ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Exit Poll : ಇಂಡಿಯಾ ಟುಡೇ ಫಲಿತಾಂಶ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭೆಯ 222 ಸ್ಥಾನಗಳಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ನಡೆದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಕೊನೆಗೊಂಡಿದೆ. ಇನ್ನೇನಿದ್ದರೂ ಚುನಾವಣೋತ್ತರ ಸಮೀಕ್ಷೆ, ಫಲಿತಾಂಶದ ಕಾಲ.

ಈ ಬಾರಿ ರಾಜ್ಯದಲ್ಲಿ ಒಟ್ಟು 5,00,15,895 (5 ಕೋಟಿ) ಮತದಾರರಿದ್ದರು. ಇದರಲ್ಲಿ 2,53,26,629 ಪುರುಷ ಮತದಾರರಾದರೆ, ಮಹಿಳಾ ಮತದಾರರ ಸಂಖ್ಯೆ 2,46,84,311. ಇನ್ನು 4,955 ತೃತೀಯ ಲಿಂಗಿಗರೂ ರಾಜ್ಯದಲ್ಲಿ ಈ ಬಾರಿ ಮತ ಚಲಾವಣೆಯ ಹಕ್ಕು ಹೊಂದಿದ್ದರು.

Exit Poll : ಟೈಮ್ಸ್ ನೌ ಫಲಿತಾಂಶ ಪ್ರಕಟ, ಅತಂತ್ರ ವಿಧಾನಸಭೆExit Poll : ಟೈಮ್ಸ್ ನೌ ಫಲಿತಾಂಶ ಪ್ರಕಟ, ಅತಂತ್ರ ವಿಧಾನಸಭೆ

2,622 ಅಭ್ಯರ್ಥಿಗಳಿದ್ದು, ಪುರುಷ ಅಭ್ಯರ್ಥಿಗಳು 2,405, ಮಹಿಳೆಯರು 217. ಪಕ್ಷವಾರು: ಬಿಜೆಪಿ 222, ಕಾಂಗ್ರೆಸ್ 220, ಜೆಡಿಎಸ್ 199, ಬಿಎಸ್ಪಿ 18, ಇತರೆ 1963 ಅಭ್ಯರ್ಥಿಗಳ ಭವಿಷ್ಯ ಇದೀಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

Karnataka Assembly Elections 2018: Exit polls results India Today – Axis My India

2013ರಲ್ಲಿ ಶೇ 71.45ರಷ್ಟು ಮಾತ್ರ ಮತದಾನ ದಾಖಲಾಗಿತ್ತು. ಈ ಬಾರಿ ಸಂಜೆ 5 ಗಂಟೆ ವೇಳೆಗೆ ಶೇಕಡಾ 64 ಮತದಾನವಾಗಿದೆ. ಇನ್ನೂ ಒಂದಷ್ಟು ಜನ ಕ್ಯೂನಲ್ಲಿ ನಿಂತವರು ಮತ ಚಲಾವಣೆ ಮಾಡಲಿದ್ದು ಮತದಾನ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ.

ಇಂಡಿಯಾ ಟುಡೇ - ಆಕ್ಸಿಸ್ ಮೈ ಇಂಡಿಯಾ ಕರ್ನಾಟಕ ಚುನಾವಣೋತ್ತರ ಸಮೀಕ್ಷೆ ನಡೆಸಿದೆ. 222 ಕ್ಷೇತ್ರಗಳಲ್ಲಿ 70,574 ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಈ ಸರ್ವೆ ನಡೆಸಲಾಗಿದೆ.

ಸಮೀಕ್ಷೆ ಪ್ರಕಾರ,

ಕಾಂಗ್ರೆಸ್: 106 - 118

ಬಿಜೆಪಿ: 79 - 92

ಜೆಡಿಎಸ್ + ಬಿಎಸ್ಪಿ: 22 - 30

ಇತರರು: 1 - 4

ಸ್ಥಾನಗಳನ್ನು ಗೆಲ್ಲಲಿದ್ದಾರೆ.

ಇನ್ನು ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಶೇಕಡಾ 39 ಮತಗಳನ್ನು ಪಡೆಯಲಿದೆ. ಬಿಜೆಪಿ ಶೇಕಡಾ 35 ಮತಗಳನ್ನು ಪಡೆದು ಎರಡನೇ ಸ್ಥಾನ ಮತ್ತು ಜೆಡಿಎಸ್ + ಬಿಎಸ್ಪಿ ಶೇಕಡಾ 17 ಮತಗಳನ್ನು ಪಡೆಯಲಿದೆ. ಇತರರು ಶೇಕಡಾ 9 ಮತಗಳನ್ನು ಹಂಚಿಕೊಳ್ಳಲಿದ್ದಾರೆ.

ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರ ನಡೆಸುವ ಸಾಧ್ಯತೆಗಳು ಕಾಣಿಸುತ್ತಿವೆ.

English summary
Karnataka assembly elections 2018: Here is Exit Poll Results of Karnataka Assembly Election 2018 conducted by India Today-Axis My India. Voting for 222 assembly constituencies held on May 12 and results will be out on May 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X