ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE: ಮತದಾರನ ತೀರ್ಪು ಸ್ಪಷ್ಟ; ಕಾಂಗ್ರೆಸ್ಸಿಗೆ ಶರಣು

By Srinath
|
Google Oneindia Kannada News

karnataka-assembly-election-2013-results-trends-latest
ಬೆಂಗಳೂರು, ಮೇ 8: ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರಿಗೆ ಭರ್ಜರಿ ಗೆಲುವು. ಇಕ್ಬಾಲ್ ಅನ್ಸಾರಿಗೆ ಗೆಲುವು. ಇಬ್ರಾಹಿಂಗೆ ಸೋಲು- ಅಪ್ಪಾಜಿಗೌಡಗೆ ಜಯ. ಯಲಹಂಕ ವಿಶ್ವನಾಥ್ ಜಯ.

ಮುನ್ನಡೆಯ ಫಲಿತಾಂಶ - ಕಾಂಗ್ರೆಸ್: 32, ಬಿಜೆಪಿ: 21 ಜೆಡಿಎಸ್: 14 ಕೆಜೆಪಿ: 4 ಬಿಎಸ್ಸಾರ್: 1 ಇತರೆ: 6

ಘೋಷಿತ ಫಲಿತಾಂಶ (12.30ರಲ್ಲಿ)- ಕಾಂಗ್ರೆಸ್: 86, ಬಿಜೆಪಿ: 19 ಜೆಡಿಎಸ್: 26 ಕೆಜೆಪಿ: 3 ಬಿಎಸ್ಸಾರ್: 3 ಇತರೆ: 7

ಹಿಂದಿನ ಸುದ್ದಿ: ಬಚ್ಚೇಗೌಡಗೆ ಭಾರಿ ಸೋಲು. ಕೆಜೆಪಿಯ ಬಿಪಿ ಹರೀಶಗೆ ಮುಖಭಂಗ. ಬಳ್ಳಾರಿ ಗ್ರಾಮಾಂತರದಲ್ಲಿ ಶ್ರೀರಾಮುಲುಗೆ ಜಯ. ಹಿರಿಯೂರಿನಲ್ಲಿ ಕಾಂಗ್ರೆಸಿನ ಸುಧಾಕರ್ ಜಯ. ಜೆಡಿಎಸ್ ಕೃಷ್ಣಪ್ಪಗೆ ಸೋಲು. ಹುಬ್ಬಳ್ಳಿ ಧಾರವಾಢ ಪಶ್ಚಿಮದಲ್ಲಿ ಅರವಿಂದ್ ಬೆಲ್ಲದ್ ಜಯ.

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಗೌಡಗೆ ಭಾರಿ ಸೋಲು. ಕೃಷ್ಣಪ್ಪಗೆ ಜಯ. ರವಿ ಸುಬ್ರಮಣ್ಯಗೆ ಗೆಲುವು. ದಾಸರಹಳ್ಳಿಯಲ್ಲಿ ಮುನಿರಾಜುಗೆ ವಿಜಯದ ಮಾಲೆ. ಬಿಎಲ್ ಶಂಕರ್ ಗೆ ಸೋಲು. ಆರ್ ಅಶೋಕ್ ಗೆಲುವು. ಶಹಾಪುರದಲ್ಲಿ ಕೆಜೆಪಿಯ ಗುರುಪಾಟೀಲ್ ಗೆಲುವಿನ ಸನಿಹ.

ಸಿಪಿ ಯೋಗೀಶ್ವರ್ ಭಾರಿ ಗೆಲುವು, ಅನಿತಾ ಕುಮಾರಸ್ವಾಮಿಗೆ ಮುಖಭಂಗ. ಯಡಿಯೂರಪ್ಪಗೆ ಭರ್ಜರಿ ಶಿಕಾರಿ. ಪರಮೇಶ್ವರ್ ಬಹುತೇಕ ಸೋಲು. ಮಾಗಡಿಯಲ್ಲಿ ಬಾಲಕೃಷ್ಣಗೆ ಗೆಲುವಾಗಿದ್ದು, ಕೆಜೆಪಿಯ ಜೇಡರಳ್ಳಿ ಕೃಷ್ಣಪ್ಪಗೆ ಸೋಲಾಗಿದೆ.

