• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಮೊಗ್ಗ ಜಿಲ್ಲೆ ವಿಧಾನಸಭಾ ಕ್ಷೇತ್ರಗಳ ಪರಿಚಯ

|
Google Oneindia Kannada News

ಪಶ್ಚಿಮ ಘಟ್ಟಗಳನ್ನು ತನ್ನ ಒಡಲಲ್ಲಿ ಹೊಂದಿ ಮಲೆನಾಡು ಎಂದು ಕರೆಸಿಕೊಳ್ಳುತ್ತಿದ್ದ ಶಿವಮೊಗ್ಗ ಜಿಲ್ಲೆ, ಈಗ ಕಾಡುಗಳ ನಾಶದಿಂದಾಗಿ ಬಯಲು ಸೀಮೆಯಾಗುತ್ತಿದೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶ, ಅಧಿಕ ಕಾಡು ಹೊಂದಿರುವ ಜಿಲ್ಲೆ ಎಂಬ ಖ್ಯಾತಿಗಳು ಇತಿಹಾಸ ಸೇರುತ್ತಿವೆ. ತುಂಗ, ಭದ್ರಾ, ಶರಾವತಿ, ವರದಾ ಮುಂತಾದ ಪ್ರಮುಖ ನದಿಗಳು, ಹಲವು ಉಪನದಿಗಳು ಹರಿಯುವ ಜಿಲ್ಲೆ ಇದು.

ಅಪಾರವಾದ ವನ್ಯ ಸಂಪತ್ತು ಮತ್ತು ಹಲವಾರು ನದಿಗಳಿಂದ ಜಿಲ್ಲೆ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿದೆ. ಜೋಗದಲ್ಲಿ ಧುಮ್ಮಿಕ್ಕುವ ಶರಾವತಿ, ಕೊಡಚಾದ್ರಿಯ ಗುಡ್ಡಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಸದಾ ಹಿಮಚ್ಚಾದಿತ ಆಗುಂಬೆ, ನಗರದ ಕೋಟೆ, ಭದ್ರಾ ಜಲಾಶಯ ಮುಂತಾದವುಗಳಿಂದಾಗಿ ಪ್ರವಾಸಿಗರಿಗೆ ಶಿವಮೊಗ್ಗ ದೊಡ್ಡ ಸಂಪತ್ತು.

ಭದ್ರವಾವತಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಕಬ್ಬಿಣ ಮತ್ತು ಉಕ್ಕಿನ ಕಾರ್ಖನೆಯಿಂದಾಗಿ ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆ ಹಿಂದಿನಿಂದಲೇ ಪ್ರಾರಂಭವಾಗಿದೆ. ಐಟಿ-ಬಿಟಿ ಮಂದಿಯ ಕಣ್ಣು ಶಿವಮೊಗ್ಗ ಜಿಲ್ಲೆಯ ಮೇಲೆ ಬಿದ್ದಿದ್ದು, ಜಿಲ್ಲೆಯಲ್ಲಿ ಕೆಲವು ಕಾಲ್ ಸೆಂಟರ್ ಗಳು ಹಲೋ ಎನ್ನುತ್ತಿವೆ. ಜ್ಞಾನದ ಹಸಿವು ನೀಗಿಸಲು ಕುವೆಂಪು ವಿಶ್ವವಿದ್ಯಾಲಯವಿದೆ. ವಾಣಿಜ್ಯ ಕ್ಷೇತ್ರವೂ ಆದ ಜಿಲ್ಲೆ ಅಡಿಕೆ ವ್ಯಾಪಾರಸ್ಥರಿಗೆ ಪ್ರಮುಖ ಮಾರುಕಟ್ಟೆ.

ಕಲೆ, ಸಾಹಿತ್ಯ, ಸಂಗೀತ, ಸಾಮಾಜಿಕ ಚಳವಳಿಗಳಲ್ಲಿ ಜಿಲ್ಲೆಯ ಹೆಸರು ಚಿರಪರಿಚಿತ ಸಂಗೀತಕ್ಕೆ ಶಿವಮೊಗ್ಗ ಸುಬ್ಭಣ್ಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಕುವೆಂಪು, ಯು.ಆರ್.ಅನಂತಮೂರ್ತಿಯವರಿಗೆ ಇದೇ ತವರು. ರೈತ ಮುಖಂಡ ಕಡಿದಾಳು ಶಾಮಣ್ಣ, ನೀನಾಸಂನ ಕೆ.ವಿ.ಸುಬ್ಭಣ್ಣ, ಗೋ ಸಂರಕ್ಷಣೆ ಚಳವಳಿ ಮಾಡುತ್ತಿರುವ ರಾಮಚಂದ್ರಪುರ ಮಠವನ್ನು ಮರೆಯುವಂತಿಲ್ಲ.

ರಾಜಕೀಯವಾಗಿಯೂ ಪ್ರಬಲ ಇತಿಹಾಸ ಹೊಂದಿರುವ ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೆ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಖ್ಯಾತಿ ಪಡೆದಿದೆ. ರಾಜಕೀಯವಾಗಿ ಎಸ್.ಬಂಗಾರಪ್ಪ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರನ್ನು ಹೆಸರಿಸಬಹುದು.

