ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ರಚನೆಗೆ ಕುಮಾರಸ್ವಾಮಿಯನ್ನು ಆಹ್ವಾನಿಸಿದ ರಾಜ್ಯಪಾಲ ವಾಲಾ

|
Google Oneindia Kannada News

Recommended Video

      ವಿಶ್ವಾಸ ಮತ ಯಾಚಿಸದೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಿಎಸ್ವೈ | Oneindia Kannada

      ಬೆಂಗಳೂರು, ಮೇ 19: ಕರ್ನಾಟಕ ರಾಜಕಾರಣದ ಪಾಲಿಗೆ ಮೇ 19 ಶನಿವಾರ ಅತ್ಯಂತ ಮಹತ್ವದ ದಿನ. ಸುಪ್ರೀಂ ಕೋರ್ಟಿನ ಸೂಚನೆಯಂತೇ ಕರ್ನಾಟಕದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಎಲ್ಲಾ ಪಕ್ಷಗಳೂ ಅಗ್ನಿಪರೀಕ್ಷೆ ಎದುರಿಸುತ್ತಿವೆ.

      ಸುಪ್ರೀಂ ಆದೇಶ : ಶನಿವಾರ ಬಹುಮತ ಸಾಬೀತು ಮಾಡಬೇಕುಸುಪ್ರೀಂ ಆದೇಶ : ಶನಿವಾರ ಬಹುಮತ ಸಾಬೀತು ಮಾಡಬೇಕು

      ಮೇ 17ರಂದು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ ಎಸ್ ಯಡಿಯೂರಪ್ಪ ಆ ಸ್ಥಾನದಲ್ಲೇ ಮುಂದುವರಿಯುತ್ತಾರಾ ಅಥವಾ ಜೆಡಿಎಸ್ ನ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುತ್ತಾರಾ ಎಂಬುದು ಶನಿವಾರ ಸಂಜೆ ತಿಳಿಯಲಿದೆ.

      Karnataka Assembly Floor Test LIVE Updates and results

      ಬಿಜೆಪಿಗೆ ಇದು ಉಭಯ ಸಂಕಟವಾದರೆ, ಕಾಂಗ್ರೆಸ್-ಜೆಡಿಎಸ್ ಪ್ರತಿಷ್ಠೆಯ ಪ್ರಶ್ನೆ. ಮೇ 15ರಂದು ಪ್ರಕಟವಾದ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಮತ್ತು ಇತರರು 2 ಸ್ಥಾನಗಳಲ್ಲಿ ಜಯ ಸಾಧಿಸಿದ್ದು ಯಾವ ಪಕ್ಷವೂ ಬಹುಮತ ಪಡೆದಿರಲಿಲ್ಲ.

      Karnataka Assembly (Half way mark- 109)
      Total MLAs AbstainedPresent in Assembly
      BJP104-1103
      CONGRESS78-276
      JDS+3700
      OTHERS202

      Newest FirstOldest First
      6:44 PM, 19 May

      ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಸರಕಾರ ರಚಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಆಹ್ವಾನ ನೀಡಿದ್ದಾರೆ.
      6:10 PM, 19 May

      ಬಿಜೆಪಿ ವಿರುದ್ಧದ ಶಾಸಕ ಖರೀದಿ ಯತ್ನ ಆರೋಪ ಶುದ್ಧ ಸುಳ್ಳು, ತಪ್ಪು ಸಂದೇಶ ರವಾನೆಯಾಗುತ್ತಿದೆ, ಆದರೆ ನಾವು ಕುದುರೆ ವ್ಯಾಪಾರವನ್ನು ಮಾಡಿಲ್ಲ-ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್
      6:06 PM, 19 May

      ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ಆರಂಭಿಸಿದ್ದಾರೆ
      5:42 PM, 19 May

      ಬಿ.ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ನೆಲಮಂಗಲದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಸಂಭ್ರಮ
      5:39 PM, 19 May