ಮತದಾರನ ಸ್ಪಷ್ಟ ತೀರ್ಪು; ಕಾಂಗ್ರೆಸ್ಸಿಗೆ ಶರಣು. ಬ್ಲೂ ಬಾಯ್ಸ್ ಪೈಕಿ ಒಬ್ಬರಿಗೆ ಮಾತ್ರ ಗೆಲುವು. ಕೃಷ್ಣ ಪಾಲೇಮಾರ್, ಸಿಸಿ ಪಾಟೀಲ್ ಅವರಿಗೆ ಸೋಲು. ಲಕ್ಷಣ ಸವದಿಗೆ ಮಾತ್ರವೇ ಗೆಲುವು.

ಮಾಲೂರಿನಲ್ಲಿ ಕೃಷ್ಣಯ್ಯ ಶೆಟ್ಟಿಗೆ ಮುಖಭಂಗ. ಜೆಡಿಎಸ್ ಗೆಲುವು, ಕೆಜಿಎಫ್ ನಲ್ಲಿ ಬಿಜೆಪಿ ರಾಮಕ್ಕಗೆ ಗೆಲುವು. ಪೂಜಾಗಾಂಧಿಗೆ ಸೋಲು. ದೇಶಪಾಂಡೆ ಗೆಲುವು.

ಸಿಪಿ ಯೋಗೀಶ್ವರ್ 4 ಸಾವಿರ ಮತ ಮುಂದು, ಅನಿತಾ ಹಿಂದೆ. ಹಾನಗಲ್ ಉದಾಸಿ ಸೋಲು. ಬಚ್ಚೇಗೌಡ ಹಿನ್ನಡೆ. ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಗೆಲುವು. ಕೃಷ್ಣ ಪಾಲೇಮಾರ್ ಹಿನ್ನಡೆ. ತೇಜಸ್ವಿನಿ ಹಿನ್ನಡೆ. ರಾಮದಾಸ್ ಹಿನ್ನಡೆ. ಮುನಿರತ್ನಂ ನಾಯ್ಡು ಮುನ್ನಡೆ.

ಶೋಭಾ ಕರಂದ್ಲಾಜೆಗೆ ಹೀನಾಯ ಸೋಲು. ಸುರೇಶ್ ಕುಮಾರ್, ವರ್ತೂರು ಪ್ರಕಾಶ್ ಗೆಲುವು. ಬಳ್ಳಾರಿಯಲ್ಲಿ ಬಿಜೆಪಿ ಆನಂದ್ ಸಿಂಗ್ ಗೆ ಗೆಲುವು. ಖಾತೆ ತೆರೆದ ಕೆಜೆಪಿ- ಬಿಸಿ ಪಾಟೀಲ್ ಸೋಲು-ಕೆಜೆಪಿ ಬಣಕಾರ್ ಗೆಲುವು. ಹನೂರಿನಲ್ಲಿ ಕಾಂಗ್ರೆಸ್ ನರೇಂದ್ರ ಗೆಲುವು. ಕೃಷ್ಣ ಭೈರೇಗೌಡ ಬಹುತೇಕ ಜಯ.

ಸೋತ ವಾಟಾಳ್, ಸಿಸಿ ಪಾಟೀಲ್ ಹಿನ್ನಡೆ. ಎಚ್ಸಿ ಮಹದೇವಪ್ಪ ಸೋಲು; ಸ್ಕೋಡಾ ಸಿದ್ದು ಗೆಲುವಿನತ್ತ. ಕಾಪು ಕಾಂಗೈನ ವಿನಾಯಕ ಸೊರಕೆ ಗೆಲುವು ಬಸವನ ಬಾಗೇವಾಡಿ ಕಾಂಗ್ರೆಸ್ ಗೆಲುವು.