ಜಿಲ್ಲೆಯ ಸಮಸ್ಯೆಗಳು : ಸಾರಿಗೆ ಸಂಪರ್ಕವೇ ಜಿಲ್ಲೆಯ ಬಹುಮುಖ್ಯ ಸಮಸ್ಯೆ. ಯಾವ ಹಳ್ಳಿಗಳಿಗೂ ಸರಿಯಾದ ರಸ್ತೆಗಳಿಲ್ಲ. ಸಾಗರ ತಾಲೂಕಿನಲ್ಲಿ ಶರಾವತಿ ನದಿಯ ಹಿನ್ನೀರಿನ ಜನರು ಕತ್ತಲೆಯಲ್ಲಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ ನಕ್ಸಲ್ ಸಮಸ್ಯೆ ಇದೆ. ಸಾಗರ, ತೀರ್ಥಹಳ್ಳಿ, ಭದ್ರಾವತಿ ತಾಲೂಕಿನ ಜನರು ಇಂಡೀಕರಣ ಮತ್ತು ಅಭಯಾರಣ್ಯ ಯೋಜನೆಯಿಂದಾಗಿ ಮನೆ ಮತ್ತು ಜಮೀನನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಪ್ರಮುಖ ಬೆಳೆಗಳು : ಭತ್ತ, ಅಡಿಕೆ, ಮೆಕ್ಕೆಜೋಳ
ಪ್ರಮುಖ ಜಾತಿಗಳು : ಲಿಂಗಾಯತ, ಈಡಿಗ, ಬ್ರಾಹ್ಮಣ, ಮುಸ್ಲಿಂ, ಪರಿಶಿಷ್ಟ ಜಾತಿ-ಪಂಗಡ
ಒಟ್ಟು ಜನಸಂಖ್ಯೆ : 1,755,512
ಪ್ರಮುಖ ಭಾಷೆಗಳು : ಕನ್ನಡ

ರಾಜಕೀಯ ಪ್ರಾಬಲ್ಯ

ಶಿಕಾರಿಪುರ : ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ 1,26,077ಮತಗಳನ್ನು ಪಡೆದು ಸಮಾಜವಾದಿ ಪಕ್ಷದ ಎಸ್.ಬಂಗಾರಪ್ಪ ಅವರಿಗೆ ಸೋಲುಣಿಸಿ ಮುಖ್ಯಮಂತ್ರಿಗಾದಿಗೆ ಏರಿದ್ದರು.

ಶಿವಮೊಗ್ಗ ನಗರ : ಕೆ.ಎಸ್.ಈಶ್ವರಪ್ಪ ಅವರ ತವರು ಕ್ಷೇತ್ರ.1,10,086 ಮತ ಪಡೆದು ಜೆಡಿಎಸ್ ನ ಎಂ.ಶ್ರೀಕಾಂತ್ ವಿರುದ್ದ ಗೆಲುವು ಸಾಧಿಸಿದ್ದರು.

ಶಿವಮೊಗ್ಗ ಗ್ರಾಮಾಂತರ : 2008ರಲ್ಲಿ ನೂತನವಾಗಿ ರೂಪಗೊಂಡ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ.ಜಿ.ಕುಮಾರಸ್ವಾಮಿ 1,25,567 ಮತ ಪಡೆದು ಕಾಂಗ್ರೆಸ್ ನ ಕರಿಯಣ್ಣ ಅವರನ್ನು ಸೋಲಿಸಿದ್ದರು.

ತೀರ್ಥಹಳ್ಳಿ : ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಶಾಸಕರು, 1,24,277 ಮತಗಳಿಸಿ ಆರಗ ಜ್ಞಾನೇಂದ್ರ ಅವರಿಗೆ ಸೋಲುಣಿಸಿದ್ದರು.

ಸಾಗರ : ಬಿಜೆಪಿಯ ಬೇಳೂರು ಗೋಪಾಲಕೃಷ್ಣ 1,23,794 ಮತಗಳನ್ನು ಪಡೆದು, ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಿದ್ದರು.

ಸೊರಬ :ಹರತಾಳು ಹಾಲಪ್ಪ 1,23,508ಮತ ಪಡೆದು, ಕುಮಾರ್ ಬಂಗಾರಪ್ಪ ವಿರುದ್ಧ ಗೆದ್ದಿದ್ದಾರೆ.

ಭದ್ರಾವತಿ : ಕಾಂಗ್ರೆಸ್ ನ ಬಿ.ಕೆ.ಸಂಗಮೇಶ್ವರ ಶಾಸಕರು, 1,25,300ಮತ ಪಡೆದು ಎಂ.ಜೆ.ಅಪ್ಪಾಜಿ ಗೌಡರನ್ನು ಸೋಲಿಸಿದ್ದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election 2013. Shimoga districts Constituency profile. Shimoga district has Seven constituencies. Shimoga Rural, Shimoga, Thirthahalli, Bhadravathi, Shikaripura,Sagar and Sorab constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X