      ಬೆಂಗಳೂರಿನ ಇಂದಿರಾನಗರದ ಹಿಲ್ಟನ್ ಹೋಟೆಲ್ ನಲ್ಲಿ ಕಾಂಗ್ರೆಸ್‌- ಜೆಡಿಸ್ ಶಾಸಕರ ವಾಸ್ತವ್ಯ
      5:25 PM, 19 May

      ಅಧಿವೇಶನದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಾಗಲೇ ಅದಕ್ಕೆ ಗೌರವ ಕೂಡಾ ಕೊಡದೆ ಬಿಜೆಪಿಯ ಎಲ್ಲ ನಾಯಕರು ಎದ್ದು ಹೊರಕ್ಕೆ ಹೋದರು ಇದು ಅವರ ದೇಶಭಕ್ತಿ ಎಂದು ಮೂದಲಿಸಿದ ರಾಹುಲ್ ಗಾಂಧಿ
      5:24 PM, 19 May

      ಬಿಜೆಪಿಯು ಸಿಬಿಐ, ಇಡಿ, ಐಟಿ ಸೇರಿದಂತೆ ರಾಷ್ಟ್ರದಲ್ಲಿನ ಎಲ್ಲಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರ ಹಿಡಿಯಲು ಯತ್ನಿಸಿತ್ತು, ಆದರೆ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಾಗಿ ಹೋರಾಡಿ ಜಯ ಸಾಧಿಸಿದ್ದಾರೆ-ರಾಹುಲ್ ಗಾಂಧಿ
      Advertisement
      5:23 PM, 19 May

      ಭ್ರಷ್ಟಾಚಾರದ ವಿರುದ್ಧ ಎಂದು ತಮ್ಮನ್ನು ತಾವೇ ಕರೆದುಕೊಳ್ಳುವ ಮೋದಿ ಅವರೇ ಕರ್ನಾಟಕದಲ್ಲಿ ಕುದುರೆ ವ್ಯಾಪಾರ ಮಾಡಲು ಮಾರ್ಗದರ್ಶನ ನೀಡಿದ್ದರು-ರಾಹುಲ್ ಗಾಂಧಿ
      5:21 PM, 19 May

      ಕರ್ನಾಟಕದಲ್ಲಿ ಬಿಜೆಪಿಗೆ ಆಗಿರುವ ಸೋಲು, ಪ್ರಜಾಪ್ರಭುತ್ವಕ್ಕೆ ದೊರಕಿರುವ ಗೆಲುವು, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಪ್ರಜಾಪ್ರಭುತ್ವವನ್ನು ಉಳಿಸಿದೆ- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
      5:01 PM, 19 May

      ಕರ್ನಾಟಕದಲ್ಲಿ ಮೂರು ದಿನದಲ್ಲಿ ಬಿಜೆಪಿ ಸರ್ಕಾರ ಬಿದ್ದಿದೆ. ಅಧಿಕಾರ, ಹಣವೇ ಎಲ್ಲವೂ ಅಲ್ಲ ಎಂದು ಸಾಬೀತಾಗಿದೆ- ರಾಹುಲ್ ಗಾಂಧಿ
      5:01 PM, 19 May

      ಕರ್ನಾಟಕದಲ್ಲಿ ಕಾಂಗ್ರೆಸ್‌ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಲು ವೇದಿಕೆ ಸಿದ್ಧವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ.
      4:38 PM, 19 May

      "ಸರ್ಕಾರ ರಚಿಸಲು ನಮಗೆ ರಾಜ್ಯಪಾಲರಿಂದ ಆಮಂತ್ರಣ ಬರಬೇಕೆಂದು ಕಾಯುತ್ತಿದ್ದೇನೆ"- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಹೇಳಿಕೆ
      Advertisement
      4:31 PM, 19 May

      ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ- ಸಿದ್ದರಾಮಯ್ಯ
      4:29 PM, 19 May

