• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತದಾರರ ಚೀಟಿಯಲ್ಲಿ ಹೆಸರು, ಹುಟ್ಟಿದ ದಿನಾಂಕ ಬದಲಾವಣೆ ಹೇಗೆ?

By Mahesh
|

ಕರ್ನಾಟಕದಲ್ಲಿ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧವಾಗುತ್ತಿರುವ ಜೊತೆಜೊತೆಗೆ ಚುನಾವಣಾ ಆಯೋಗ ಕೂಡಾ ಸಿದ್ಧತೆ ನಡೆಸುತ್ತಿದೆ. ಮತದಾರರ ಗುರುತಿನ ಚೀಟಿ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಮುಂದಿನ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾದವರು, ರಾಜ್ಯ ಚುನಾವಣಾ ಕಚೇರಿಗೆ ತೆರಳಿ ಫಾರ್ಮ್ 6 ಭರ್ತಿ ಮಾಡಿ ಸುಲಭವಾಗಿ ಮತದಾರರ ಗುರುತಿನ ಚೀಟಿ ಪಡೆಯಬಹುದು. ಈಗಾಗಲೇ ಮತದಾರರ ಗುರುತಿನ ಚೀಟಿ ಹೊಂದಿದ್ದರೆ, ಆನ್ ಲೈನ್ ಮೂಲಕ ವಿವರಗಳು ಸರಿಯಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದು.

ಮತದಾರರರ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕುವುದು ಹೇಗೆ?

ಹೀಗೆ ಪರೀಕ್ಷಿಸುವಾಗ ನಿಮ್ಮ ಹೆಸರು, ವಯಸ್ಸು, ವಿಳಾಸ, ಹುಟ್ಟಿದ ದಿನಾಂಕ, ಭಾವಚಿತ್ರ ಇನ್ನಿತರ ವಿವರಗಳಲ್ಲಿ ಏನಾದರೂ ತಪ್ಪಿದ್ದರೆ, ಅದನ್ನು ಸರಿಪಡಿಸುವುದು ಹೇಗೆ? ಆನ್ ಲೈನ್ ನಲ್ಲಿ ತಪ್ಪು ಸರಿಪಡಿಸಲು ಸಾಧ್ಯವೇ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...

ಮತದಾರರ ಗುರುತಿನ ಚೀಟಿಯಲ್ಲಿ ಬದಲಾವಣೆ ಮಾಡುವುದು ಹೇಗೆ?

* ಚುನಾವಣಾ ಆಯೋಗದ ವೆಬ್ ಸೈಟ್ (National Voters Services Portal) ಗೆ ಭೇಟಿ ಕೊಡಿ

* ವೆಬ್ ಸೈಟ್ ನ ಮುಖಪುಟದಲ್ಲಿ Correction of entries in electoral roll ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ

* ಫಾರ್ಮ್ 8 ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಇಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.

* ನಿಮ್ಮ ರಾಜ್ಯ ಹಾಗೂ ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ

ನಿಮ್ಮ ಸ್ವ ವಿವರ:

* ನಿಮ್ಮ ಹೆಸರು(ಮತದಾರರ ಪಟ್ಟಿಯಲ್ಲಿರುವಂತೆ)

* ಪಾರ್ಟ್ ನಂಬರ್ ಹಾಗೂ ಸೀರಿಯಲ್ ನಂಬರ್ ನಮೂದಿಸಿ

ಯಾವ ಬದಲಾವಣೆ ಬೇಕಿದೆ?:

ಹೆಸರು, ಭಾವಚಿತ್ರ, ವಯಸ್ಸು, ಸಂಬಂಧಿಕರ ಹೆಸರು, ಐಡಿ ಕಾರ್ಡ್ ನಂಬರ್, ಸಂಬಂಧಿಕರ ಜತೆಗಿನ ಸಂಬಂಧ, ವಿಳಾಸ, ಹುಟ್ಟಿದ ದಿನಾಂಕ, ಸ್ತ್ರೀ ಅಥವಾ ಪುರುಷ ಎಂಬ ಆಯ್ಕೆ ಪಕ್ಕದ ಚೆಕ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಿ.

ಉದಾಹರಣೆಗೆ: ನಿಮ್ಮ ಹುಟ್ಟಿದ ದಿನಾಂಕ ಬದಲಾಯಿಸಲು Date of Birth ಪಕ್ಕದ ಚೆಕ್ ಬಾಕ್ಸ್ ಆಯ್ಕೆ

* ಮತ್ತೊಮ್ಮೆ ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ವಯಸ್ಸು, ತಂದೆ, ತಾಯಿ ಅಥವಾ ಪತಿಯ ಹೆಸರನ್ನು ನಮೂದಿಸಿ

* ವಯಸ್ಸಿನ ದೃಢೀಕರಣಕ್ಕೆ ಸೂಕ್ತ ದಾಖಲೆ ಒದಗಿಸಿ

* ನಿಮ್ಮ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ

* ಸ್ಥಳ ಹಾಗೂ ದಿನಾಂಕ ನಮೂದಿಸಿ submit ಮಾಡಿ

* submit ಮಾಡಿದ ಬಳಿಕ ನಿಮಗೆ ಕನ್ಫರ್ಮ್ ಆಗಿರುವ ಸೂಚನೆ ಸಿಗಲಿದೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Karnataka Assembly Elections 2018: Here are the step by steps methods to guide you How to modify Voter Card online. One can edit and correct Name, Address, Gender, Date of Birth and other personal information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X