ಚಾಮರಾಜಪೇಟೆಯಲ್ಲಿ ಜಮೀರ್ ಭಾಯ್ ಗೆಲುವು. ರೆಣುಕಾ ಸೋಲು, ಬಳ್ಳಾರಿ ಗ್ರಾ ಶ್ರೀರಾಮುಲು ಜಯದತ್ತ. ಕಂಪ್ಲಿ ಸುರೇಶ್ ಬಾಬು ಜಯ, ಕರುಣಾಕರ ರೆಡ್ಡಿ ವಿರುದ್ಧ ರವೀಂದ್ರಗೆ ಗೆಲುವು. ಮರಮೇಶ್ವರ್ ಸೋಲು ಖಚಿತ. ಶಿವಕುಮಾರ್ ಗೆಲುವು ಖಚಿತ. ರೋಶನ್ ಬೇಗ್ ಗೆಲುವು.

ಚಳ್ಳಕೆರೆ ಕಾಂಗ್ರೆಸ್ ಗೆಲುವು. ಸಿಟಿ ರವಿ ಮುನ್ನಡೆ. ಹಿರಿಯೂರು ಕೃಷ್ಣಪ್ಪ ಮುನ್ನಡೆ. ಕುಮಾರ ಬಂಗಾರಪ್ಪ ಹಿನ್ನಡೆ, ಮಧು ಮುನ್ನಡೆ. ಹೆಬ್ಬಾಳ ಜಗದೀಶ್ ಕುಮಾರ್ ಮುನ್ನಡೆ. ಶಿರಾದಲ್ಲಿ ಜಯಚಂದ್ರ ಮುನ್ನಡೆ.

ಯೋಗಿ ಗೆಲುವಿನಿತ್ತ, ಅನಿತಾ ಹಿಂದೆ ಹಿಂದೆ. ಚಾಮರಾಜನಗರ ವಾಸು ಗೆಲುವು, ಶಂಲಿಂಗೌ ಸೋಲು. ಜಗದೀಶ್ ಶೇಟ್ಟರ್ ಗೆಲುವಿನ ಸನಿಹ. ರೇಣುಕಾ ಸೋಲಿನತ್ತ. ಕಾಗೋಡು ತಿಮ್ಮಪ್ಪಗೆ 12ಸಾವಿರ ಮತ ಗೆಲುವು.

ಸುರೇಶ್ ಕುಮಾರ್, ದಿನೇಶ್ ಗುಂಡೂರಾವ್ ಮುನ್ನಡೆ. ನರೇಂದ್ರ ಸ್ವಾಮಿ ಹಿನ್ನಡೆ. ಕಾಗೇರಿ, ಬೊಮ್ಮಾಯಿ ಮುನ್ನಡೆ, ತುಮಕೂರು ನಗರ ಕಾಂಗೈ ಮುನ್ನಡೆ, ತು. ಗ್ರಾಮಾಂತರ ಕೆಜೆಪಿ ಮುನ್ನಡೆ. ಕರುಣಾಕರ ರೆಡ್ಡಿ ಹಿನ್ನಡೆ. ರವೀಂದ್ರ ನಾಥ್ ಹಿನ್ನಡೆ.

ಇಕ್ಬಾಲ್ ಅನ್ಸಾರಿ, ವಿ ಶ್ರೀನಿವಾಸ ಪ್ರಸಾದ್, ಜಿಡಿ ದೇವೇಗೌಡ, ರಾಮಲಿಂಗಾ ರೆಡ್ಡಿ, ಜಮೀರ್ ಮುನ್ನಡೆ. ಶಿವಮೊಗ್ಗದಲ್ಲಿ ಬಿಜೆಪಿಗೆ ಮುಖಭಂಗ.

ಪ್ರಿಯಾಕೃಷ್ಣ ಗೆಲುವಿನ ಸನಿಹ. ದೊಡ್ಡಬಳ್ಳಾಪುರ ಪಕ್ಷೇತರ ಮುನೇಗೌಡಗೆ ಮುನ್ನಡೆ. ಹಾಲಾಡಿಗೆ ಗೆಲುವು. ಕಡೂರು ದತ್ತಾಗೆ ಮುನ್ನಡೆ, ಬೆಳ್ತಂಗಡಿ ಕಾಂಗೈ ಮುನ್ನಡೆ.

