ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು, ಶೃಂಗೇರಿಯಲ್ಲಿ ಅತೀ ಕಡಿಮೆ ಮತದಾರರು

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿದ್ದು, ಕರ್ನಾಟಕದಲ್ಲಿ ಇದುವರೆಗೂ ಸುಮಾರು 4.96 ಕೋಟಿ ಮತದಾರ ಹೆಸರು ಮತದಾರರ ಪಟ್ಟಿ ಸೇರಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರಿದ್ದರೆ, ಶೃಂಗೇರಿಯಲ್ಲಿ ಅತೀ ಕಡಿಮೆ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾ ಕಚೇರಿ ತಿಳಿಸಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಹೆಚ್ಚು ಮಹಿಳಾ ಮತದಾರರಿದ್ದಾರೆ ಎಂದು ಆಯೋಗ ತಿಳಿಸಿದೆ.

* ಎಲೆಕ್ಟ್ರೋಲ್ ರೋಲ್ ಗಳ ಅಂತಿಮ ಪ್ರಕಟಣೆಯನ್ನು ಫೆಬ್ರವರಿ 28 ರಂದು ಮಾಡಲಾಗುತ್ತದೆ. ಈ ಎಲೆಕ್ಟ್ರೋಲ್ ರೋಲ್ ಗಳು ಮುಖ್ಯ ಚುನಾವಣಾ ಕಚೇರಿಯ(CEO) ಲಭ್ಯವಾಗುವಂತೆ ಮಾಡಲಾಗುತ್ತದೆ. ಜೊತೆಗೆ ಎಲ್ಲಾ ಪ್ರದೇಶದ ಎಲೆಕ್ಟ್ರಾಲ್ ರೋಲ್ ಆಫೀಸ್ ಗಳಲ್ಲೂ ಇದು ಲಭ್ಯವಿರುತ್ತದೆ.
* ಚುನಾವಣಾ ಆಯೋಗದ ಸೂಚನೆಯ ಮೆರೆಗೆ ನವೆಂಬರ್ 30, 2017 ರಿಂದ ಫೆ.28, 2018 ರವರೆಗೆ ಮರುಪರಿಶೀಲನೆ ಮಾಡಲಾಗುತ್ತಿದೆ.
* ವಿಶೇಷ ಮರುಪರಿಶೀಲನೆಯ ಸಮಯದಲ್ಲಿ ಹಲವೆಡೆ ಮನೆ ಮನೆಗೆ ತೆರಳಿ ಎನ್ ರೋಲ್ ಮೆಂಟ್ ಅರ್ಜಿಗಳನ್ನು ನೀಡಲಾಗಿದೆ. ಅಲ್ಲದೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಅಥವಾ ಸೇರಿಸಲು ಅರ್ಜಿಗಳನ್ನು ನೀಡಲಾಗಿದೆ.

ಮರು ಪರಿಶೀಲನೆಯ ಸಮಯದಲ್ಲಿ ಬಂದ ಅರ್ಜಿಗಳು

ಮರು ಪರಿಶೀಲನೆಯ ಸಮಯದಲ್ಲಿ ಬಂದ ಅರ್ಜಿಗಳು

1. ಚುನಾವಣೆ ಪಟ್ಟಿಯಲ್ಲಿ ಹೆಸರು ಸೇರಿಸಲು 1712583 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 1668059 ಅರ್ಜಿಗಳನ್ನು ಅನುಮೋದಿಸಲಾಗಿದೆ.
2. ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಬಂದ 1041668 ಅರ್ಜಿಗಳ ಪೈಕಿ 1013704 ಗೆ ಅನುಮೋದನೆ ನೀಡಲಾಗಿದೆ.
3. ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡಲು 287564 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 273213 ಗಳನ್ನು ಸ್ವೀಕರಿಸಲಾಗಿದೆ.
4. ಇದುವರೆಗೂ ವಿವಿಧ ಕಾರಣಗಳಿಂದ ಸ್ವೀಕರಿಸಲಾದ ಅರ್ಜಿಗಳು 3041815 . ಅವುಗಳಲ್ಲಿ ಅನುಮೋದನೆ ಸೂಚಿಸಿದ್ದು 2954976

