ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018ರ ಕಣದಲ್ಲಿರುವ ಜೆಡಿಎಸ್ ನಲ್ಲಿರುವ ಕೋಟ್ಯಧಿಪತಿಗಳು

By Mahesh
|
Google Oneindia Kannada News

ಬೆಂಗಳೂರು, ಮೇ 07: ಕರ್ನಾಟಕ ಚುನಾವಣಾ ಕಣದಲ್ಲಿರುವ ಸುಮಾರು 883 ಕೋಟ್ಯಧಿಪತಿಗಳ ಪೈಕಿ ಜಾತ್ಯಾತೀತ ಜನತಾ ದಳದ ಅಭ್ಯರ್ಥಿಗಳು ಕೂಡಾ ಅತಿ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲದೆ, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವವರ ಪೈಕಿ ಕೋಟ್ಯಧಿಪತಿಗಳು ಹೆಚ್ಚಾಗಿದ್ದಾರೆ.

ಕರ್ನಾಟಕ ವಿಧಾನಸಭೆ ಕದನದಲ್ಲಿರುವ ಸುಮಾರು 2,560 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ, ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್ ) ಸಂಸ್ಥೆ ಕಲೆ ಹಾಕಿರುವ ಮಾಹಿತಿಯಂತೆ, ಜಾತ್ಯಾತೀತ ಜನತಾ ದಳ (ಜೆಡಿಎಸ್) ದ ಕೋಟ್ಯಧಿಪತಿಗಳ ವಿವರ ಇಲ್ಲಿದೆ....

ಕರ್ನಾಟಕ ಚುನಾವಣಾ ಕಣದಲ್ಲಿರುವ ಕೋಟ್ಯಧಿಪತಿಗಳು : ಬಿಜೆಪಿ | ಕಾಂಗ್ರೆಸ್

ಪಕ್ಷಗಳ ಪೈಕಿ ಬಿಜೆಪಿಯಲ್ಲಿ 208 (93%), ಕಾಂಗ್ರೆಸ್ 207(94%), ಜೆಡಿಎಸ್ 154(17%), ಜೆಡಿಯು 13(52%), ಎಎಪಿ 9(33%), ಪಕ್ಷೇತರರು 199 (18%) ಮಂದಿ ಕನಿಷ್ಟ 1 ಕೋಟಿ ರುಗಳಿಗಿಂತ ಅಧಿಕ ಆಸ್ತಿ ಹೊಂದಿದ್ದಾರೆ. 2018ರ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಆಸ್ತಿ ಮೌಲ್ಯ ಸರಾಸರಿ 7.54 ಕೋಟಿ ರು ಆಗಲಿದೆ.

ಚುನಾವಣೆ 2018: ಕಣದಲ್ಲಿರುವ ಅಭ್ಯರ್ಥಿಗಳ ಸಮಗ್ರ ಪಟ್ಟಿಚುನಾವಣೆ 2018: ಕಣದಲ್ಲಿರುವ ಅಭ್ಯರ್ಥಿಗಳ ಸಮಗ್ರ ಪಟ್ಟಿ

ಎಲ್ಲಾ ಪಕ್ಷದ ಕುಬೇರರ ವಿವರ ನೋಡಿದರೂ ಕಾಂಗ್ರೆಸ್ಸಿನ ಪ್ರಿಯಾಕೃಷ್ಣ 1020 ಕೋಟಿ ರು, ಎನ್ ನಾಗರಾಜು 1015 ಕೋಟಿ ರು, ಡಿಕೆ ಶಿವಕುಮಾರ್ 840 ಕೋಟಿ ರು ಟಾಪ್ ಮೂರು ಕೋಟ್ಯಧಿಪತಿಗಳಾಗಿ ಹೊರ ಹೊಮ್ಮುತ್ತಾರೆ. 17 ಮಂದಿ ಶೂನ್ಯ ಆಸ್ತಿ ಎಂದು ಘೋಷಿಸಿಕೊಂಡಿದ್ದಾರೆ.

