ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಜಿಲ್ಲೆ ವಿಧಾನಸಭಾ ಕ್ಷೇತ್ರಗಳ ಪರಿಚಯ

|
Google Oneindia Kannada News

ದ್ವೈತ ಸಿದ್ಧಾಂತದ ಪ್ರವರ್ತಕ ಆಚಾರ್ಯ ಮಧ್ವರು ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪನೆಗೈದು ವಿಶ್ವಜನರ ಗಮನ ಸೆಳೆದ ಪುಣ್ಯಕ್ಷೇತ್ರ, ಹಾರ್ವರ್ಡ್ ಆಫ್ ದ ಈಸ್ಟ್ ಎಂಬ ಹೆಗ್ಗಳಿಕೆ ಪಡೆದು ಶಿಕ್ಷಣ ರಂಗದಲ್ಲಿ ಮುಂಚೂಣಿಯಲ್ಲಿರುವ 'ಶಿಕ್ಷಣಕಾಶಿ' ಮಣಿಪಾಲ ಉಡುಪಿ ಜಿಲ್ಲೆಯನ್ನು ವಿಶ್ವದ ಜನತೆ ತಲೆಯೆತ್ತಿ ನೋಡುವಂತೆ ಮಾಡಿವೆ.

ಅಷ್ಟಮಂಗಲ, ಉಡುಪಿ ಶ್ರೀಕೃಷ್ಣ ಮಠವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಬೇಕೆನ್ನುವ ಪರ, ವಿರೋಧ ಚರ್ಚೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಉಡುಪಿಯನ್ನು ಅಂದು ಮುಖ್ಯಮಂತ್ರಿಗಳಾಗಿದ್ದ ಜೆ ಎಚ್ ಪಟೇಲ್ ಅವರು ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು (ಆಗಸ್ಟ್ 1997) ಉಡುಪಿ, ಕುಂದಾಪುರ, ಕಾರ್ಕಳವನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕಿಸಿ ಜಿಲ್ಲೆಯಾಗಿ ಘೋಷಿಸಿದ್ದರು.

ಕನ್ನಡ ಆಡಳಿತ ಭಾಷೆಯಾದರೂ ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಪ್ರಕೃತಿ ಮೈಸಿರಿಯನ್ನು ತುಂಬಿಕೊಂಡಿರುವ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಟ್ಟಾಗಿ ತುಳುನಾಡು ಎಂದೂ ಕರೆಯತ್ತಾರೆ. ಉತ್ತರದ ತಾಲೂಕಾದ ಕುಂದಾಪುರದಾದ್ಯಂತ ಕನ್ನಡವನ್ನು ಮಾತ್ರ ಉಪಯೋಗಿಸುತ್ತಿರುವುದು ಈ ಜಿಲ್ಲೆಯ ವಿಶೇಷತೆಗಳಲ್ಲೊಂದು.

Udupi district assembly constituency profile

ಹಾಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಳೆದ ಬಜೆಟ್ ಅಧಿವೇಶನದಲ್ಲಿ ಬ್ರಹ್ಮಾವರ ಮತ್ತು ಬೈಂದೂರನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸಿದರು. ಹೆಬ್ರಿಯನ್ನೂ ತಾಲೂಕು ಕೇಂದ್ರವನ್ನಾಗಿಸಬೇಕೆಂಬ ಬೇಡಿಕೆಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಈ ಜಿಲ್ಲೆಯಲ್ಲಿ ಬ್ರಾಹ್ಮಣ, ಬಂಟ್ಸ್, ಬಿಲ್ಲವ, ಮತ್ತು ಕೊಂಕಣಿ ಜನಾಂಗದವರ ಪಾರುಪತ್ಯವೇ ಹೆಚ್ಚು. ಇನ್ನು ಯಕ್ಷಗಾನ, ಭೂತಕೋಲವಿಲ್ಲದ ಉಡುಪಿಯನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ.

ಎಸ್ಸೆಸ್ಸೆಲ್ಸಿ ಪರೀಕ್ಷೆಯೇ ಆಗಲಿ, ಪಿಯುಸಿ ಪರೀಕ್ಷೆಯೇ ಆಗಲಿ ಪ್ರತಿವರ್ಷ ಉಳಿದೆಲ್ಲ ಜಿಲ್ಲೆಗಳನ್ನು ಹಿಂದೂಡುವ ಉಡುಪಿ ಜಿಲ್ಲೆ ಮತ್ತೊಂದು ಚುನಾವಣೆಗೆ ಹುರಿಗೊಳ್ಳುತ್ತಿದೆ. ಜಾಣರ ಜಿಲ್ಲೆ ಎಂದು ಅನ್ನಿಸಿಕೊಂಡಿದ್ದರೂ ಕಡಲ ಕೊರೆತ ಮುಂತಾದ ಅನೇಕಾರು ಸಮಸ್ಯೆಗಳಿಗೆ ಇಲ್ಲಿಯವರೆಗೆ ಪರ್ಮನೆಂಟಾದ ಪರಿಹಾರವನ್ನು ಇನ್ನೂ ಪಡೆದುಕೊಳ್ಳಲಾಗಿಲ್ಲ.

