ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪರಿಚಯ

|
Google Oneindia Kannada News

ಮುದ್ರಣಾಲಯಗಳ ನಗರ ಎಂದು ಖ್ಯಾತಿಗಳಿಸಿದ್ದ ಗದಗ ಜಿಲ್ಲೆ ತನ್ನ ಹಣೆ ಪಟ್ಟಿ ಕಳಚಿಟ್ಟಿದೆ. ಗದಗದ ಯಾವ ಭಾಗದಲ್ಲಿ ನಿಂತು ಕಲ್ಲು ಎಸೆದರೂ ಅದು ಪ್ರಿಟಿಂಗ್ ಪ್ರೆಸ್ ಗಳ ಮೇಲೆ ಹೋಗಿ ಬೀಳುತ್ತದೆ ಎಂಬ ಮಟ್ಟಿಗೆ ಗದಗದಲ್ಲಿ ಮುದ್ರಣಾಲಗಳಿದ್ದವು.

ಶಬ್ದಕೋಶದಿಂದು ಹಿಡಿದು ಯಾವ ಪುಸ್ತಕ ತೆರದು ನೋಡಿದರೂ ಅದರ ಮುದ್ರಣ ಗದಗ ಜಿಲ್ಲೆಯಲ್ಲಿ ಆಗಿರುತ್ತಿತ್ತು. ಇಂತಹ ಮುದ್ರಣಾಲಯಗಳ ಜಿಲ್ಲೆ ನಿಧಾನವಾಗಿ ಕೈಗಾರಿಕೆಗಳತ್ತ ಆಕರ್ಷಿತವಾಗುತ್ತಿದೆ. ಬೃಹತ್ ಕೈಗಾರಿಗೆಕಗಳು ಜಿಲ್ಲೆಯಲ್ಲಿ ಸ್ಥಾಪನೆ ಆಗದಿದ್ದರೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಆರಂಭಗೊಳ್ಳುತ್ತಿವೆ.

ಗದಗ ಮತ್ತು ಬೆಟಗೇರಿ ಜಿಲ್ಲೆಯ ಪ್ರಮುಖ ನಗರಗಳು. ಧಾರವಾಡ ಜಿಲ್ಲೆಯ ಭಾಗವಾಗಿದ್ದ ಗದಗವನ್ನು 1997ರಲ್ಲಿ ಜಿಲ್ಲೆಯಾಗಿ ಘೋಷಿಸಲಾಯಿತು. ನೇಕಾರರ ಜಿಲ್ಲೆ ಎಂದು ಗದಗವನ್ನು ಕರೆಯಬಹುದಾಗಿದೆ. ಕೈಮಗ್ಗ ಉದ್ಯಮ ಜಿಲ್ಲೆಯಲ್ಲಿ ಜೀವಂತವಾಗಿದ್ದು, ಆಕರ್ಷಕವಾದ ಸೀರೆಗಳನ್ನು ಇಲ್ಲಿ ನೋಡಬಹುದಾಗಿದೆ.

Gadag

ಒಳನಾಡು ಬಯಲು ಪ್ರದೇಶವಾದ ಜಿಲ್ಲೆಯ ಉತ್ತರ ಭಾಗದಲ್ಲಿ ಮಲಪ್ರಭಾ, ದಕ್ಷಿಣ ಗಡಿಯಲ್ಲಿ ತುಂಗಭದ್ರಾ ನದಿಗಳು ಹರಿಯುತ್ತವೆ. ಜಿಲ್ಲೆಯು ಫಲವತ್ತಾದ ಎರೆ ಮಣ್ಣಿನಿಂದ ಕೂಡಿದ್ದು, ಕೃಷಿ ಯೋಗ್ಯವಾಗಿದೆ. ಜಿಲ್ಲೆಯಲ್ಲಿ ಮುಂಡರಗಿ, ಗದಗ, ಶಿರಹಟ್ಟಿಯಲ್ಲಿ ಹಬ್ಬಿರುವ ಕಪ್ಪದಗುಡ್ಡದಲ್ಲಿ 21,000ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ ಎಂಬ ವರದಿಗಳಿವೆ.

ಬೇಸಿಗೆಯಲ್ಲಿ ಸುಡುವ ಬಿಸಿಲಿರುವ ಗದಗ ಜಿಲ್ಲೆಯಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಬೀಸುವುದರಿಂದ ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಇದು ಉತ್ತಮ ಜಾಗವೆಂದು ಕೆಆರ್ಇಡಿಎಲ್ ಗುರುತಿಸಿದೆ. ಜಿಲ್ಲೆಗೆ ಸಮರ್ಪಕ ರಸ್ತೆ ಸೌಲಭ್ಯ ಒದಗಿಸಲು ಸಾಧ್ಯವಾಗದ ಸರ್ಕಾರ ಇಲ್ಲಿ ವಿದ್ಯುತ್ ಶಕ್ತಿ ಯೋಜನೆ ಪ್ರಾರಂಭಿಸುವ ತನಕ ಆಲೋಚನೆ ನಡೆಸಿಲ್ಲ.

