗಳ ಸಂಗ್ರಹ ಕುತೂಹಲಕಾರಿ ಫಲಿತಾಂಶವನ್ನು ನೀಡಿತ್ತು. ಆದರೆ, ಮೇ 15ರ ಜನಾದೇಶದಲ್ಲಿ ಬಿಜೆಪಿಗೆ ಬಹುಮತ ಸಿಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

Karnataka election results 2018 : JDS K Srinivasa Gowda wins in Kolar, Varthur Prakash loses

ಕೋಲಾರದಲ್ಲಿ ವರ್ತೂರು ಪ್ರಕಾಶ್ ಗೆ ಹೀನಾಯ ಸೋಲು

ಈ ಸಮಯದಲ್ಲಿ ಕೋಲಾರ ಅಸೆಂಬ್ಲಿ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳಲ್ಲಿದ್ದ ವರ್ತೂರು ಪ್ರಕಾಶ್ ಅವರು ಭಾರಿ ಅಂತರದಿಂದ ಸೋಲು ಕಾಣುತ್ತಿದ್ದಾರೆ.

11.10ರ ಸಮಯಕ್ಕೆ ಜೆಡಿಎಸ್ ಅಭ್ಯರ್ಥಿ ಕೆ ಶ್ರೀನಿವಾಸ ಗೌಡ ಅವರು 17357 ಮತಗಳನ್ನು ಗಳಿಸಿದ್ದರೆ, ನಮ್ಮ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ವರ್ತೂರು ಪ್ರಕಾಶ್ ಅವರು 9719 ಮತಗಳನ್ನು ಗಳಿಸಿ ಸೋಲಿನ ಭೀತಿಯಲ್ಲಿದ್ದಾರೆ. ಕಾಂಗ್ರೆಸ್ಸಿನ ಸಯ್ಯದ್ ಜಮೀರ್ ಪಾಶ ಅವರು ಕಾಂಗ್ರೆಸ್ಸಿನ 2504ಮತಗಳನ್ನು ಮಾತ್ರ ಗಳಿಸಿದ್ದಾರೆ. ಇನ್ನೂ ಕೆಲ ಸುತ್ತಿನ ಎಣಿಕೆ ಬಾಕಿಯಿದೆ.

English summary
Karnataka election results 2018 : JDS K Srinivasa Gowda wins in Kolar, Varthur Prakash loses
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X