ಜಿಲ್ಲೆಯ ಒಟ್ಟು ವಿಸ್ತೀರ್ಣ : 3880 square km
ಜನಸಂಖ್ಯೆ : 11.78 ಲಕ್ಷ (2011ರ ಜನಗಣತಿಯಂತೆ)
ಪ್ರಮುಖ ಭಾಷೆಗಳು : ಕನ್ನಡ, ತುಳು, ಕೊಂಕಣಿ

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು

ಉಡುಪಿ (ಹಾಲಿ ಶಾಸಕರು, ರಘುಪತಿ ಭಟ್, ಬಿಜೆಪಿ)
2008ರ ಚುನಾವಣೆಯಲ್ಲಿ ರಘುಪತಿ ಭಟ್ (ಪಡೆದ ಒಟ್ಟು ಮತಗಳು 58,920) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಪ್ರಮೋದ್ ಮಧ್ವರಾಜ್ (56,441) ಅವರನ್ನು 2479 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಬೈಂದೂರು (ಹಾಲಿ ಶಾಸಕರು, ಕೆ ಲಕ್ಷ್ಮೀನಾರಾಯಣ, ಬಿಜೆಪಿ)
2008ರ ಚುನಾವಣೆಯಲ್ಲಿ ಲಕ್ಷ್ಮೀನಾರಾಯಣ (ಪಡೆದ ಒಟ್ಟು ಮತಗಳು 62,190) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಗೋಪಾಲ ಪೂಜಾರಿ (54,226) ಅವರನ್ನು 7970 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಕುಂದಾಪುರ (ಹಾಲಿ ಶಾಸಕರು, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ, ಜುಲೈ 2012ರಂದು ರಾಜೀನಾಮೆ ನೀಡಿದ್ದಾರೆ)
2008ರ ಚುನಾವಣೆಯಲ್ಲಿ ಶ್ರೀನಿವಾಸ ಶೆಟ್ಟಿ (ಪಡೆದ ಒಟ್ಟು ಮತಗಳು 71,695) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಕೆ ಜಯಪ್ರಕಾಶ್ ಹೆಗ್ದೆ (46,612) ಅವರನ್ನು 25,083 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಕಾಪು (ಹಾಲಿ ಶಾಸಕರು, ಲಾಲಾಜಿ ಆರ್ ಮೆಂಡನ್, ಬಿಜೆಪಿ)
2008ರ ಚುನಾವಣೆಯಲ್ಲಿ ಲಾಲಾಜಿ ಮೆಂಡನ್ (ಪಡೆದ ಒಟ್ಟು ಮತಗಳು 45,961) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ವಸಂತ್ ಸಾಲ್ಯಾನ್ (44,994) ಅವರನ್ನು 967 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಕಾರ್ಕಳ (ಹಾಲಿ ಶಾಸಕರು, ಎಚ್ ಗೋಪಾಲ ಭಂಡಾರಿ, ಕಾಂಗ್ರೆಸ್)
2008ರ ಚುನಾವಣೆಯಲ್ಲಿ ಗೋಪಾಲ ಭಂಡಾರಿ (ಪಡೆದ ಒಟ್ಟು ಮತಗಳು 56,529) ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿ ಸುನಿಲ್ ಕುಮಾರ್ (54,991) ಅವರನ್ನು 1,538 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಉಡುಪಿ ಜಿಲ್ಲೆಯ ಪ್ರಮುಖ ಸಮಸ್ಯೆಗಳು

* ಪರಿಹಾರ ಸಿಗದ ಶಾಸ್ವತ ಕಡಲ್ಗೊರೆತಕ್ಕೆ ತಡೆಗೋಡೆ
* ಕುಡಿಯುವ ನೀರನ ಸಮಸ್ಯೆ
* ಜಿಲ್ಲಾ ಸರಕಾರಿ ಆಸ್ಪತ್ರೆ ಮೇಲ್ದರ್ಜೆ
* ನಗರ ವ್ಯಾಪ್ತಿಯ ರಸ್ತೆಗಳ ಕಾಂಕ್ರೀಟೀಕರಣ
* ಮೀನುಗಾರರಿಗೆ ವಿಮಾ ಸೌಲಭ್ಯ

ಉಡುಪಿ ಜಿಲ್ಲೆಯ ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ವಾಹನಗಳ ಪಾರುಪತ್ಯವೇ ಹೆಚ್ಚು. ಖಾಸಗಿ ವಾಹನ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಬೇಸತ್ತ ಉಭಯ ಜಿಲ್ಲೆಗಳ ನಾಗರೀಕರು ಮತ್ತು ಜನಪ್ರತಿನಿಧಿಗಳು ಸಾರಿಗೆ ವ್ಯವಸ್ಥೆಯನ್ನು ಸರಕಾರೀಕರಣ ಮಾಡಬೇಕೆಂದು ಒತ್ತಾಯಿಸಿದ್ದು ಹಾಗೆಯೇ ನೆನೆಗುದಿಗೆ ಬಿದ್ದಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election watch - Udupi : In this highly literate district (literacy 86%) fight for power is always between BJP and Congress. This coastal district, known for Srikrishna, delicious cuisines and sea erosion, consists of Udupi, Byndoor, Kapu, Kundapur, Karkala assembly constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X