ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿಪಿ ಲೋಕನೀತಿ, ಸಿಎಸ್ ಡಿಎಸ್ ಸಮೀಕ್ಷೆ: ಅಸೆಂಬ್ಲಿ ಅತಂತ್ರ

By Mahesh
|
Google Oneindia Kannada News

ಬೆಂಗಳೂರು, ಮೇ 07 : ಕರ್ನಾಟಕ ವಿಧಾನಸಭೆ ಚುನಾವಣೆ 2018ಗಾಗಿ ಎಬಿಪಿ ನ್ಯೂಸ್ ವಾಹಿನಿ- ಸಿಎಸ್‌ಡಿಎಸ್-ಲೋಕನೀತಿ ಸಮೀಕ್ಷೆ ನಡೆಸಿ, ಜನಾಭಿಪ್ರಾಯ ಸಂಗ್ರಹಿಸಿ ವರದಿ ಪ್ರಕಟವಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಪ್ರಕಟಿಸಿದ್ದ ಸಮೀಕ್ಷೆಯಂತೆ ಮೇ 07ರಂದು ಪ್ರಕಟಿತ ಸಮೀಕ್ಷೆ ಕೂಡಾ ವಿಧಾನಸಭೆ ಅತಂತ್ರವಾಗಲಿದೆ ಎಂದು ಘೋಷಿಸಿದೆ.

ಇಂಡಿಯಾ ಟುಡೇ, ಕಾರ್ವಿ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸೀಟು?ಇಂಡಿಯಾ ಟುಡೇ, ಕಾರ್ವಿ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸೀಟು?

ಇಂಡಿಯಾ ಟುಡೇ, ಸಿಫೋರ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಟೈಮ್ಸ್ ನೌ ಇನ್ನಿತರ ಸಮೀಕ್ಷೆಗಳಲ್ಲಿ ಅತಂತ್ರ ಸ್ಥಿತಿ ಉಂಟಾಗಲಿದೆ ಎಂದು ಫಲಿತಾಂಶ ಬಂದಿತ್ತು. ಆದರೆ, ಎಬಿಪಿ ವಾಹಿನಿ ಸಮೀಕ್ಷೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ಗೆ ಸರಿಸಮನಾದ ಪೈಪೋಟಿ ನೀಡಲಿದೆ ಎಂದು ಮತ್ತೊಮ್ಮೆ ವರದಿಯಾಗಿದೆ.

ಮೇ 07ರಂದು ಪ್ರಕಟಿತ ಫಲಿತಾಂಶ
ಬಿಜೆಪಿ : 84
ಕಾಂಗ್ರೆಸ್ : 97
ಜೆಡಿಎಸ್ ಪ್ಲಸ್ : 37
ಇತರೆ : 4
ಮ್ಯಾಜಿಕ್ ನಂಬರ್ : 113.
ಫಲಿತಾಂಶ: ಅತಂತ್ರ ವಿಧಾನಸಭೆ, ಯಾವುದೆ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲ. ಮೈತ್ರಿ ಸರ್ಕಾರದ ಸಾಧ್ಯತೆ.

ಏಪ್ರಿಲ್ 23ರಂದು ಪ್ರಕಟವಾದ ಫಲಿತಾಂಶ
ಬಿಜೆಪಿ : 89-95
ಕಾಂಗ್ರೆಸ್ : 85- 91
ಜೆಡಿಎಸ್ ಪ್ಲಸ್ : 32-38
ಇತರೆ : 6-12

Tv 5 ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ, ಯಡಿಯೂರಪ್ಪ ಮೆಚ್ಚಿನ ಸಿಎಂ Tv 5 ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ, ಯಡಿಯೂರಪ್ಪ ಮೆಚ್ಚಿನ ಸಿಎಂ

ಸಮೀಕ್ಷೆಯ ಪ್ರಕಾರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ, ಯಾವ ಪಕ್ಷವೂ 113 ಸೀಟುಗಳ ಗುರಿ ತಲುಪಲಾರವು ಎಂದು ಸಮೀಕ್ಷೆ ಹೇಳಿದೆ.

ಶೇಕಡಾವಾರು ಮತ ಗಳಿಕೆ : ಕಾಂಗ್ರೆಸ್‌ ಮುಂದೆ

ಶೇಕಡಾವಾರು ಮತ ಗಳಿಕೆ : ಕಾಂಗ್ರೆಸ್‌ ಮುಂದೆ

ಶೇಕಡಾವಾರು ಮತ ಗಳಿಕೆಯಲ್ಲಿ ಕಾಂಗ್ರೆಸ್ ಪರ ಹೆಚ್ಚು ಜನರು ಮತ ಹಾಕಿರುವುದು ಕಂಡು ಬಂದಿದೆ. ಹೆಚ್ಚಿನ ಮಂದಿ ಕಾಂಗ್ರೆಸ್‌ಗೆ ಮತ ಚಲಾಯಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ ಮತ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಬಿಜೆಪಿ ತೀರಾ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್‌ಗಿಂತ ಕೇವಲ ಶೇ 5ರಷ್ಟು ಮತಗಳಿಂದ ಹಿಂದಿದೆ.

