ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಆರ್ ಪುರ- ರಾಜಧಾನಿಯ ಪೂರ್ವ ಬಾಗಿಲು ಪರಿಚಯ

By Srinath
|
Google Oneindia Kannada News

Nadishreddy
ವಿಧಾನಸಭಾ ಕ್ಷೇತ್ರ ಸಂಖ್ಯೆ 177:
ಹಾಲಿ ಶಾಸಕ- ಎನ್ಎಸ್ ನಂದೀಶ್ ರೆಡ್ಡಿ (42 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಎ ಕೃಷ್ಣಪ್ಪ- ಕಾಂಗ್ರೆಸ್

* ಸಾಧನೆಗಳು: ವಿವಿಧ ಯೋಜನೆಗಳಡಿ ಸಂಚಾರ ಸಮಸ್ಯೆ ನೀಗಲು ಮೇಲ್ಸೇತುವೆ ಮುಂತಾದವು ಕಾರ್ಯರೂಪಕ್ಕೆ ಬಂದಿದೆ. ಇದು ಹಾಲಿ ಶಾಸಕರ ತಲೆಬಿಸಿಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆಯಾದರೂ ಕೆಆರ್ ಪುರ ದಾಟುವುದೆಂದರೆ ಜನರಿಗೆ ಹಿಂಸೆಯಾಗಿದೆ.

* ಸಮಸ್ಯೆಗಳು: ಬೆಂಗಳೂರು ದಕ್ಷಿಣ ಕ್ಷೇತ್ರದ ನಂತರ ಅತ್ಯಧಿಕ ಮತದಾರರನ್ನು ಹೊಂದಿರುವ ಕ್ಷೇತ್ರ ಇದಾಗಿದೆ. ಬಹುಶಃ ಮುಂದಿನ ಬಾರಿ ಕ್ಷೇತ್ರ ಪುನರ್ವಿಂಗಡಣೆಯಾದರೆ ಮತ್ತೊಂದು ಕ್ಷೇತ್ರ ಇಲ್ಲಿ ಸೃಷ್ಟಿಯಾಗಬಹುದು. ಮತದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಸಮಸ್ಯೆಗಳೂ ಹಾಗಿಯೇ ಇವೆ.

ಹೊಸಕೋಟೆ ಮಾರ್ಗವಾಗಿ ಹೆದ್ದಾರಿ ಇರುವುದರಿಂದ ಸಂಚಾರ ಸಮಸ್ಯೆ ಇದೆ. ಪೊಲೀಸ್ ವ್ಯವಸ್ಥೆ ಸುಧಾರಿಸಬೇಕಾಗಿದೆ. ಇನ್ನು ಕುಡಿಯುವ ನೀರು ಸಮಸ್ಯೆ ಹಾಗೆಯೇ ಇದೆ. ರೇಶನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಲು ಜನ ಪರದಾಡುತ್ತಿದ್ದಾರೆ. ಆದರೆ ಶಾಸಕರು ಇದರತ್ತ ತಲೆ ಹಾಕಿಲ್ಲ.

* ವಾರ್ಡ್: ಹೊರಮಾವು, ರಾಮಮೂರ್ತಿ ನಗರ, ವಿಜ್ಞಾನ ಪುರ, ಕೆಆರ್ ಪುರಂ, ಬಸವನ ಪುರ, ದೇವಸಂದ್ರ, ಎ ನಾರಾಯಣ ಪುರ, ವಿಜ್ಞಾನನಗರ, ಎಚ್ಎಎಲ್ ಏರ್ ಪೊರ್ಟ್
* ಮತದಾರರ ಸಂಖ್ಯೆ: 3,08,339. ಕಳೆದ ಬಾರಿ ವೋಟ್ ಮಾಡಿದವರು ಶೇ. 45ರಷ್ಟು ಮಂದಿ. ಅದರಲ್ಲಿ ಎನ್ಎಸ್ ನಂದೀಶ್ ರೆಡ್ಡಿ ಮತ ಗಳಿಕೆ ಪ್ರಮಾಣ ಶೇ. 49.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election watch- KR Pura,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X