ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧುಗಿರಿ ಕ್ಷೇತ್ರದಲ್ಲಿ ಮಾನವ- ಪ್ರಾಣಿ ಸಂಘರ್ಷವೇ ಮುಖ್ಯ ಸವಾಲು

|
Google Oneindia Kannada News

ಮಧುಗಿರಿ ಅಂದಾಕ್ಷಣ ನೆನಪಿಗೆ ಬರುವುದು ಇಲ್ಲಿನ ಏಕಶಿಲಾ ಬೆಟ್ಟ, ಜಯಮಂಗಲಿ ಕಾವಲ್ (ಕೃಷ್ಣಮೃಗ ರಕ್ಷಿತಾರಣ್ಯ). ತಿಮ್ಲಾಪುರ ಕರಡಿ ಧಾಮ. ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕೆ.ಎನ್.ರಾಜಣ್ಣ ಇಲ್ಲಿನ ಶಾಸಕರು. ಅವರು ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಣ್ಣ ಆಪ್ತರು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರೆ. ಅಂದಹಾಗೆ ಈ ಕ್ಷೇತ್ರ ಜೆಡಿಎಸ್ ಪಾಲಿಗೂ ನಂಬಿಕೆಯ ಕ್ಷೇತ್ರ. ನಿವೃತ್ತ ಐಎಎಸ್ ಅಧಿಕಾರಿ ವೀರಭದ್ರಯ್ಯ ಅವರು ಜೆಡಿಎಸ್ ಅಭ್ಯರ್ಥಿ.

ಕೊರಟಗೆರೆ ಕ್ಷೇತ್ರದಲ್ಲಿ ಲಕ್ಷ್ಮಿದೇವಿ ದೇವಾಲಯ ಫೇಮಸ್, ಸೌಕರ್ಯ ಮೈನಸ್ಕೊರಟಗೆರೆ ಕ್ಷೇತ್ರದಲ್ಲಿ ಲಕ್ಷ್ಮಿದೇವಿ ದೇವಾಲಯ ಫೇಮಸ್, ಸೌಕರ್ಯ ಮೈನಸ್

ಈ ಹಿಂದೆ ಅನಿತಾ ಕುಮಾರಸ್ವಾಮಿ, ಡಿ.ಸಿ.ಗೌರಿಶಂಕರ್ ಇದೇ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು. ಕುಮಾರಸ್ವಾಮಿ- ದೇವೇಗೌಡರು ದೊಡ್ಡ ಮಟ್ಟದ ಸಮಾವೇಶ ಇಲ್ಲಿ ನಡೆಸಿದ್ದಾರೆ. ಆದರೆ ಈ ಬಾರಿ ರಾಜಣ್ಣ ಅವರಿಗೆ ಗೆಲುವು ಸವಾಲು ಎನಿಸಿದೆ. ಏಕೆಂದರೆ, ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ವೀರಭದ್ರಯ್ಯ ಅವರಿಗೆ ತುಂಬ ತಡವಾಗಿ ಟಿಕೆಟ್ ಘೋಷಣೆ ಆಗಿತ್ತು.

Karnataka assembly elections 2018: Madhugiri constituency profile

ಅವರು ಅರ್ಜಿ ಹಾಕಿಕೊಂಡಿದ್ದ ಸ್ವಯಂ ನಿವೃತ್ತಿಯೂ ಸರಕಾರದಿಂದ ಬೇಗ ಪ್ರಕ್ರಿಯೆ ಆಗಲಿಲ್ಲ. ಆದರೆ ಈ ಬಾರಿ ರಾಜಣ್ಣ ವರ್ಸಸ್ ವೀರಭದ್ರಯ್ಯ ಎಂಬ ಸನ್ನಿವೇಶ ಇದೆ. ವೀರಭದ್ರಯ್ಯ ಅವರು ಇಲ್ಲೇ ಮನೆ ಕೂಡ ಮಾಡಿದ್ದಾರೆ. ಕುಮಾರಸ್ವಾಮಿ- ದೇವೇಗೌಡರು ಭರ್ಜರಿ ಪ್ರಚಾರ ಮಾಡಿದ್ದಾರೆ. ಇನ್ನು ಬಿಜೆಪಿಯಿಂದ ಹುಲಿನಾಯ್ಕರ್ ಗೆ ಟಿಕೆಟ್ ಘೋಷಣೆ ಆಗಿತ್ತು. ಆದರೆ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.

'ಜೆಡಿಎಸ್ ಅಧಿಕಾರಕ್ಕೆ ಬಂದರೆ ಸರಕಾರದಿಂದಲೇ ಕೃಷಿ ಸಾಲ, ಬೆಲೆ ನಿಗದಿ''ಜೆಡಿಎಸ್ ಅಧಿಕಾರಕ್ಕೆ ಬಂದರೆ ಸರಕಾರದಿಂದಲೇ ಕೃಷಿ ಸಾಲ, ಬೆಲೆ ನಿಗದಿ'

ಮಧುಗಿರಿಯಲ್ಲಿ ಕರಡಿ ಹಾವಳಿ ಜಾಸ್ತಿ ಇದೆ. ಇಲ್ಲಿನ ಪಟ್ಟಣ ಪ್ರದೇಶದ ಮನೆಗೆ ಕರಡಿ ದಾಳಿ ಮಾಡಿದ ಉದಾಹರಣೆ ಇದೆ. ಕೆ.ಎನ್.ರಾಜಣ್ಣ ಅವರು ರಸ್ತೆ, ಒಳ ಚರಂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಒಬ್ಬರಾದ ಮೇಲೆ ಒಬ್ಬರಂತೆ ಆರಿಸುತ್ತಿರುವ ಜನರು ಪ್ರತಿ ಸಲ ಕುತೂಹಲಕ್ಕೆ ಕಾರಣರಾಗಿದ್ದಾರೆ.

English summary
Karnataka Assembly Elections 2018: Read all about Tumakuru district Madhugiri assembly constituency. Get election news from Tumakuru district. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X