      ಭಾರತದ ರಾಜಕಾರಣದಲ್ಲಿ ಮತ್ತು ಕರ್ನಾಟಕದ ರಾಜಕಾರಣದಲ್ಲಿ ಇದೊಂದು ಐತಿಹಾಸಿಕವಾದ ಘಟನೆ. ಯಡಿಯೂರಪ್ಪನವರು ವಿಧಾನಸೌಧದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಒಪ್ಪಿಕೊಂಡು, ಆದರೆ ಅದಕ್ಕೆ ಅಸಮರ್ಥರಾಗಿ ಫಲಾಯನ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ವಿಜಯ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
      4:26 PM, 19 May

      ಎಚ್ ಡಿ ಕುಮಾರಸ್ವಾಮಿ ಅವರ ಕೈ ಎತ್ತಿ ಸಂಭ್ರಮ ವ್ಯಕ್ತಪಡಿಸಿದ ಡಿ ಕೆ ಶಿವಕುಮಾರ್
      4:18 PM, 19 May

      ರಾಜೀನಾಮೆ ಘೋಷಣೆ ಮಾಡಿದ ನಂತರ ಬಿ ಎಸ್ ಯಡಿಯೂರಪ್ಪ ಅವರು ಕಣ್ಣೀರು ಸುರಿಸಿದ್ದಾರೆ.
      4:17 PM, 19 May

      ಕಾಂಗ್ರೆಸ್ -ಜೆಡಿಎಸ್ ಪಾಳೆಯದಲ್ಲಿ ಮನೆಮಾಡಿದ ಸಂಭ್ರಮ
      4:14 PM, 19 May

      ಮೂರು ದಿನಗಳಲ ಕಾಲ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಇನ್ನು ಕೆಲವೇ ಕ್ಷಣಗಳಲ್ಲಿ ರಾಜೀನಾಮೆ ನೀಡಲಿದ್ದಾರೆ.
      4:12 PM, 19 May

      ರಾಜೀನಾಮೆ ನೀಡಲು ರಾಜಭವನದತ್ತ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ.
      4:12 PM, 19 May

      ವಿಶ್ವಾಸಮತ ಯಾಚಿಸದ ಬಿ ಎಸ್ ಯಡಿಯೂರಪ್ಪ
      4:10 PM, 19 May

      ಜನಪರ ಹೋರಾಟ ಇನ್ನೂ ಮುಂದುವರಿಯುತ್ತದೆ. ನಾನು ಕೊನೇ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ. ನನಗೆ ಅಧಿಕಾರ ಕೊಡದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ ಎಂದರು ಕೆಲವರು. ಆದರೆ ನಾನು ಅದಕ್ಕಾಗಿ ಪ್ರಾಣ ಕಳೆದುಕೊಳ್ಳುವುದಿಲ್ಲ. ಜನರಿಗಾಗಿ ಕಳೆದುಕೊಂಡಿದ್ದಾರೆ- ಬಿ ಎಸ್ ಯಡಿಯೂರಪ್ಪ
      4:07 PM, 19 May

      ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ - ಬಿ ಎಸ್ ಯಡಿಯೂರಪ್ಪ
      4:03 PM, 19 May

      ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತೇನೆ- ಬಿ ಎಸ್ ಯಡಿಯೂರಪ್ಪ
      4:01 PM, 19 May

      ನನಗೊಂದು ಆಸೆಯಿತ್ತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವಾಗ ಇಲ್ಲಿ ಬಿಜೆಪಿ ಸರ್ಕಾರ ಇರಬೇಕು ಎಂದು. ನಮಗೆ ಯಾವ ಕೊರತೆಯೂ ಇಲ್ಲ. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಕೈಗಳ ಕೊರತೆ ಇದೆ - ಬಿ ಎಸ್ ಯಡಿಯೂರಪ್ಪ
      3:57 PM, 19 May

      ಅನೇಕ ರೀತಿಯ ಹಗುರ ಮಾತನ್ನು ಕೇಳಿದ್ದೇನೆ. ನನಗೆ ಯಾವ ಬೇಸರವೂ ಇಲ್ಲ. ಕೊಳಗೇರಿ ಜನರ ಸಮಸ್ಯೆ ಈ ನಾಡಿನ ಜ್ವಲಂತ ಸಮಸ್ಯೆಯಲ್ಲೊಂದಾಗಿದೆ. ಅವುಗಳ ಬಗ್ಗೆ ನೆನೆದರೆ ದುಃಖವಾಗುತ್ತದೆ- ಬಿ ಎಸ್ ಯಡಿಯೂರಪ್ಪ
      3:56 PM, 19 May

