ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಪರಿಚಯ

By Srinath
|
Google Oneindia Kannada News

Priya Krishna
* ವಿಧಾನಸಭಾ ಕ್ಷೇತ್ರ ಸಂಖ್ಯೆ 166:ಹಾಲಿ ಶಾಸಕ- ಪ್ರಿಯಾ ಕೃಷ್ಣ (29 ವರ್ಷ)- ಕಾಂಗ್ರೆಸ್.

* ಸಾಧನೆಗಳು: ಹಾಲಿ ವಿಧಾನಸಭೆಯಲ್ಲಿ ಅತಿ ಕಿರಿಯ ಶಾಸಕ (ಜನನ ಏಪ್ರಿಲ್ 27, 1984) ಎಂಬ ಮನ್ನಣೆ. ಕಾಂಗ್ರೆಸ್ಸಿನಿಂದ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸೋಮಣ್ಣ, ಬಿಜೆಪಿ ಸೇರ್ಪಡೆಯಾಗಿ ಸಚಿವರಾದರು. ಉಪಚುನಾವಣೆಯನ್ನು ಪ್ರಿಯಾಕೃಷ್ಣ ಗೆದ್ದುಕೊಂಡರು. ಸಮುದಾಯ ಭವನ, ಅಂಗನವಾಡಿ ಕಟ್ಟಡಗಳ ಜತೆಗೆ ಅಗ್ರಹಾರ ದಾಸರಹಳ್ಳಿ ಶಾಲೆಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿದ್ದಾರೆ.

ಕುಡಿಯುವ ನೀರು ಪೂರೈಕೆ ಸುಧಾರಣೆ. 767 ಕೋಟಿ ರೂ. ನಷ್ಟು ಘೋಷಿತ ಆಸ್ತಿಯ ಶ್ರೀಮಂತ ಕುಳ. ಹಾಲಿ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಶಾಸಕ. ಆರಂಭದಲ್ಲಿ ಸೋಮಣ್ಣ ಹಿಡಿತದಲ್ಲಿದ್ದ ಕ್ಷೇತ್ರ. ಅವರಿಂದಲೂ ಒಂದಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದವು. ಹಾಲಿ ಶಾಸಕ ಜನರಿಗೆ ಪ್ರಿಯ ಎನ್ನುವುದಕ್ಕಿಂತ ತಮ್ಮ ಪಟಾಲಂಗೆ ಬೇಕಾದವರು. ಚುನಾವಣೆಯಲ್ಲಿ ಇವರದೇ ಕಾರುಬಾರು.

* ಸಮಸ್ಯೆಗಳು: ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಭದ್ರತೆ, ಉದ್ಯೋಗ, ಕಾನೂನು ವ್ಯವಸ್ಥೆಯಲ್ಲಿ ಗಮನಾರ್ಹ ಸಾಧನೆ ಇಲ್ಲವಾಗಿದೆ.

* ವಾರ್ಡ್: ಕಾವೇರಿಪುರ, ಗೋವಿಂದರಾಜ ನಗರ, ಅಗ್ರಹಾರ ದಾಸರಹಳ್ಳಿ, ಡಾ. ರಾಜ್ ಕುಮಾರ್ ವಾರ್ಡ್, ಮಾರೇನಹಳ್ಳಿ, ಮಾರುತಿ ಮಂದಿರ, ಮೂಡಲಪಾಳ್ಯ, ನಾಗರಭಾವಿ, ನಾಯಂಡಹಳ್ಳಿ

* ಮತದಾರರ ಸಂಖ್ಯೆ: 2,46,476. ಕಳೆದ ಬಾರಿ ವೋಟ್ ಮಾಡಿದವರು ಶೇ. 43ರಷ್ಟು ಮಂದಿ. ಅದರಲ್ಲಿ (ಸೋಮಣ್ಣ) ಮತ ಗಳಿಕೆ ಪ್ರಮಾಣ ಶೇ. 51.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election watch- Govindraj Nagar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X