ಮೊಹಮ್ಮದ್ ಇಕ್ಬಾಲ್ ಹೊತ್ತೂರ್- ಬಳ್ಳಾರಿನಗರ

ಮೊಹಮ್ಮದ್ ಇಕ್ಬಾಲ್ ಹೊತ್ತೂರ್- ಬಳ್ಳಾರಿನಗರ

1. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಹೊತ್ತೂರ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಗಳಿಲ್ಲ. ಮೊಹಮ್ಮದ್ ಇಕ್ಬಾಲ್ ಅವರು ಸ್ನಾತಕೋತ್ತರ ಪದವೀಧರರಾಗಿದ್ದಾರೆ. 380 ಕೋಟಿ ರು ಆಸ್ತಿ ಹೊಂದಿದ್ದು, 106 ಕೋಟಿ ರು ಸಾಲ ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಕೋಟ್ಯಧಿಪತಿ ಅಭ್ಯರ್ಥಿಗಳ ಪೈಕಿ ಮೊಹಮ್ಮದ್ ಇಕ್ಬಾಲ್ ಅಗ್ರಸ್ಥಾನ ಗಳಿಸಿದ್ದಾರೆ.

2. ಕೆ ಬಾಗೇಗೌಡ- ಬಸವನಗುಡಿ

2. ಕೆ ಬಾಗೇಗೌಡ- ಬಸವನಗುಡಿ

ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ ಬಾಗೇಗೌಡ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಗಳಿವೆ. ಕೆ ಬಾಗೇಗೌಡ ಅವರು 10ನೇ ತರಗತಿ ತನಕ ಮಾತ್ರ ಓದಿದ್ದಾರೆ. 319 ಪ್ಲಸ್ ಕೋಟಿ ರು ಆಸ್ತಿ ಹೊಂದಿದ್ದು, 55 ಕೋಟಿ ರು ಸಾಲ ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಕೋಟ್ಯಧಿಪತಿ ಅಭ್ಯರ್ಥಿಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ.

3. ನಾಸೀರ್ ಭಗ್ವಾನ್- ಖಾನಾಪುರ

3. ನಾಸೀರ್ ಭಗ್ವಾನ್- ಖಾನಾಪುರ

ಬೆಳಗಾವಿ ಜಿಲ್ಲೆ ಖಾನಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾಸೀರ್ ಭಗ್ವಾನ್ ಅವರ ವಿರುದ್ಧ 2 ಕ್ರಿಮಿನಲ್ ಕೇಸ್ ಗಳಿವೆ. ನಾಸೀರ್ ಭಗ್ವಾನ್ ಅವರು ಕೇವಲ 10ನೇ ತರಗತಿ ತನಕ ಓದಿದ್ದಾರೆ. 194 ಪ್ಲಸ್ ಕೋಟಿ ರು ಆಸ್ತಿ ಹೊಂದಿದ್ದು, 21 ಕೋಟಿ ರು ಸಾಲ ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಕೋಟ್ಯಧಿಪತಿ ಅಭ್ಯರ್ಥಿಗಳ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ.

4. ಡಾ. ಹೇಮಚಂದ್ರ ಸಾಗರ್- ಚಿಕ್ಕಪೇಟೆ

4. ಡಾ. ಹೇಮಚಂದ್ರ ಸಾಗರ್- ಚಿಕ್ಕಪೇಟೆ

ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಹೇಮಚಂದ್ರ ಸಾಗರ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಗಳಿಲ್ಲ. ಡಾ. ಹೇಮಚಂದ್ರ ಸಾಗರ್ ಅವರು ಸ್ನಾತಕೋತ್ತರ ಪದವಿಧರರಾಗಿದ್ದಾರೆ. 191 ಪ್ಲಸ್ ಕೋಟಿ ರು ಆಸ್ತಿ ಹೊಂದಿದ್ದು, ಯಾವುದೇ ಸಾಲ ಹೊಂದಿಲ್ಲ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಕೋಟ್ಯಧಿಪತಿ ಅಭ್ಯರ್ಥಿಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

English summary
Karnataka Assembly Elections 2018: Association of Democratic Reforms (ADR), Affidavits from Candidates reveal 17% Karnataka BJP candidates crorepatis. Total of 208 crorepatis from Congress, JD-S has 154, Independent 155.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X