      ರೈತರ ಸಾಲಮನ್ನಾ, ನೀರಾವರಿ ವ್ಯವಸ್ಥೆ, ಬೆಂಬಲ ಬೆಲೆ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಹೆಚ್ಚಿಸಬೇಕು ಎಂಬಿತ್ಯಾದಿ ಆಸೆಗಳು ನನ್ನವು-ಬಿ ಎಸ್ ಯಡಿಯೂರಪ್ಪ
      3:55 PM, 19 May

      ಕೊನೆ ಉಸಿರಿರೋವರೆಗೂ ರೈತರಿಗಾಗಿ ಹೋರಾಡುತ್ತೇನೆ. ರೈತರನ್ನು ಉಳಿಸುವುದಕ್ಕಾಗಿ ನಾನು ಕೆಲಸ ಮಾಡಬೇಕೆಂಬ ಆಸೆಯಿದೆ. ರೈತರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುತ್ತೇನೆ-ಬಿ ಎಸ್ ಯಡಿಯೂರಪ್ಪ
      3:53 PM, 19 May

      ನೀರಿನ ಸಮಸ್ಯೆ ಪರಿಹಾರವಾಗಿಲ್ಲ, ಜನರ ಬವಣೆ ಕಡಿಮೆಯಾಗಿಲ್ಲ. ಜನರು ಬೇಸೆತ್ತ ಸಮಯದಲ್ಲಿ ನಡೆದ ಚುನಾವಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ನೋಡಿದ್ದೇವೆ. ನಾಡಿನ ಉದ್ದಗಲಕ್ಕೂ ಸಂಚರಿಸಿ ನಾಡಿನ ಜನರ ಉದ್ಧಾರಕ್ಕೆ ಕಂಕಣಬದ್ಧರಾಗಿದ್ದೇವೆ- ಬಿ ಎಸ್ ಯಡಿಯೂರಪ್ಪ
      3:52 PM, 19 May

      ಈ ರಾಜ್ಯದ ರೈತರ, ಅನ್ನದಾತ ಸ್ವಾಭಿಮಾನ, ಗೌರವದಿಂದ ಬಾಳುವುದಕ್ಕೆ ನಾವೆಲ್ಲ ಪ್ರಯತ್ನಿಸಬೇಕಾಗಿದೆ. ನಾನು ಅದಕ್ಕಾಗಿ ನನ್ನ ಸರ್ವಸ್ವನ್ನೂ ನೀಡಲು ಸಿದ್ಧನಿದ್ದೇನೆ-ಬಿ ಎಸ್ ಯಡಿಯೂರಪ್ಪಈ ರಾಜ್ಯದ ರೈತರ, ಅನ್ನದಾತ ಸ್ವಾಭಿಮಾನ, ಗೌರವದಿಂದ ಬಾಳುವುದಕ್ಕೆ ನಾವೆಲ್ಲ ಪ್ರಯತ್ನಿಸಬೇಕಾಗಿದೆ. ನಾನು ಅದಕ್ಕಾಗಿ ನನ್ನ ಸರ್ವಸ್ವನ್ನೂ ನೀಡಲು ಸಿದ್ಧನಿದ್ದೇನೆ-ಬಿ ಎಸ್ ಯಡಿಯೂರಪ್ಪ
      3:50 PM, 19 May

      ಆದರೆ ಜನಾದೇಶದ ವಿರುದ್ಧ ಅವಕಾಶವಾದಿ ರಾಜಕಾರಣ ನಡೆದಿದೆ. ಏಕೈಕ ಅತೀ ದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡದಿರಲು ಪ್ರಯತ್ನಿಸಲಾಗುತ್ತಿದೆ.
      READ MORE

      English summary
      Karnataka Assembly Floor Test Live Updates in Kannada :
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X