ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬಹುಮತದ ಕನಸು ಭಗ್ನಗೊಳಿಸಿದ್ದು 'ನೋಟಾ'

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 19: ಭಾರತೀಯ ಜನತಾ ಪಕ್ಷ (ಬಿಜೆಪಿ) ಇನ್ನಿಲ್ಲದ ಪ್ರಯತ್ನ ಪಟ್ಟು ಅಧಿಕಾರಕ್ಕೆ ಬಂದರೂ ಬಹುಮತ ಸಿಗದೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮುಖಭಂಗವಾಗುವ ಲಕ್ಷಣಗಳು ಕಂಡು ಬಂದಿವೆ.

ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸ್ಪಷ್ಟ ಬಹುಮತ ಗಳಿಸುವಲ್ಲಿ ಅದು ಎಡವಿದೆ. 222 ಸದಸ್ಯರುಳ್ಳ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಗಳಿಸಲು ಯಾವುದೇ ಒಂದು ಪಕ್ಷಕ್ಕೂ ಸದ್ಯದ ಪರಿಸ್ಥಿತಿಯಲ್ಲಿ 111 ಶಾಸಕರ ಬೆಂಬಲ ಬೇಕು. ಬಿಜೆಪಿಯ ಬಳಿ ಕೇವಲ 104 ಶಾಸಕರಿದ್ದಾರೆ, ಬಹುಮತಕ್ಕಾಗಿ ಕನಿಷ್ಠ 7-9 ಶಾಸಕರ ಅಗತ್ಯವಿದೆ.

ಬೆಂಗಳೂರಲ್ಲಿ ಇನ್ನೆರಡು ಕ್ಷೇತ್ರ ಬಿಜೆಪಿ 'ಕೈ' ವಶವಾಗಬೇಕಿತ್ತು!ಬೆಂಗಳೂರಲ್ಲಿ ಇನ್ನೆರಡು ಕ್ಷೇತ್ರ ಬಿಜೆಪಿ 'ಕೈ' ವಶವಾಗಬೇಕಿತ್ತು!

ಚುನಾವಣಾ ಫಲಿತಾಂಶ 2018ರ ಅಂಕಿ ಅಂಶ ಗಮನಿಸಿದರೆ, ಬಿಜೆಪಿ ಹಾಗೂ ಸ್ಪಷ್ಟ ಬಹುಮತದ ನಡುವೆ ಕೇವಲ 6730 ಮತಗಳ ಅಂತರವಿರುವುದು ಅಚ್ಚರಿ ಮೂಡಿಸುತ್ತಿದೆ.

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್​ ಕೇವಲ ಕೆಲವೇ ಮತಗಳ ಅಂತರದಲ್ಲಿ ಬಿಜೆಪಿಯನ್ನು ಸೋಲನುಭವಿಸಿದ 9 ಕ್ಷೇತ್ರಗಳಿವೆ. ಇದರಲ್ಲೂ ಬೆಂಗಳೂರಿನಲ್ಲಿ ಇನ್ನೆರಡು ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ಕಳೆದ ಚುನಾವಣೆಯಂತೆ 12 ಕ್ಷೇತ್ರಗಳಲ್ಲಿ ಮಾತ್ರ ಗಳಿಸಿದೆ. ಇಲ್ಲದಿದ್ದರೆ ಸುಲಭವಾಗಿ ಮ್ಯಾಜಿಕ್ ನಂಬರ್ ದಾಟುತ್ತಿತ್ತು.

ಕೆಲವೇ ಮತಗಳ ಅಂತರದಲ್ಲಿ ಬಿಜೆಪಿಗೆ ಸೋಲು

ಕೆಲವೇ ಮತಗಳ ಅಂತರದಲ್ಲಿ ಬಿಜೆಪಿಗೆ ಸೋಲು

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್​ ಕೇವಲ ಕೆಲವೇ ಮತಗಳ ಅಂತರದಲ್ಲಿ ಬಿಜೆಪಿಯನ್ನು ಸೋಲನುಭವಿಸಿದ 9 ಕ್ಷೇತ್ರಗಳಿವೆ. ಅಂದರೆ ಕಾಂಗ್ರೆಸ್​ಗೆ ಸಿಕ್ಕ ಕೆಲವೇ ಮತಗಳು ಬಿಜೆಪಿ ಪಾಲಾಗುತ್ತಿದ್ದರೆ ಕಮಲ ಪಾಳಯ ಸುಲಭವಾಗಿ 113 ಕ್ಷೇತ್ರಗಳನ್ನು ಗೆದ್ದು ಬೀಗುತ್ತಿತ್ತು.

