ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Exit Poll : ಇಂಡಿಯಾ ಟಿವಿ ಸಮೀಕ್ಷೆ: ಕಾಂಗ್ರೆಸ್ ದೊಡ್ಡ ಪಕ್ಷ

|
Google Oneindia Kannada News

ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭೆಯ 222 ಸ್ಥಾನಕ್ಕಾಗಿ ಮೇ.12 ರಂದು ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು. ಈಗ ಚುನಾವಣೋತ್ತರ ಸಮೀಕ್ಷೆ, ಫಲಿತಾಂಶದ ಹೊರಬೀಳತೊಡಗಿದೆ.

ಹಿಂದಿ ವಾಹಿನಿ ಇಂಡಿಯಾ ಟಿವಿ ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ. ಯಾವ ಪಕ್ಷವೂ ನಿಚ್ಚಳ ಬಹುಮತ ಪಡೆದುಕೊಳ್ಳುವುದರಲ್ಲಿ ಸಫಲವಾಗುವುದಿಲ್ಲ ಎಂದು ಅದು ಹೇಳಿದೆ.

Exit Poll : ಟೈಮ್ಸ್ ನೌ ಫಲಿತಾಂಶ ಪ್ರಕಟ, ಅತಂತ್ರ ವಿಧಾನಸಭೆExit Poll : ಟೈಮ್ಸ್ ನೌ ಫಲಿತಾಂಶ ಪ್ರಕಟ, ಅತಂತ್ರ ವಿಧಾನಸಭೆ

ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ ಅಧಿಕಾರಾರೂಢ ಕಾಂಗ್ರೆಸ್ 97 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಕೂಡ ಮ್ಯಾಜಿಕ್ ಅಂಕಿಯನ್ನು ಮುಟ್ಟುವಲ್ಲಿ ವಿಫಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಬ್ಬರದ ಪ್ರಚಾರದ ನಡುವೆಯೂ ಬಿಜೆಪಿ 87 ಸೀಟುಗಳನ್ನು ಮಾತ್ರ ಪಡೆದುಕೊಳ್ಳಲಿದೆ.

Karnataka Assembly Elections 2018: Exit polls results news 18

ಈ ಎರಡೂ ಪಕ್ಷಗಳು ಅಧಿಕಾರಕ್ಕೆ ಬರಲು ಜೆಡಿಎಸ್‌ನ ನೆರವು ಪಡೆಯುವುದು ಅನಿವಾರ್ಯವಾಗಲಿದೆ. ಜೆಡಿಎಸ್ 35 ಕ್ಷೇತ್ರಗಳಲ್ಲಿ ಗೆಲುವು ಕಾಣಲಿದ್ದು, ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇನ್ನು ಇತರೆ ಪಕ್ಷಗಳು ಹಾಗೂ ಪಕ್ಷೇತರರು 3 ಸೀಟು ಪಡೆದುಕೊಳ್ಳಲಿದ್ದಾರೆ ಎಂದು ಇಂಡಿಯಾ ಟಿವಿ ಸಮೀಕ್ಷೆ ಹೇಳಿದೆ

ಸಮೀಕ್ಷೆ ವರದಿ ವಿವರ
* ಕಾಂಗ್ರೆಸ್ 97
* ಬಿಜೆಪಿ 87
* ಜೆಡಿಎಸ್ 35
* ಇತರೆ 3

ಪ್ರದೇಶವಾರು ಸೀಟು ಗಳಿಕೆ ವಿವರ
ಮುಂಬೈ ಕರ್ನಾಟಕ
* ಒಟ್ಟು ಸ್ಥಾನ 50
* ಬಿಜೆಪಿ 20-26
* ಕಾಂಗ್ರೆಸ್ 23-29
* ಜೆಡಿಎಸ್ 00-01
* ಇತರೆ 00

ಹೈದರಾಬಾದ್ ಕರ್ನಾಟಕ
* ಒಟ್ಟು ಸ್ಥಾನ 31
* ಬಿಜೆಪಿ 17-21
* ಕಾಂಗ್ರೆಸ್ 10-14
* ಜೆಡಿಎಸ್ 00
* ಇತರೆ 00

ಬೆಂಗಳೂರು
* ಒಟ್ಟು ಸ್ಥಾನ 32
* ಬಿಜೆಪಿ 13-15
* ಕಾಂಗ್ರೆಸ್ 11-15
* ಜೆಡಿಎಸ್ 00
* ಇತರೆ 00

ಕರಾವಳಿ ಪ್ರದೇಶ
* ಒಟ್ಟು ಸ್ಥಾನ 21
* ಬಿಜೆಪಿ 06-10
* ಕಾಂಗ್ರೆಸ್ 11-15
* ಜೆಡಿಎಸ್ 00
* ಇತರೆ 00

ದಕ್ಷಿಣ ಕರ್ನಾಟಕ
* ಒಟ್ಟು ಸ್ಥಾನ 55
* ಬಿಜೆಪಿ 4-10
* ಕಾಂಗ್ರೆಸ್ 15-21
* ಜೆಡಿಎಸ್ 22-28
* ಇತರೆ 01-03

ಮಧ್ಯ ಕರ್ನಾಟಕ
* ಒಟ್ಟು ಸ್ಥಾನ 35
* ಬಿಜೆಪಿ 15-19
* ಕಾಂಗ್ರೆಸ್ 10-14
* ಜೆಡಿಎಸ್ 03-07
* ಇತರೆ 00-02

English summary
Here is Exit Poll Results of Karnataka Assembly Election 2018 conducted by News 18. Voting for 222 assembly constituencies held on May 12 and results will be out on May 15. As per the News 18 prediction
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X