ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜ : ಒಕ್ಕಲಿಗರ ಮತಗಳೇ ನಿರ್ಣಾಯಕ

By Shami
|
Google Oneindia Kannada News

Chamaraja (Mysore) constituency profile
ರಾಜಕೀಯ ಮಹತ್ವ : ಬಿಜೆಪಿ ಶಾಸಕರಾಗಿದ್ದರೂ ಬಿಜೆಪಿ ಹಾಗೂ ಅದರ ನಾಯಕರ ವಿರುದ್ಧವೇ ಟೀಕಿಸುವ ಮೂಲಕ ರಾಜ್ಯಾದ್ಯಂತ ಪ್ರಸಿದ್ಧರಾಗಿರುವ ಶಂಕರಲಿಂಗೇಗೌಡರ ಕ್ಷೇತ್ರವಿದು. ಕಳೆದ 4 ಬಾರಿಯಿಂದ ಸತತ ಗೆಲುವು ಸಾಧಿಸಿದ್ದಾರೆ. 1978ರಲ್ಲಿ ಚಾಮರಾಜ ಕ್ಷೇತ್ರ ಅಸ್ತಿತ್ವಕ್ಕೆ ಬಂತು.

ಪ್ರಮುಖ ಸ್ಪರ್ಧಿಗಳು : ಶಂಕರಲಿಂಗೇಗೌಡ ಬಿಜೆಪಿ ತೊರೆದು ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ. ಅವರ ಪುತ್ರ ನಂದೀಶ್ ಪ್ರೀತಂ, ಮುಡಾ ಅಧ್ಯಕ್ಷ ನಾಗೇಂದ್ರ ಬಿಜೆಪಿ ಟಿಕೆಟ್ ಕೇಳಿದ್ದಾರೆ. ಕಾಂಗ್ರೆಸ್‍ನಿಂದ ಮಾಜಿ ಮೇಯರ್ ವಾಸು ಮತ್ತು ಡಿ. ಮಾದೇಗೌಡ ಆಕಾಂಕ್ಷಿಗಳು.

ಗೆಲುವಿನ ಲೆಕ್ಕಾಚಾರ : ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರ ಪ್ರಾಬಲ್ಯ ಇದೆ. ಬಿಜೆಪಿಯಿಂದ ನಂದೀಶ್ ಪ್ರೀತಂ (ಶಂಕರಲಿಂಗೇಗೌಡರ ಮಗ) ಅವರಿಗೆ ಟಿಕೆಟ್ ಸಿಕ್ಕರೆ ಅಪ್ಪ - ಮಗನ ನಡುವೆ ಸ್ಪರ್ಧೆ ಏರ್ಪಡಲಿದೆ. ಶಂಕರಲಿಂಗೇಗೌಡ ಜೆಡಿಎಸ್ ಸೇರಿರುವುದರಿಂದ ಒಕ್ಕಲಿಗರ ಮತ ಜೆಡಿಎಸ್ ಕಡೆಗೆ ಒಗ್ಗೂಡಬಹುದೆಂಬ ನಿರೀಕ್ಷೆ ಗೌಡರದು. ಎರಡು ಬಾರಿ ಸೋತ ಅನುಕಂಪ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಎದ್ದಿರುವ ಅಲೆ ತಮಗೆ ಅನುಕೂಲ ಮಾಡಲಿದೆ ಅನ್ನೋದು ಕಾಂಗ್ರೆಸ್ ಲೆಕ್ಕ. ಇನ್ನೂ ನಾಲ್ಕು ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರೋ ಕಾರಣ ಈ ಬಾರಿಯೂ ಕ್ಷೇತ್ರ ಬಿಜೆಪಿಯ ವಶಕ್ಕೆ ಬರುತ್ತೆ ಅನ್ನೋದು ಬಿಜೆಪಿ ಲೆಕ್ಕ.

ಸ್ಥಳೀಯ ಸಂಸ್ಥೆ ಚುನಾವಣೆ : ಒಟ್ಟು ವಾರ್ಡ್ ಸಂಖ್ಯೆ - 22. ಕಾಂಗ್ರೆಸ್‍ಗೆ - 34,806 ಮತ, ಬಿಜೆಪಿ - 18,532 ಮತಗಳು, ಜೆಡಿಎಸ್ - 36,461 ಮತಗಳು, ಕೆಜೆಪಿ - 2,289 ಮತಗಳು. ಜೆಡಿಎಸ್ ಈ ಬಾರಿ 10, ಕಾಂಗ್ರೆಸ್ 8, ಬಿಜೆಪಿ 1, ಪಕ್ಷೇತರರು 3 ಸ್ಥಾನ ಪಡೆದಿದೆ.

ಹಾಲಿ ಶಾಸಕ - ಎಚ್.ಎಸ್. ಶಂಕರಲಿಂಗೇಗೌಡ (ಬಿಜೆಪಿ)

ಸೋತ ಅಭ್ಯರ್ಥಿ - ಎಚ್. ವಾಸು (ಕಾಂಗ್ರೆಸ್)

ಗೆಲುವಿನ ಅಂತರ 10,000 ಮತಗಳು

ಜಾತಿವಾರು ಮತದಾರರು : ಒಕ್ಕಲಿಗರು - 92 ಸಾವಿರ, ಕುರುಬರು - 13 ಸಾವಿರ, ಲಿಂಗಾಯಿತರು - 8 ಸಾವಿರ, ಮುಸ್ಲಿಂ - 30 ಸಾವಿರ, ಎಸ್ಸಿ ಮತ್ತು ಎಸ್‍ಟಿ - 22 ಸಾವಿರ, ಕುಂಬಾರ ಮತ್ತು ಕುಂಚಿಟಿಗರು - 4 ಸಾವಿರ, ಇತರೆ - 12,555.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election watch - Chamaraja, Mysore : Rebel star Shankarlinge Gowda is the present MLA of the constituency, where vokkaliga community play the major role in the election. Gowda contesting from JD(S) ticket and his son Nadeesh Pritam seeking BJP ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X