• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Exit Poll : ದಿಗ್ವಿಜಯ ಮತ್ತು ವಿಜಯವಾಣಿ ಫಲಿತಾಂಶ ಬಿಜೆಪಿ ಬಹುಮತಕ್ಕೆ ಹತ್ತಿರ

By Manjunatha
|

ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭೆಯ 222 ಸ್ಥಾನಕ್ಕಾಗಿ ಮೇ.12 ರಂದು ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಅಂತ್ಯ ಕಂಡಿದೆ. ದಿಗ್ವಿಜಯ ನ್ಯೂಸ್‌ ಮತ್ತು ವಿಜಯವಾಣಿ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಬಹುಮತಕ್ಕೆ ಸನಿಯದಲ್ಲಿದೆ.

ದಿಗ್ವಿಜಯ ಮತ್ತು ವಿಜಯವಾಣಿ ಜಂಟಿಯಾಗಿ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 103-110 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದಿದೆ. ಆ ಮೂಲಕ ಬಹುಮತಕ್ಕೆ ಹತ್ತಿರವಿದ್ದು ಸರ್ಕಾರವನ್ನು ಬಿಜೆಪಿಯೇ ರಚಿಸಲಿದೆ ಎನ್ನುತ್ತಿದೆ ಈ ಸಮೀಕ್ಷೆ.

Exit Poll : ಟೈಮ್ಸ್ ನೌ ಫಲಿತಾಂಶ ಪ್ರಕಟ, ಅತಂತ್ರ ವಿಧಾನಸಭೆ

ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ 76-80 ಸ್ಥಾನ ಪಡೆದುಕೊಂಡರೆ, ಜೆಡಿಎಸ್‌ ಪಕ್ಷವು 31-35 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಇತರ ಪಕ್ಷ ಅಥವಾ ಪಕ್ಷೇತರರು 04-18 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ.

Karnataka Assembly Elections 2018: Exit polls results Digvijaya and Vijayavani

ಬಹುತೇಕ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಮತ್ತು ನ್ಯೂಸ್‌ ಏಜೆನ್ಸಿಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ್ದು ಅಲ್ಲಿಯೂ ಮಿಶ್ರ ಫಲಿತಾಂಶ ದೊರಕಿದೆ. ಕೆಲವು ಸುದ್ದಿವಾಹಿನಿಗಳು ಕಾಂಗ್ರೆಸ್‌ಗೆ ಬಹುಮತ ಎಂದರೆ ರಿಪಬ್ಲಿಕ್ ಸೇರಿದಂತೆ ಇನ್ನು ಕೆಲವು ಮಾಧ್ಯಮಗಳು ಬಿಜೆಪಿಗೆ ಬಹುಮತ ಎಂದಿವೆ. ಇನ್ನು ಕೆಲವು ವಾಹಿನಿಗಳು ಅತಂತ್ರ ಸರ್ಕಾರ ಎಂದಿವೆ.

ಈ ಬಾರಿ ರಾಜ್ಯದಲ್ಲಿ ಒಟ್ಟು 5,00,15,895 (5 ಕೋಟಿ) ಮತದಾರರಿದ್ದಾರೆ. ಇದರಲ್ಲಿ 2,53,26,629 ಪುರುಷ ಮತದಾರರಾದರೆ, ಮಹಿಳಾ ಮತದಾರರ ಸಂಖ್ಯೆ 2,46,84,311. ಇನ್ನು 4,955 ತೃತೀಯ ಲಿಂಗಿ ಮತದಾರರೂ ರಾಜ್ಯದಲ್ಲಿದ್ದಾರೆ.

Suvarna news ಚುನಾವಣೋತ್ತರ ಸಮೀಕ್ಷೆ

2,622 ಅಭ್ಯರ್ಥಿಗಳಿದ್ದು, ಪುರುಷ ಅಭ್ಯರ್ಥಿಗಳು 2,405, ಮಹಿಳೆಯರು 217. ಪಕ್ಷವಾರು: ಬಿಜೆಪಿ 222, ಕಾಂಗ್ರೆಸ್ 220, ಜೆಡಿಎಸ್ 199, ಬಿಎಸ್ಪಿ 18, ಇತರೆ 1963.

2013ರಲ್ಲಿ ಶೇ 71.45ರಷ್ಟು ಮಾತ್ರ ಮತದಾನ ದಾಖಲಾಗಿತ್ತು. ಕೊನೆ ಗಳಿಗೆಯಲ್ಲಿ ಮತದಾರರು ಕ್ಯೂನಲ್ಲಿ ಬಂದು ನಿಂತರೆ ರಾತ್ರಿ ಹತ್ತು ಗಂಟೆಯಾದರೂ ಮತದಾನ ಮಾಡುವ ಅವಕಾಶ ನೀಡಬೇಕಾಗುತ್ತದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳು ಮತದಾನಕ್ಕೂ 48 ಗಂಟೆಗಳಿಗೂ ಮುನ್ನ ಯಾವುದೇ ಸಮೀಕ್ಷೆ, ಫಲಿತಾಂಶ ಹೊರ ಹಾಕದಂತೆ ಚುನಾವಣಾ ಆಯೋಗ ನಿಯಮ ಜಾರಿಗೊಳಿಸಿತ್ತು. ಅದರಂತೆ, ಮತದಾನ ಪ್ರಕ್ರಿಯೆ ಮುಗಿದ ನಂತರ ಚುನಾವಣೋತ್ತರ ಸಮೀಕ್ಷೆ ಫಲಿತಾಂಶವನ್ನು ಎಲ್ಲಾ ಮಾಧ್ಯಮಗಳು ಪ್ರಕಟಿಸಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is Exit Poll Results of Karnataka Assembly Election 2018 conducted by Digvijaya. Voting for 222 assembly constituencies held on May 12 and results will be out on May 15. As per the Digvijaya and Vijayavani prediction

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+33118349
CONG+81485
OTH1080108

Arunachal Pradesh

PartyLWT
BJP18018
CONG000
OTH505

Sikkim

PartyLWT
SDF909
SKM606
OTH000

Odisha

PartyLWT
BJD1010101
BJP28028
OTH17017

Andhra Pradesh

PartyLWT
YSRCP1453148
TDP26026
OTH101

LEADING

Varun Gandhi - BJP
Pilibhit
LEADING
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more