ಶಕುಂತಲಾ ಶೆಟ್ಟಿ 2670 ಮತಗಳಿಂದ ಭಾರಿ ಗೆಲುವು. ಬಿಎಲ್ ಶಂಕರ್ ಹಿನ್ನಡೆ. ದೇಶಪಾಂಡೆ, ರಮೇಶ್ ಕುಮಾರ್ ಮುನ್ನಡೆ, ರೇಣುಕಾ ಹಿನ್ನಡೆ. ಯುಟಿ ಖಾದರ್, ಹಾಲಾಡಿ, ಸ್ಕೋಡಾ ಸಿದ್ದುಗೆ ಭಾರಿ ಮುನ್ನಡೆ.

ಕಾಂಗೈಗೆ ಮೊದಲ ಗೆಲುವು, ಉಡುಪಿಯಲ್ಲಿ ಪ್ರಮೋದ್ ಮದ್ವರಾಜ್ ಅವರಿಗೆ ಜೈಜೈ.

ಬಸವನಗುಡಿ- ಪ್ರೊ. ಬಿಕೆಸಿಗೆ ಹಿನ್ನಡೆ. ಬೆಂಗಳೂರಿನಲ್ಲಿ ಬಿಜೆಪಿ ಸ್ವಲ್ಪ ಮುಂದು. ಹಿಂದೆ ಕಾಂಗ್ರೆಸ್. ಸ್ಕೋಡಾ ಸಿದ್ದರಾಮಯ್ಯಗೆ 3 ಸಾವಿರ ಮತ ಮುನ್ನಡೆ. ಚೆಲುವರಾಯ ಸ್ವಾಮಿ ಮುನ್ನಡೆ.

ಶ್ರೀನಿವಾಸ ಹಾಲಾಡಿಗೆ 15,000 ಮತಗಳು ಮುಂದೆ. ಮದ್ವರಾಜ್ ಸಹ ಭಾರಿ ಮುನ್ನಡೆ. ಸಿದ್ದರಾಮಯ್ಯಗೆ ಮುನ್ನಡೆ

ಖೇಣಿ ಮುನ್ನಡೆ, ಕೃಷ್ಣಯ್ಯ ಶೆಟ್ಟಿ ಹಿನ್ನಡೆ. ಅಶೋಕ್ ಮುನ್ನಡೆ, ತೇಜಸ್ವಿನಿ ಹಿನ್ನಡೆ. ಮುರುಗೇಶ್ ನಿರಾಣಿ ಹಿನ್ನಡೆ. ಪೂಜಾ ಗಾಂಧಿಗೆ ಹಿನ್ನಡೆ.

ರೇವಣ್ಣ, ಎಚ್ ಡಿಕೆ ಮತ್ತು ಅನಿತಾ ಮುನ್ನಡೆ. ಬೇಳೂರಿಗೆ ಹಿನ್ನಡೆ, ಕಾಗೋಡು ಮುನ್ನಡೆ. ಇಬ್ರಾಹಿಂ ಹಿನ್ನಡೆ. ಶೋಭಾ ಮೂರನೆಯ ಸ್ಥಾನದಲ್ಲಿ. ಬಸವರಾಜ ಬೊಮ್ಮಾಯಿ ಮುನ್ನಡೆ, ಸೋಮಣ್ಣಗೆ ಹಿನ್ನಡೆ. ಉದಾಸಿ ಮುನ್ನಡೆ, ಸಿಸಿ ಪಾಟೀಲ್ ಹಿನ್ನಡೆ. ಪರಮೇಶ್ವರ್ ಹಿನ್ನಡೆ-ಜೆಡಿಎಸ್ ಮುನ್ನಡೆ.

ಎರಡನೆಯ ಸುತ್ತಿನಲ್ಲಿ ಈಶ್ವರಪ್ಪ ಮೂರನೆಯ ಸ್ಥಾನಕ್ಕೆ- ಕೆಜೆಪಿ ಮೊದಲ ಸ್ಥಾನದಲ್ಲಿ. ಡಿಕೆಶಿ ಮುನ್ನಡೆ, ಜಗದೀಶ್ ಶೆಟ್ಟರ್ ಮುನ್ನಡೆ.

