ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Flashback : ಶಿಕಾರಿಪುರದಲ್ಲಿ ಯಡಿಯೂರಪ್ಪ ಒಮ್ಮೆ ಸೋಲು ಕಂಡಿದ್ದಾರೆ!

|
Google Oneindia Kannada News

Recommended Video

ಅಂದೊಂದು ಬಾರಿ ಬಿ ಎಸ್ ಯಡಿಯೂರಪ್ಪ ಶಿಕಾರಿಪುರದಲ್ಲಿ ಸೋತ್ತಿದ್ದರು | Flashback | Oneindia Kannada

ಶಿವಮೊಗ್ಗ, ಮಾರ್ಚ್ 19 : ಶಿಕಾರಿಪುರ ಪ್ರತಿ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆಯುವ ಕ್ಷೇತ್ರ. ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರವಿದು. ಯಡಿಯೂರಪ್ಪ ಅವರು ಇಲ್ಲಿ ಗೆಲುವನ್ನು ಮಾತ್ರ ಕಂಡಿಲ್ಲ. ಸೋಲು ಸಹ ಅನುಭವಿಸಿದ್ದಾರೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು 2018ರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಹೌದು. ಪ್ರಸ್ತುತ ಶಿವಮೊಗ್ಗ ಸಂಸದರಾಗಿರುವ ಯಡಿಯೂರಪ್ಪ ಅವರು ಈ ಬಾರಿಯ ಚುನಾವಣೆಗೆ ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

Election flashback: 'ದೈತ್ಯ ಸಂಹಾರಿ' ಜನತಾ ಪರಿವಾರದ ಜೀವಿಜಯElection flashback: 'ದೈತ್ಯ ಸಂಹಾರಿ' ಜನತಾ ಪರಿವಾರದ ಜೀವಿಜಯ

ಶಿಕಾರಿಪುರ ಕ್ಷೇತ್ರದ ಹಾಲಿ ಶಾಸಕರು ಬಿ.ವೈ.ರಾಘವೇಂದ್ರ. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರು 2014ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. 2013ರಲ್ಲಿ ಶಿಕಾರಿಪುರದಲ್ಲಿ ಗೆದ್ದಿದ್ದ ಯಡಿಯೂರಪ್ಪ ಅವರು 2014ರ ಲೋಕಸಭೆ ಚುನಾವಣೆಯಲ್ಲಿದ್ದ ಗೆದ್ದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Karnataka election flashback : Yeddyurappa lost 1999 election in Shikaripura

ಪ್ರತಿ ವಿಧಾನಸಭೆ ಚುನಾವಣೆಯಲ್ಲಿಯೂ ಶಿಕಾರಿಪುರ ಕ್ಷೇತ್ರ ಪ್ರತಿಷ್ಠೆಯ ಕಣವಾಗುತ್ತದೆ. 2008ರ ಚುನಾವಣೆಯಲ್ಲಿ ಎಸ್.ಬಂಗಾರಪ್ಪ ಅವರು ಸಮಾಜವಾದಿ ಪಕ್ಷದಿಂದ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದರು. ಆಗ ಇಡೀ ರಾಜ್ಯ ಶಿಕಾರಿಪುರದತ್ತ ಕಣ್ಣಿಟ್ಟಿತ್ತು. ಯಡಿಯೂರಪ್ಪ ಜಯಗಳಿಸಿದ್ದರು.

ಕೂಡ್ಲಿಗಿಯ 'ಹಳೆ ಹುಲಿ' ಬೊಮ್ಮಣ್ಣ, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆಕೂಡ್ಲಿಗಿಯ 'ಹಳೆ ಹುಲಿ' ಬೊಮ್ಮಣ್ಣ, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ

ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಅವರ ಪಾರುಪತ್ಯ ಶಿಕಾರಿಪುರದಲ್ಲಿದೆ. ಆದರೆ, ಯಡಿಯೂರಪ್ಪ ಅವರು ಸೋಲಿಲ್ಲದ ಸರದಾರರು ಏನಲ್ಲ. 8 ವಿಧಾನಸಭಾ ಚುನಾವಣೆಗಳ ಪೈಕಿ ಯಡಿಯೂರಪ್ಪ ಒಮ್ಮೆ ಸೋಲು ಕಂಡಿದ್ದಾರೆ.

ಶಿವಮೊಗ್ಗ ರಾಜಕೀಯ : ಶಿಕಾರಿಪುರದಿಂದ ಬಂದ ಹೊಸ ಸುದ್ದಿ!ಶಿವಮೊಗ್ಗ ರಾಜಕೀಯ : ಶಿಕಾರಿಪುರದಿಂದ ಬಂದ ಹೊಸ ಸುದ್ದಿ!

1999ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಾಲಿಂಗಪ್ಪ ಅವರು ಯಡಿಯೂರಪ್ಪ ಅವರಿಗೆ ಸೋಲಿನ ರುಚಿ ತೋರಿಸಿದ್ದರು. 7,561 ಮತಗಳಿಂದ ಯಡಿಯೂರಪ್ಪ ಅವರನ್ನು ಸೋಲಿಸಿದ್ದರು.

ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ 48,291 ಮತ, ಮಹಾಲಿಂಗಪ್ಪ ಅವರು 55,852 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ನಗರದ ಮಹದೇವಪ್ಪ 1,997 ಮತ್ತು ಬಿಎಸ್‌ಪಿಯ ಹೊಲೆಯಪ್ಪ ಎ.ಕೆ. 285 ಮತಗಳನ್ನು ಪಡೆದಿದ್ದರು.

English summary
Election flashback : Karnataka BJP president B.S.Yeddyurappa lost 1999 assembly elections in Shikaripura assembly constituency, Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X