• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದೆಂಥ ವಿಪರ್ಯಾಸ, ವಿದ್ಯಾರ್ಹತೆ 8 ನೇ ತರಗತಿ, ಖಾತೆ-ಉನ್ನತ ಶಿಕ್ಷಣ!

|
   Karnataka Cabinet Expansion : 8ನೇ ತರಗತಿ ಓದಿರುವ ಜಿ ಟಿ ದೇವೇಗೌಡ್ರು ನಮ್ಮ ನೂತನ ಉನ್ನತ ಶಿಕ್ಷಣ ಸಚಿವರು

   "ನೋಡಿ ಸ್ವಾಮಿ, ವಿಪರ್ಯಾಸ ಅಂದ್ರೆ ಇದೇ! 8 ನೇ ತರಗತಿ ಪಾಸು ಮಾಡಿದ ವ್ಯಕ್ತಿಗೆ ಉನ್ನತ ಶಿಕ್ಷಣ ಖಾತೆಯಂತೆ! ಇದೆಂಥ ನ್ಯಾಯ" ಎಂದು ಟ್ವಿಟ್ಟರ್ ನಲ್ಲಿ ಹಲವರು ಅಲವತ್ತುಕೊಂಡಿದ್ದಾರೆ!

   ಹೌದು, ಅಂತೂ ಇಂತೂ ಕರ್ನಾಟಕದಲ್ಲಿ ಸಂಪುಟ ರಚನೆ, ಖಾತೆ ಹಂಚಿಕೆಯ ಕಸರತ್ತು ಮುಗಿದಿದೆ. ಜೂನ್ 8 ರಂದು ನೂತನ ಸಚಿವರಿಗೆ ಖಾತೆ ಹಂಚಿಕೆಯ ಪ್ರಕ್ರಿಯೆ ಮುಗಿದಿದ್ದು, ಬಂಡಾಯದ ಬೆಂಕಿಗೆ ಮತ್ತಷ್ಟು ಬಿಸಿತುಪ್ಪ ಬಿದ್ದಂತಾಗಿದೆ!

   ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

   ಇವೆಲ್ಲಕ್ಕಿಂತ ಹೆಚ್ಚಾಗಿ ಖಾತೆ ಹಂಚಿಕೆಯ ಸಮಯದಲ್ಲಿ ಅರ್ಹತೆ, ಅನುಭವಕ್ಕಿಂತ ಹೆಚ್ಚಾಗಿ ಜಾತಿಯೇ ಪಾರಮ್ಯ ಮೆರೆದಿದೆಯೇನೋ ಎಂಬ ಅನುಮಾನ ಕಾಡುತ್ತಿದೆ! ಅದಕ್ಕೆ ಸಾಕ್ಷಿ ಎಂಬಂತೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಲಭಿಸಿದೆ! ಅಚ್ಚರಿ ಎಂದರೆ ಅವರು ಓದಿದ್ದು ಕೇವಲ ಎಂಟನೇ ತರಗತಿವರೆಗೆ!

   ಋಣಸಂದಾಯಕ್ಕಾಗಿ ಈ ಉಡುಗೊರೆಯೇ?

   ಋಣಸಂದಾಯಕ್ಕಾಗಿ ಈ ಉಡುಗೊರೆಯೇ?

   ಅಷ್ಟಕ್ಕೂ ಜಿಟಿಡಿ ಈ ಖಾತೆಯನ್ನು ಬಯಸಿದ್ದರಾ? ಗೊತ್ತಿಲ್ಲ. ಆದರೆ ಕೇವಲ 8 ನೇ ತರಗತಿಯನ್ನಷ್ಟೇ ಓದಿರುವ ವ್ಯಕ್ತಿಗೆ ಉನ್ನತ ಶಿಕ್ಷಣದಂಥ ಖಾತೆಯನ್ನು ನೀಡುವುದು ಎಷ್ಟು ಸರಿ ಎಂಬುದು ಇದೀಗ ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ವಿಷಯ. ಪ್ರತಿಷ್ಠೆಯ ಕಣವಾಗಿದ್ದ ಚಾಮುಂಡೇಶ್ವರಿಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿ, ಭರ್ಜರಿ ಜಯ ಸಾಧಿಸುವ ಮೂಲಕ ಜೆಡಿಎಸ್ ತೂಕ ಹೆಚ್ಚಿಸಿದ್ದ ಜಿಟಿಡಿ ಅವರ ಋಣಸಂದಾಯಕ್ಕೆ ಎಚ್ ಡಿ ಕುಮಾರಸ್ವಾಮಿ ನೀಡಿದ ಉಡುಗೊರೆಯಾ ಇದು? ಎಂಬ ಪ್ರಶ್ನೆಯೂ ಎದ್ದಿದೆ!

   ಜಿ.ಟಿ.ದೇವೇಗೌಡಗೆ ಕೊಟ್ಟ ಮಾತು ತಪ್ಪಿದ ಕುಮಾರಸ್ವಾಮಿ

   ಓದಿದ್ದು ಎಂಟನೇ ತರಗತಿ!