ಮುನ್ನಡೆ- ಶತಕದತ್ತ ಕಾಂಗೈ. ಬಿಜೆಪಿ-ಜೆಡಿಎಸ್ ಸಮ-ಸಮ. ಅಂಬರೀಷ್ ಗೆ ಭಾರಿ ಮುನ್ನಡೆ. ದಾವಣಗೆರೆಯಲ್ಲಿ ಅಪ್ಪ-ಮಗ ಮುನ್ನಡೆ, ರೇಣುಕಾಗೆ ಹಿನ್ನಡೆ, ಕರುಣಾಕರ ರೆಡ್ಡಿ ಮುನ್ನಡೆ, ಇಬ್ರಾಹಿಂ ಹಿನ್ನಡೆ. ಮಾಗಡಿಯಲ್ಲಿ ಬಾಲಕೃಷ್ಣಗೆ ಹಿನ್ನಡೆ-ಕಾಂಗೈ ಮುನ್ನಡೆ. ತೇರದಾಳದಲ್ಲಿ ಉಮಾಶ್ರೀ ಮುನ್ನಡೆ.

ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದರೆ ಈಶ್ವರಪ್ಪ ಮೂರನೆಯ ಸ್ಥಾನದಲ್ಲಿದ್ದಾರೆ. ಯಡ್ಡಿ ಶಿಕಾರಿಪುರದಲ್ಲಿ ನಾಗಾಲೋಟದಲ್ಲಿದ್ದಾರೆ. ಸಿಟಿ ರವಿಗೆ ಅಲ್ಪ ಮುನ್ನಡೆ.

ಕಾಂಗ್ರೆಸ್ ದಾಪುಗಾಲುಹಾಕುತ್ತಿದೆ. ಬಿಜೆಪಿ ಕುಂಟುತ್ತಾ ಸಾಗಿದೆ. ಜೆಡಿಎಸ್ ಸ್ವಲ್ಪ ಪರವಾಗಿಲ್ಲ. ಕೆಜೆಪಿ ನಿರೀಕ್ಷೆಯಂತೆ ಒಂದೊಂದೇ ಮುನ್ನಡೆ ಸಾಧಿಸುತ್ತಾ ನಡೆದಿದೆ. ರಾಜಾಜಿನಗರದಲ್ಲಿ ಶೋಭಾ ಕರಂದ್ಲಾಜೆಯೂ ಹಿನ್ನಡೆ, ಸುರೇಶ್ ಕುಮಾರೂ ಹಿನ್ನಡೆ. ಮೂರನೆಯವನಿಗೆ ಲಾಭವೆಂಬಂತೆ ಕಾಂಗ್ರೆಸ್ ಮಂಜುಳಾ ನಾಯ್ಡು ಮುನ್ನಡೆ!

ನಿಜಕ್ಕೂ ಇಡೀ ಬೆಂಗಳೂರು ಕೂಲ್ ಕೂಲ್ ಆಗಿದೆ. ಹೆಸರಿಗೆ ತಕ್ಕಂತೆ ಬಿರುಬೇಸಿಗೆಯಲ್ಲೂ ತಂಪಾಗಿದೆ. ಹಾಗಂತ ಮಳೆ ಏನೂ ಬರ್ತಿಲ್ಲ. ಆದರೂ ಥಂಡಾ ಥಂಡಾ! ಆದರೆ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಯಾರೊಬ್ಬರೂ ತಂಪಾಗಿಲ್ಲ. ಒಳಗೆ ಮಾತ್ರ ಧಗಧಗ ಅನ್ನುತ್ತಿದ್ದಾರೆ. ಧಾವಂತದ ಅಗ್ನಿ ಒಡಲಾಳದಲ್ಲಿ ತುಂಬಿದೆ. ಥ್ಯಾಂಕ್ಸ್ ಟು ಎಲೆಕ್ಷನ್ ರಿಸಲ್ಟ್.

ಕೌಂಟಿಂಗ್ ಶುಭಾರಂಭವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ರಿಪೀಟ್ ಷೋ ಆಗುತ್ತದಾ? ಕಾದುನೋಡೋಣ!

