ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಾನತುಗೊಂಡ ಜೆಡಿಎಸ್ ಶಾಸಕರಿಗೆ ಮತದಾನ ಹಕ್ಕು ಇದ್ಯಾ?

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 12: 2016ರ ರಾಜ್ಯಸಭೆ ಚುನಾವಣೆ ವೇಳೆಯಲ್ಲಿ 'ಕ್ರಾಸ್ ವೋಟಿಂಗ್' ಮಾಡಿದ ಜೆಡಿಎಸ್ ನ ಶಾಸಕರು ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಬಹುದೇ? ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಹೌದು.

ಅಂದಿನ ಅಸೆಂಬ್ಲಿ ಸ್ಪೀಕರ್ ಕೆ.ಬಿ ಕೋಳಿವಾಡ ಅವರು ರೆಬೆಲ್ ಶಾಸಕರ ಕೇಸನ್ನು ಇನ್ನೂ ಬಾಕಿ ಉಳಿಸಿದ್ದಾರೆ. ಹೀಗಾಗಿ, 7 ಮಂದಿ ಶಾಸಕರು ಈ ಬಾರಿ ಮತದಾನ ಮಾಡಬಹುದಾಗಿದೆ.

ರಾಜ್ಯಸಭಾ ಚುನಾವಣೆ: ಇಲ್ಲಿದೆ ಅಭ್ಯರ್ಥಿಗಳ ಅಂತಿಮ ಪಟ್ಟಿರಾಜ್ಯಸಭಾ ಚುನಾವಣೆ: ಇಲ್ಲಿದೆ ಅಭ್ಯರ್ಥಿಗಳ ಅಂತಿಮ ಪಟ್ಟಿ

ಮಾರ್ಚ್ 23ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಳಿವಾಡ ಅವರು ಇನ್ನೂ ಯಾವುದೇ ಆದೇಶ ನೀಡಿಲ್ಲ. ಹೀಗಾಗಿ, ಅವರು ಇನ್ನೂ ಶಾಸಕರಾಗಿ ಪರಿಗಣಿಸಲಾಗುತ್ತದೆ. ಮತದಾನ ಮಾಡಬಹುದು. ಪ್ರಕರಣ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ.

Can Suspended JD(S) MLAs vote in RS polls

Recommended Video

ಎಸ್‌.ಎಂ.ಕೃಷ್ಣ ಭೇಟಿ ಮಾಡಿದ ಜೆಡಿಎಸ್ ಬಂಡಾಯ ಶಾಸಕರು | Oneindia Kannada

ಚುನಾವಣೆ ನಿಯಮಗಳ ಪ್ರಕಾರ, ರೆಬೆಲ್ ಶಾಸಕರು ಮತದಾನ ಮಾಡುವಾಗ, ತಾವು ಹಾಕಿದ ಮತವನ್ನು ಜೆಡಿಎಸ್ ನ ಎಲೆಕ್ಷನ್ ಏಜೆಂಟ್ ಗೆ ತೋರಿಸಬೇಕು. ಮತ ಯಾರಿಗೆ ಬೇಕಾದರೂ ಹಾಕಬಹುದು.

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ನ 3 ಅಭ್ಯರ್ಥಿಗಳ ಹೆಸರು ಅಂತಿಮರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ನ 3 ಅಭ್ಯರ್ಥಿಗಳ ಹೆಸರು ಅಂತಿಮ

ಜೆಡಿಎಸ್ ನಿಂದ ಅಮಾನತುಗೊಂಡಿರುವ ಶಾಸಕರ ನೆರವಿನಿಂದ ಮೂರನೇ ಅಭ್ಯರ್ಥಿಯ ಗೆಲುವಿನ ನಿರೀಕ್ಷೆಯನ್ನು ಕಾಂಗ್ರೆಸ್ ಹೊತ್ತುಕೊಂಡಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

'ಗುಂಡ್ಲುಪೇಟೆ, ನಂಜನಗೂಡು ವಿಧಾನಸಭೆ ಉಪ ಚುನಾವಣೆಯಲ್ಲಿ, ಬೆಂಗಳೂರು ಮಹಾನಗರಪಾಲಿಕೆಯಲ್ಲಿ ನಿಮ್ಮನ್ನು ಬೆಂಬಲಿಸಿದ್ದೇವೆ. ನಮಗೆ ಒಂದು ಸ್ಥಾನ ಬಿಟ್ಟುಕೊಡಿ' ಎಂದು ಜೆಡಿಎಸ್‌ ನಾಯಕರು ಕೇಳಿದ್ದಾರೆ. ಕಾಂಗ್ರೆಸ್‌ನ ಕೆಲವು ನಾಯಕರು ಜೆಡಿಎಸ್‌ ಪರ ವಕಾಲತ್ತು ವಹಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಇದಕ್ಕೆ ವಿರುದ್ಧವಾಗಿದ್ದಾರೆ.

English summary
Can Suspended JD(S) MLAs vote in Rajya Sabha polls.JDS is seeking disqualification of seven of its MLAs for cross-voting in 2016 Rajya Sabha elections, but, then Legislative Assembly Speaker K B Koliwad is yet to give decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X