ಕನ್ನಡ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಕವಿ ಕುಮಾರವ್ಯಾಸ ಮತ್ತು ಸಂಗೀತ ಕ್ಷೇತ್ರದ ಸಾಧಕ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ತವರೂರು ಗದಗ ಜಿಲ್ಲೆ. ಒಂದು ತಿಂಗಳ ಕಾಲ ನಡೆಯುವ ಶ್ರೀ ತೊಂಟದಾರ್ಯ ಮಠದ ಜಾತ್ರೆ ಸಾಕಷ್ಟು ಖ್ಯಾತಿ ಗಳಿಸಿದೆ. ಸಹಕಾರ ಚಳವಳಿಗೆ ಗದಗ ಹೆಸರುವಾಸಿಯಾಗಿದೆ. ಏಷ್ಯಾ ಖಂಡದಲ್ಲೇ ಮೊದಲು ಸಹಕಾರಿ ಚಳವಳಿ ಪ್ರಾರಂಭವಾಗಿರುವುದು ಇದೇ ಜಿಲ್ಲೆಯಲ್ಲಿ ಎಂಬುದು ಗಮನಾರ್ಹ.

ಜಿಲ್ಲೆಯ ಸಮಮಸ್ಯೆಗಳು : ಜಿಲ್ಲೆಯಲ್ಲಿ ಎರಡು ನದಿಗಳು ಹರಿದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಸಾರಿಗೆ ಸೌಕರ್ಯಗಳು ಜಿಲ್ಲೆಯ ಮುಖ್ಯ ಸಮಸ್ಯೆ. ಜಿಲ್ಲೆಯಲ್ಲಿ ಸರಿಯಾದ ರಸ್ತೆ ಸೌಕರ್ಯಗಳಿಲ್ಲ. ವಂಶ ಪಾರಂಪಾರ್ಯವಾಗಿ ನೇಕಾರ ವೃತ್ತಿ ಮಾಡುತ್ತಿರುವ ಇಲ್ಲಿನ ಕುಟುಂಬಗಳಿಗೆ ಸರ್ಕಾರ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ.

ಒಟ್ಟು ಭೌಗೋಳಿಕ ವಿಸ್ತೀರ್ಣ : 4657 ಚ.ಕಿ.ಮೀಗಳು
ಜನಸಂಖ್ಯೆ : 10,65,235
ಪ್ರಮುಖ ಜಾತಿಗಳು : ಲಿಂಗಾಯತ, ಕರುಬ, ಪರಿಶಿಷ್ಟ ಜಾತಿ-ಪಂಗಡ
ಪ್ರಮುಖ ಬೆಳೆಗಳು : ಗೋಧಿ, ಜೋಳ, ಶೇಂಗಾ, ಹತ್ತಿ, ಈರುಳ್ಳಿ
ಪ್ರಮುಖ ಭಾಷೆ : ಕನ್ನಡ

ರಾಜಕೀಯ ಬಲಾಬಲ

ಶಿರಹಟ್ಟಿ - ತಾಲೂಕಿಗೆ ಬಿಜೆಪಿಯ ರಾಮಣ್ಣ ಎಸ್. ಲಾಮಾಣಿ ಶಾಸಕರು. 1,3,779 ಮತ ಪಡೆದು ಕಾಂಗ್ರೆಸ್ ನ ಎಚ್.ಆರ್.ನಾಯಕ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಗದಗ - ತಾಲೂಕಿಗೆ ಬಿಜೆಪಿಯ ಬಿದರೂರು ಶ್ರೀ ಶೈಲಪ್ಪ ವಿರೂಪಾಕ್ಷಪ್ಪ ಶಾಸಕರು. 1,07,552 ಮತಗಳನ್ನು ಪಡೆದು ಕಾಂಗ್ರೆಸ್ ನ ಎಚ್.ಕೆ.ಪಾಟೀಲ್ ವಿರುದ್ಧ ಗೆದಿದ್ದಾರೆ.

ರೋಣ - ಬಿಜೆಪಿಯ ಕಳಕಪ್ಪ ಗುರುಶಾಂತಪ್ಪ ಬಂಡಿ ಶಾಸಕರು. 1,19,377 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ವಿರುದ್ಧ ಜಯಗಳಿಸಿದ್ದಾರೆ.

ನರಗುಂದ - ಬಿಜೆಪಿಯ ಸಿ.ಸಿ.ಪಾಟೀಲ್ ಶಾಸಕರು. 1,07,932 ಮತಗಳನ್ನು ಪಡೆದು. ಬಿ.ಆರ್.ಯಾವಗಲ್ ವಿರುದ್ಧ ಜಯಗಳಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election 2013. Gadag districts Constituency profile. Gadag district has Four constituencies. Gadag, Shirahatti, Ron, Naragund constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X