ಹೈ ಡ್ರಾಮಾ, ಸಂಭ್ರಮ, ಆತುರ, ಆತಂಕ, ದುಗುಡ OMG! ಬಂದೇ ಬಿಟ್ಟಿದೆ ಆ ಘಳಿಗೆ. ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ದಿನ ಇದು. ಮೂರು ದಿನಗಳ ಮುಂಚೆಯೇ ಸಾಂಘಿಕವಾಗಿ ಇದಕ್ಕೆ ಮುನ್ನುಡಿ ಬರೆದಿರುವ ಮತದಾರ ಪ್ರಭುಗಳು ಇಂದೇನಾಗಲಿದೆ ಎಂಬುದನ್ನು ಇಡಿಇಡಿಯಾಗಿ ತಿಳಿದುಕೊಳ್ಳುವ ಹಂಬಲದಲ್ಲಿದ್ದಾರೆ.

ಅದಕ್ಕೆ ತಕ್ಕಂತೆ ಒನ್ಇಂಡಿಯಾಕನ್ನಡ ಸಹ ಎಂದಿನಂತೆ ಅದೇ ಉತ್ಸಾಹದಿಂದ ಕಾರ್ಯಮಗ್ನವಾಗಿದ್ದು, ನಿಮ್ಮ ಕಾತುರ ತಣಿಸಲಿದೆ. ಇದಕ್ಕೆ ಕೆಲವೇ ಕ್ಷಣಗಳಲ್ಲಿ ಉತ್ತರರೂಪಿಯಾಗಿ ಜನಾದೇಶವನ್ನು ತಾಜಾ ಆಗಿ ಕ್ಷಣಕ್ಷಣದ ಮಾಹಿತಿ ನೀಡಲಿದೆ.

ಎಂದಿನಂತೆ ಒನ್ಇಂಡಿಯಾಕನ್ನಡ ಓದುಗರೂ ಸಹ ಅಷ್ಟೇ ಕುತೂಹಲದಿಂದ ಜನಾದೇಶಕ್ಕಾಗಿ ಕಾಯುತ್ತಿದ್ದಾರೆ. 50 ದಿನಗಳ ಹಿಂದೆ ರಾಜ್ಯದಲ್ಲಿ ಆರಂಭವಾದ ಚುನಾವಣಾ ಜನಜಾತ್ರೆ ಇಂದು ಮುಕ್ತಾಯಗೊಳ್ಳಲಿದೆ. 223 ವಿಧಾನಸಭಾ ಕ್ಷೇತ್ರಗಳಿಂದ 2948 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ತಮ್ಮ ಅದೃಷ್ಟವನ್ನು ಪಣಕ್ಕೆ ಒಡ್ಡಿದ್ದಾರೆ.

ಮತದಾರ ಯಾರ ಕೊರಳಿಗೆ ಗೆಲುವಿನ ಹಾರ ಹಾಕಿದ್ದಾನೆ, ಯಾರನ್ನು ಸೋಲಿನ ಸುಳಿಗೆ ತಳ್ಳಿದ್ದಾನೆ ಎಂಬ ಮಾಹಿತಿ ಇನ್ನೊಂದೆರೆಡು ಗಂಟೆಗಳಲ್ಲಿ ಲಭ್ಯವಾಗಲಿದೆ.

ಡಿಕೆಶಿಗೆ ಚಿಕ್ಕಆಘಾತ: ಆದರೆ ಫಲಿತಾಂಶಕ್ಕೂ ಮುನ್ನ ಕನಕಪುರ ಅಭ್ಯರ್ಥಿ ಡಿಕೆ ಶಿವಕುಮಾರ್ ಅವರಿಗೆ ಚಿಕ್ಕಮಟ್ಟದ ಆಘಾತವಾಗಿದೆ. ಡಿಕೆಶಿ ದಂಪತಿಯಿಬ್ಬರೂ ಅತ್ಯುತ್ಸಾಹದಿಂದ ಒಟ್ಟಿಗೇ ಮತ ಚಲಾಯಿಸಿದ್ದಕ್ಕೆ ಚುನಾವಣಾ ಆಯೋಗವು ಅವರಿಬ್ಬರ ಮತಗಳನ್ನು ಅಸಿಂಧುಗೊಳಿಸಿದೆ.

English summary
Karnataka Assembly Elections 2013 : Trends, Results, Party wise swing for 223 ( 224) assembly constituencies. Polling for the 14th Karnataka assembly was held on May 5. Today May 8 is Results Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X