   ಓದಿದ್ದು ಎಂಟನೇ ತರಗತಿ!

   ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಹೊತ್ತಲ್ಲಿ ಜಿ ಟಿ ದೇವೇಗೌಡ ಅವರು ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಅವರ ವಿದ್ಯಾರ್ಹತೆ 8 ನೇ ತರಗತಿ ಎಂದು ಸ್ಪಷ್ಟವಾಗಿ ನಮೂದಾಗಿದೆ. ಇದೇ ವಿಷಯವೇ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಒಟ್ಟಿನಲ್ಲಿ ಟ್ವಿಟ್ಟರ್ ನಲ್ಲಂತೂ ಜಿಟಿಡಿ ಅವರಿಗೆ ನೀಡಿದ ಉನ್ನತ ಶಿಕ್ಷಣ ಖಾತೆ ತಪ್ಪೆ, ಸರಿಯೇ ಎಂಬ ಕುರಿತು ಬಿಸಿಬಿಸಿ ಚರ್ಚೆಯಾಗುತ್ತಿರುವುದು ಸತ್ಯ.

   90ನೇ ದಶಕದತ್ತ ಕರ್ನಾಟಕ!

   ಜಿ ಟಿ ದೇವೇಗೌಡರಿಗೆ ಉನ್ನತ ಶಿಕ್ಷಣವೇ? ನಿಜವಾಗಿಯೂ? ಏನು? ಏಕೆ? ಹೇಗೆ? ಇನ್ನೂ ಅಚ್ಚರಿ ಎಂದರೆ ಕೆಜೆ ಜಾರ್ಜ್ ಗೆ ಐಟಿ ಬಿಟಿ ಸಚಿವ ಸ್ಥಾನ! ಕಾದು ನೋಡಿ ಜನರೇ, ಕರ್ನಾಟಕ ಇನ್ನು ಕೆಲವೇ ದಿನಗಳಲ್ಲಿ 90 ರ ದಶಕದತ್ತ ಹೋಗಲಿದೆ ಎಂದಿದ್ದಾರೆ ರಕ್ಷಾ ಗೌಡ.

   ಕಡೆಗೂ ಸಿಕ್ತು ಖಾತೆ!

   ಮಂತ್ರಿಗಳಿಗೆ ಕಡೆಗೂ ಖಾತೆ! ಎಂಎ ಓದಿದೋರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ, ಎಂಟನೇ ಕ್ಲಾಸ್ ಓದಿದೋರಿಗೆ ಉನ್ನತ ಶಿಕ್ಷಣ ಖಾತೆ! ಎಂದಿದ್ದಾರೆ ಕೆ. ಸೀತಾರಾಮ್.

   ಇದೆಂಥ ವಿಪರ್ಯಾಸ!

   ಅಂದರೆ ನಮ್ಮ ಕರ್ನಾಟಕದ ಉನ್ನತ ಶಿಕ್ಷಣ ಸಚಿವರು ಕೇವಲ 8 ನೇ ತರಗತಿ ಪಾಸಾದವರು. ಇದೆಂಥ ವಿಪರ್ಯಾಸ ಎಂದಿದ್ದಾರೆ ಪ್ರದೀಪ್.

   ಇದೊಂದು ವ್ಯವಸ್ಥೆಯ ವಿಡಂಬನೆ

   ಜಿ ಟಿ ದೇವೇಗೌಡ ಓದಿದ್ದು ಕೇವಲ ಎಂಟನೇ ತರಗತಿವರೆಗೆ. ಅವರು ನಮ್ಮ ನೂತನ ಉನ್ನತ ಶಿಕ್ಷಣ ಸಚಿವರು. ಅವರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ಇದು ನಮ್ಮ ವ್ಯವಸ್ಥೆಯ ವಿಡಂಬನೆ ಎಂದಿದ್ದಾರೆ ವಿಶ್ವೇಶ್ವರ್ ಭಟ್.

   ನಾವು ಹೆಮ್ಮೆ ಪಡಬೇಕು!

   ನಮ್ಮ ಕರ್ನಾಟಕ ಸಚಿವ ಸಂಪುಟದಲ್ಲಿ ಅತೀ ಕಡಿಮೆ ಓದಿದ ಸಚಿವರು ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಅದಕ್ಕಾಗಿ ನಾವು ಹೆಮ್ಮೆ ಪಡಬೇಕು! ನನಗೀಗ ಅನ್ನಿಸುತ್ತಿದೆ, ನಾನೂ ಎಂಟನೇ ತರಗತಿಗೆ ಓದು ಬಿಡಬೇಕಿತ್ತು ಅಂತ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ ಅಮರ್ ಕೊಡ್ಲಿ.

   English summary
   Karnataka cabinet expansion: People on twitter blames Karnataka government for giving higher education portfolio to G T Devegowda, who studied till only 8th standard. G T Devegowda is the JDS MLA of Chamundeshwari constituency in Mysuru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X