ಮೇ 07ರಂದು ಪ್ರಕಟಿತ ಫಲಿತಾಂಶ:
ಕಾಂಗ್ರೆಸ್‌ಗೆ ಮತ ಹಂಚಿಕೆ ಶೇ 38
ಬಿಜೆಪಿಗೆ ಮತ ಚಲಾವಣೆ ಶೇ 33.
ಜೆಡಿಎಸ್‌ ಹಾಗೂ ಮೈತ್ರಿ ಪಕ್ಷಗಳ ಪರ ಮತ ಚಲಾಯಿಸುವವರು ಶೇ 22
ಉಳಿದ ಪಕ್ಷಗಳು ಮತ್ತು ಪಕ್ಷೇತರರಿಗೆ ಬೀಳಲಿರುವ ಮತ ಪ್ರಮಾಣ ಶೇ 7

ಏಪ್ರಿಲ್ 23ರಂದು ಪ್ರಕಟಿತ ಫಲಿತಾಂಶ:
ಕಾಂಗ್ರೆಸ್‌ಗೆ ಮತ ಹಂಚಿಕೆ ಶೇ 37
ಬಿಜೆಪಿಗೆ ಮತ ಚಲಾವಣೆ ಶೇ 35 .
ಜೆಡಿಎಸ್‌ಗೆ ಮತ ಚಲಾಯಿಸುವವರು ಶೇ 20
ಉಳಿದ ಪಕ್ಷಗಳು ಮತ್ತು ಪಕ್ಷೇತರರಿಗೆ ಬೀಳಲಿರುವ ಮತ ಪ್ರಮಾಣ ಶೇ 8

ಸಿದ್ದರಾಯಮಯ್ಯ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ?

ಸಿದ್ದರಾಯಮಯ್ಯ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ?

ತುಂಬಾ ಚೆನ್ನಾಗಿದೆ: 29%
ಚೆನ್ನಾಗಿದೆ : 43%
ಕಳಪೆ: 15%
ಅತ್ಯಂತ ಕಳಪೆ : 10%

ಮೋದಿ ಅವರ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ?
ತುಂಬಾ ಚೆನ್ನಾಗಿದೆ: 23%
ಚೆನ್ನಾಗಿದೆ : 45%
ಕಳಪೆ: 16%
ಅತ್ಯಂತ ಕಳಪೆ : 12%

ಯಾವ ಪಕ್ಷ ಅತ್ಯಂತ್ರ ಭ್ರಷ್ಟ?

ಯಾವ ಪಕ್ಷ ಅತ್ಯಂತ್ರ ಭ್ರಷ್ಟ?

ಕಾಂಗ್ರೆಸ್ : 41%
ಬಿಜೆಪಿ : 44%
ಜೆಡಿಎಸ್ : 4%

ಮೇ 12ರಂದು ಕರ್ನಾಟಕದಲ್ಲಿ ವಿಧಾನಸಭೆಗೆ ಮತದಾನ ನಡೆಯಲಿದ್ದು, ಮೇ 15ರಂದು ಫಲಿತಾಂಶ ಹೊರಬರಲಿದೆ. ಎಬಿಪಿ ಸುದ್ದಿ ವಾಹಿನಿ, ಲೋಕನೀತಿ-ಸಿಎಸ್ ಡಿಎಸ್ ಸಂಸ್ಥೆ ಏಪ್ರಿಲ್ 27ರಿಂದ ಮೇ 03ರ ತನಕ ಸುಮಾರು 56 ವಿಧಾನಸಭಾ ಕ್ಷೇತ್ರಗಳ 224 ಬೂತ್ ಗಳ 4929ರ ಜನರ ಅಭಿಮತ ಸಂಗ್ರಹಿಸಿ ನೀಡಿರುವ ಫಲಿತಾಂಶ ಇದಾಗಿದೆ.

ಮೇ 07ರ ಸಮೀಕ್ಷೆಯಂತೆ :

ಮೇ 07ರ ಸಮೀಕ್ಷೆಯಂತೆ :

ಕಾಂಗ್ರೆಸ್ : 18%
ಬಿಜೆಪಿ : 61%
ಜೆಡಿಎಸ್ : 11%

ಏಪ್ರಿಲ್ 23ರ ಸಮೀಕ್ಷೆಯಂತೆ: ಸಮೀಕ್ಷೆ ಪ್ರಕಾರ ಲಿಂಗಾಯತರ ಮತಗಳು ಹೆಚ್ಚಿಗೆ ಹೋಗುವುದು ಬಿಜೆಪಿಗೆ ಅಂತೆ. ಶೇ 65% ಪ್ರತಿಶತ ಲಿಂಗಾಯತರ ಮತಗಳು ಬಿಜೆಪಿ ಪಾಲಾದರೆ. 25% ಮತಗಳು ಕಾಂಗ್ರೆಸ್‌ಗೆ ಹೋಗಲಿದೆ.

English summary
Karnataka Assembly Elections 2018 : ABP news Lokniti CSDS Opinion Poll is out. This is the second opinion from ABP news and it predicted a Hung assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X