ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣರಾಜ : ರಾಮದಾಸ್‌ಗೆ ಟಕ್ಕರ್ ಕೊಡೋರು ಯಾರು?

By Prasad
|
Google Oneindia Kannada News

Krishnaraja (Mysore) constituency profile
ಹಾಲಿ ಶಾಸಕ - ಎಸ್. ಎ. ರಾಮದಾಸ್

ರಾಜಕೀಯ ಮಹತ್ವ : ಮೈಸೂರು ಅರಮನೆ ಇರುವ ಕೃಷ್ಣರಾಜ ಕ್ಷೇತ್ರವನ್ನು ಸಚಿವ ರಾಮದಾಸ್ ಮೂರು ಬಾರಿ ಪ್ರತಿನಿಧಿಸಿದ್ದಾರೆ. ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಇವರು ಒಂದು ಬಾರಿ ಸೋತಿದ್ದಾರೆ.

ಪ್ರಮುಖ ಸ್ಪರ್ಧಿಗಳು : ಸಚಿವ ರಾಮದಾಸ್ ಬಿಜೆಪಿ ಅಭ್ಯರ್ಥಿ. ಜೆಡಿಎಸ್‍ನಿಂದ ಕೆ. ವಾಸು, ಕಾಂಗ್ರೆಸ್‍ನಿಂದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹಾಗೂ ರಘು ಆಚಾರ್ ಆಕಾಂಕ್ಷಿಗಳು. ಕೆಜೆಪಿಯಿಂದ ಹೆಚ್.ವಿ ರಾಜೀವ್ ಸ್ಪರ್ಧಿ.

ಗೆಲುವಿನ ಲೆಕ್ಕಾಚಾರ : ಬ್ರಾಹ್ಮಣರು ತಮ್ಮ ಬೆನ್ನಿಗೆ ಸಂಪೂರ್ಣವಾಗಿ ನಿಲ್ಲೋ ವಿಶ್ವಾಸ ಹಾಗೂ ಸಚಿವರಾಗಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳು ತಮ್ಮ ಕೈ ಹಿಡಿಯಬಹುದು ಎಂಬ ನಿರೀಕ್ಷೆ ರಾಮದಾಸ್‍ರಲ್ಲಿದೆ. ಆಡಳಿತ ವಿರೋಧಿ ಅಲೆಯ ಲಾಭ ಹಾಗೂ ಬ್ರಾಹ್ಮಣ ಸಮುದಾಯದ ಎಚ್.ವಿ. ರಾಜೀವ್ ಕೆಜೆಪಿ ಅಭ್ಯರ್ಥಿಯಾಗೋ ಮೂಲಕ ಬಹುಸಂಖ್ಯಾತ ಬ್ರಾಹ್ಮಣ ಮತದಾರರನ್ನು ವಿಭಜಿಸುವ ಹಿನ್ನೆಲೆಯಲ್ಲಿ ತಮಗೆ ಗೆಲುವ ಸಿಗಬಹುದು ಎಂಬುದು ಕಾಂಗ್ರೆಸ್ ಲೆಕ್ಕ. ಇನ್ನೂ ಕೆಜೆಪಿ ಅಭ್ಯರ್ಥಿ ಕೂಡ ಲಿಂಗಾಯತರ ಮತಗಳು ಮತ್ತು ಬ್ರಾಹ್ಮಣರ ಮತಗಳು ಹೆಚ್ಚು ಸಿಗುವ ಲೆಕ್ಕ ಮಾಡಿದ್ದಾರೆ. ಅಲ್ಲದೆ, ಜೆಡಿಎಸ್ ಅಭ್ಯರ್ಥಿ ಪರಿಶಿಷ್ಟ ಜಾತಿಗೆ ಸೇರಿದವರಾಗಿರೋ ಕಾರಣ ಕಾಂಗ್ರೆಸ್ ಓಟ್ ಬ್ಯಾಂಕ್‍ಗೆ ಅವರು ಕೈ ಹಾಕೋ ಹಿನ್ನೆಲೆಯಲ್ಲಿ ತಮಗೆ ಗೆಲುವ ಅನ್ನೋದು ಕೆಜೆಪಿ ಲೆಕ್ಕ.

ಸ್ಥಳೀಯ ಸಂಸ್ಥೆ ಚುನಾವಣೆ : ಒಟ್ಟು ವಾರ್ಡ್ ಸಂಖ್ಯೆ - 22. ಕಾಂಗ್ರೆಸ್‍ಗೆ - 37,380 ಮತ, ಬಿಜೆಪಿ - 36,982 ಮತಗಳು, ಜೆಡಿಎಸ್ - 19,505 ಮತಗಳು, ಕೆಜೆಪಿ - 14, 144 ಮತಗಳು. 2007ರಲ್ಲಿ 15 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಆದ್ರೆ ಈ ಬಾರಿ ಕೆವಲ 7 ಸ್ಥಾನಗಳಿಸಿದೆ.

ಹಾಲಿ ಶಾಸಕ - ಎಸ್.ಎ ರಾಮದಾಸ್(ಬಿಜೆಪಿ)
ಸೋತ ಅಭ್ಯರ್ಥಿ - ಎಂ.ಕೆ. ಸೋಮಶೇಖರ್(ಕಾಂಗ್ರೆಸ್)
ಗೆಲುವಿನ ಅಂತರ 20,000 ಮತಗಳು

ಜಾತಿವಾರು ಮತದಾರರು : ಕುರುಬರು - 25 ಸಾವಿರ, ಬ್ರಾಹ್ಮಣರು - 60 ಸಾವಿರ, ಲಿಂಗಾಯಿತರು - 40 ಸಾವಿರ, ಒಕ್ಕಲಿಗರು - 22 ಸಾವಿರ, ಎಸ್ಸಿ - 38 ಸಾವಿರ, ಎಸ್‍ಟಿ -18 ಸಾವಿರ, ಕ್ರಿಶ್ಚಿಯನ್ನರು - 6 ಸಾವಿರ, ಮುಸ್ಲಿಂ -13 ಸಾವಿರ, ಇತರೆ - 18 ಸಾವಿರ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election watch - Krishnaraja, Mysore : Three time winner Dr. S.A. Ramadas of BJP party is the present MLA of the constituency. In previous election he had defeated M.K. Somashekhar of Congress. Ramdas is banking on brahmin votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X