ಮಸ್ಕಿ, ಹಿರೇಕೆರೂರು, ಕುಂದಗೋಳ, ಯಲ್ಲಾಪುರ, ಬದಾಮಿ, ಗದಗ, ಶೃಂಗೇರಿ, ಅಥಣಿ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರಗಳಲ್ಲಿ ಒಟ್ಟು ಮತಗಳಲ್ಲಿ ಶೇ. 1.5ಕ್ಕಿಂತಲೂ ಕಡಿಮೆ ಅಂತರದಲ್ಲಿ ಬಿಜೆಪಿ ಸೋಲಿಗೆ ಶರಣಾಗಿದೆ. ಈ 9 ಕ್ಷೇತ್ರಗಳಲ್ಲಿ ಬಿಜೆಪಿಯು ಒಟ್ಟು 6730 ಮತಗಳನ್ನು ಹೆಚ್ಚಿಗೆ ಪಡೆಯುತ್ತಿದ್ದರೆ ಸ್ಪಷ್ಟ ಬಹುಮತ ಪಡೆಯುತ್ತಿತ್ತು.
ಬೆಂಗಳೂರಿನಲ್ಲಿ 2 ಕ್ಷೇತ್ರ ಬಿಜೆಪಿಗೆ ಸಿಗಬೇಕಿತ್ತು

ಬೆಂಗಳೂರಿನಲ್ಲಿ 2 ಕ್ಷೇತ್ರ ಬಿಜೆಪಿಗೆ ಸಿಗಬೇಕಿತ್ತು

ಬೆಂಗಳೂರಿನಲ್ಲಿ 26 ಹಾಲಿ ಶಾಸಕರ ಪೈಕಿ 22 ಮಂದಿ ಮರು ಆಯ್ಕೆಯಾಗಿದ್ದಾರೆ. ಮತದಾರರು ಬದಲಾವಣೆ ಬಯಸಿಲ್ಲ ಎನ್ನಬಹುದಾದರೂ, ಸರಿ ಸುಮಾರು 43,000 ಮಂದಿ ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪೈಕಿ ಮಹದೇವಪುರದಲ್ಲಿ ಅತಿ ಹೆಚ್ಚು 3482 ಮತಗಳು ಬಂದಿವೆ.
ಆದರೆ, ಅತಿ ಹೆಚ್ಚು ನೋಟಾ ದಾಖಲಾಗಿದ್ದು ಮಾತ್ರ ಅತಿ ದೊಡ್ಡ ಕ್ಷೇತ್ರ ದಕ್ಷಿಣ ಬೆಂಗಳೂರಿನಲ್ಲಿ, 3,31,348 ಮತಗಳ ಪೈಕಿ 15,289(4.8%) ಮತಗಳು ನೋಟಾ ಆಗಿವೆ.

ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ

ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಬೆಂಗಳೂರು ಸೇರಿದಂತೆ ಕರ್ನಾಟಕದ 8 ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು ನೋಟಾ ಕಾರಣವಾಗಿದೆ. ಇದಕ್ಕೆ ನಾವು ಸರಿಯಾದ ಪ್ರಚಾರ ಕಾರ್ಯ ನಡೆಸದೇ ಇರುವುದು ಕಾರಣ ಇರಬಹುದು ಎಂದಿದ್ದಾರೆ.

ಆಳಂದ, ಬಾದಾಮಿ, ಗದಗ, ಹಿರೇಕೆರೂರು, ಕುಂದಗೋಳ, ಮಸ್ಕಿ, ಪಾವಗಡ, ಶೃಂಗೇರಿ, ಅಥಣಿ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರಗಳಲ್ಲಿ ಒಟ್ಟು ಮತಗಳಲ್ಲಿ ಶೇ. 1.5ಕ್ಕಿಂತಲೂ ಕಡಿಮೆ ಅಂತರದಲ್ಲಿ ಬಿಜೆಪಿ ಸೋಲಿಗೆ ಶರಣಾಗಿದೆ. ಈ ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ನೋಟಾ ಹೆಚ್ಚಿನ ಮತಗಳಿಸಿದೆ.
ಶೇಕಡಾವಾರು ಮತಗಳಿಕೆ

ಶೇಕಡಾವಾರು ಮತಗಳಿಕೆ

ಇನ್ನು ಕಾಂಗ್ರೆಸ್​ಗೆ ಬಿಜೆಪಿಗಿಂತ 6 ಲಕ್ಷದ 38 ಸಾವಿರದ 621 ಮತಗಳು ಹೆಚ್ಚು ಸಿಕ್ಕಿವೆ. ಹೀಗಿದ್ದರೂ 113 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಬೇಕಿದ್ದರೆ ಬಿಜೆಪಿಗಿಂತ ಕನಿಷ್ಟವೆಂದರೆ 1 ಲಕ್ಷದ 25 ಸಾವಿರದ 608 ಹೆಚ್ಚಿನ ಮತಗಳನ್ನು ಗಳಿಸಬೇಕಿತ್ತು. ಬಿಜೆಪಿಗೆ 36.2% ಶೇಕಡಾವಾರು ಮತಗಳು ಸಿಕ್ಕಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಗೆ 57% ಮತಪಾಲು ಸಿಕ್ಕಿದೆ

English summary
Karnataka Election results 2018 : What came in between the BJP and an absolute majority was Bengaluru. It was a static performance by the BJP and it did not manage to add to its tally. The BJP would have hoped it had got at least 6 more seats in Bengaluru, but ended up 11 out of 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X