ಅಂತಿಮ ಪಟ್ಟಿಯಲ್ಲಿ ಒಟ್ಟು ಮತದಾರರ ಸಂಖ್ಯೆ

ಅಂತಿಮ ಪಟ್ಟಿಯಲ್ಲಿ ಒಟ್ಟು ಮತದಾರರ ಸಂಖ್ಯೆ

ಅಂತಿಮ ಪಟ್ಟಿಯಲ್ಲಿ ಒಟ್ಟು ಮತದಾರರ ಸಂಖ್ಯೆ: 2018 (ತಾತ್ಕಾಲಿಕ)
* ಇತರ ಜಿಲ್ಲೆಗಳಲ್ಲಿ: ಪುರುಷರು: 20575029, ಮಹಿಳೆಯರು: 20279582, ತೃತಿಯ ಲಿಂಗಿಯರು: 3113, ಒಟ್ಟು 40857724
* ಬೆಂಗಳೂರಿನಲ್ಲಿ: ಪುರುಷರು: 4604190, ಮಹಿಳೆಯರು: 4192706, ತೃತಿಯ ಲಿಂಗಿಗಳು: 1439, ಇತರರು: 8798335
* ಒಟ್ಟು ಮತದಾರರ ಸಂಖ್ಯೆ: ಪುರುಷರು: 25179219, ಮಹಿಳೆಯರು: 24472288, ತೃತಿಯ ಲಿಂಗಿಗಳು: 4552 , ಇತರರು: 49656059
* ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಮತದಾರರ ಸಂಖ್ಯೆ 2.21 ಲಕ್ಷ

ಹೊಸ ಮತದಾರರು

ಹೊಸ ಮತದಾರರು

ಕಳೆದ ಐದು ವರ್ಷಗಳಲ್ಲಿ 18-19 ವರ್ಷದ ಹಲವು ಯುವಕರು ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಸಿದ್ದಾರೆ. 2013 ರಲ್ಲಿ 718934, 2014 ರಲ್ಲಿ 801147 , 2015 ರಲ್ಲಿ 706379, 2016 ರಲ್ಲಿ 551069, 2017 ರಲ್ಲಿ 279624, 2018 ರಲ್ಲಿ 1542121 ಮತದಾರರ ಹೆಸರು ನೋಂದಾಯಿಸಲಾಗಿದೆ.

ಮಹಿಳಾ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ

ಮಹಿಳಾ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ

ವರ್ಷದಿಂದ ವರ್ಷಕ್ಕೆ ಮಹಿಳಾ ಮತದಾರರ ಸಂಖ್ಯೆ ಹೆಚ್ಚುತ್ತಿದ್ದು, ಲಿಂಗಾನುಪಾತದಲ್ಲಿ ಬೆಳವಣಿಗೆ ಕಂಡುಬಂದಿದೆ.

2013 ರಲ್ಲಿ 1000 ಪುರುಷರಿಗೆ 958 ಮಹಿಳೆಯರಿದ್ದರೆ ಇದೀಗ ಬಿಡುಗಡೆಯಾದ ಮತದಾರರ ಪಟ್ಟಿಯಲ್ಲಿ(2018) 1000 ಪುರುಷರಿಗೆ 972 ಮಹಿಳೆಯರಿದ್ದಾರೆ.

ಶೃಂಗೇರಿಯಲ್ಲಿ ಅತೀ ಕಡಿಮೆ ಮತದಾರರು

ಶೃಂಗೇರಿಯಲ್ಲಿ ಅತೀ ಕಡಿಮೆ ಮತದಾರರು

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾರರಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರಿದ್ದಾರೆ. ಶೃಂಗೇರಿಯಲ್ಲಿ ಒಟ್ಟು 162108 ಮತದಾರರಿದ್ದರೆ ಅದರಲ್ಲಿ ಪುರುಷರು: 80378, ಮಹಿಳೆಯರು: 81725, ಇತರರು 5.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 501408 ಮತದಾರರಿದ್ದರೆ ಅವರಲ್ಲಿ 311427 ಪುರುಷರು, 269878 ಮಹಿಳೆಯರು ಮತ್ತು 103 ಇತರರು.

English summary
Karnataka has now around 4.96 crore voters as per the final rolls (tentative). Sringeri Assembly Constituency has the lowest number of voters in the state while the highest numbers of voters are from Bengaluru South Assembly Constituency. Bengaluru South has highest number of female voters in the entire state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X