ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲಕೋಟೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳ ಪರಿಚಯ

|
Google Oneindia Kannada News

1997ರಲ್ಲಿ ಭಾರತದ 50ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ಅಂದಿನ ಮುಖ್ಯಮಂತ್ರಿ ಜೆ ಎಚ್ ಪಟೇಲರಿಂದ ಬಾಗಲಕೋಟೆ ಜಿಲ್ಲೆಯಾಗಿ (ಬಿಜಾಪುರದಿಂದ ಬೇರ್ಪಟ್ಟು) ಉದ್ಘಾಟಿಸಲ್ಪಟ್ಟಿತು. ಐತಿಹಾಸಿಕವಾಗಿ ಬಾಗಲಕೋಟೆ ಜಿಲ್ಲೆಯು ಚಾಲುಕ್ಯರಾಳಿದ ನಾಡು. ಒಂದನೇ ಪುಲಿಕೇಶಿ ರಾಜ್ಯಭಾರದ ಸಮಯದಲ್ಲಿ ಚಾಲುಕ್ಯರ ರಾಜಧಾನಿಯಾಗಿತ್ತು.

ಘಟಪ್ರಭಾ, ಮಲಪ್ರಭಾ, ಮತ್ತು ಕೃಷ್ಣಾ ನದಿಗಳು ಹರಿಯುವ ಜಿಲ್ಲೆಯಲ್ಲಿ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ಮಹಾಕೂಟ ಮುಂತಾದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಚಾಲುಕ್ಯರ ಕಾಲದ ಸುಮಾರು 140ಕ್ಕೂ ಹೆಚ್ಚು ದೇವಾಲಯಗಳು ಬಾಗಲಕೋಟೆ ಜಿಲ್ಲೆಯಲ್ಲಿದೆ.

ಕಪ್ಪು ಮಣ್ಣಿರುವ ಫಲವತ್ತಾದ ನಾಡಿನಲ್ಲಿ ಗುಡಿ ಕೈಗಾರಿಕೆ ಜಿಲ್ಲೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ರೇಷ್ಮೆ ಮತ್ತು ಕೈಮಗ್ಗಕ್ಕೂ ಜಿಲ್ಲೆ ಹೆಸರುವಾಸಿಯಾಗಿದೆ. ಘಟಪ್ರಭಾ, ಮಲಪ್ರಭಾ ಮತ್ತು ಕೃಷ್ಣಾ ನದಿಗಳು ಜಿಲ್ಲೆಯ ಜೀವಾಳ. ಬಸವಣ್ಣನ ಜನ್ಮಸ್ಥಾನ ಕೂಡಲಸಂಗಮವಿರುವುದು ಕೃಷ್ಣಾ ಮತ್ತು ಮಲಪ್ರಭಾ ನದಿಯ ಸಂಗಮದಲ್ಲಿ.

Bagalkot district assembly constituency profile

ಜಿಲ್ಲೆಯ ಒಟ್ಟು ವಿಸ್ತೀರ್ಣ : 6575 square km
ಜನಸಂಖ್ಯೆ : 18.91 ಲಕ್ಷ (2011ರ ಜನಗಣತಿಯಂತೆ)
ಪ್ರಮುಖ ಭಾಷೆಗಳು : ಕನ್ನಡ, ಹಿಂದಿ
ಜಿಲ್ಲೆಯ ವ್ಯಾಪ್ತಿಗೆ ಬರುವ ತಾಲೂಕುಗಳು : ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು

ಬಾದಾಮಿ (ಹಾಲಿ ಶಾಸಕರು, ಎಂ ಕೆ ಪಟ್ಟಣಶೆಟ್ಟಿ, ಬಿಜೆಪಿ)
2008ರ ಚುನಾವಣೆಯಲ್ಲಿ ಪಟ್ಟಣಶೆಟ್ಟಿ (ಪಡೆದ ಒಟ್ಟು ಮತಗಳು 53,409) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಬಿ ಬಿ ಚಿಮ್ಮನಕಟ್ಟಿ (48,302) ಅವರನ್ನು 5,107 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಬಾಗಲಕೋಟೆ (ಹಾಲಿ ಶಾಸಕರು, ಸಿ ವಿ ಚಂದ್ರಶೇಖರಯ್ಯ, ಬಿಜೆಪಿ)
2008ರ ಚುನಾವಣೆಯಲ್ಲಿ ಚಂದ್ರಶೇಖರಯ್ಯ (ಪಡೆದ ಒಟ್ಟು ಮತಗಳು 46,452) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಮೇಟಿ ಯಮುನಪ್ಪ (37,206) ಅವರನ್ನು 9,246 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಬೀಳಗಿ (ಹಾಲಿ ಶಾಸಕರು, ಮುರುಗೇಶ್ ನಿರಾಣಿ, ಬಿಜೆಪಿ)
2008ರ ಚುನಾವಣೆಯಲ್ಲಿ ಮುರುಗೇಶ್ ನಿರಾಣಿ (ಪಡೆದ ಒಟ್ಟು ಮತಗಳು 53,474) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಜಯ್ ಕುಮಾರ್ ಸರ್ನಾಯಕ್ (50,350) ಅವರನ್ನು 3,124 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಹುನಗುಂದ (ಹಾಲಿ ಶಾಸಕರು, ದೊಡ್ಡನಗೌಡ ಪಾಟೀಲ್, ಬಿಜೆಪಿ)
2008ರ ಚುನಾವಣೆಯಲ್ಲಿ ದೊಡ್ಡನಗೌಡ ಪಾಟೀಲ್ (ಪಡೆದ ಒಟ್ಟು ಮತಗಳು 53,644) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಕಾಶಪ್ಪನವರ್ ಶಿವಶಂಕರಪ್ಪ (48,575) ಅವರನ್ನು 5,069 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಜಮಖಂಡಿ (ಹಾಲಿ ಶಾಸಕರು, ಕುಲ್ಕರ್ಣಿ ಶ್ರೀಕಾಂತ್ ಸುಬ್ಬರಾವ್, ಬಿಜೆಪಿ)
2008ರ ಚುನಾವಣೆಯಲ್ಲಿ ಸುಬ್ಬರಾವ್ (ಪಡೆದ ಒಟ್ಟು ಮತಗಳು 59,930) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಸಿದ್ದು ನ್ಯಾಮೇಗೌಡ (40,240) ಅವರನ್ನು 19,690 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಮುಧೋಳ (ಹಾಲಿ ಶಾಸಕರು, ಗೋವಿಂದ ಕಾರಜೋಳ, ಬಿಜೆಪಿ)
2008ರ ಚುನಾವಣೆಯಲ್ಲಿ ಗೋವಿಂದ ಕಾರಜೋಳ (ಪಡೆದ ಒಟ್ಟು ಮತಗಳು 51,835) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ತಿಮ್ಮಾಪುರ ರಾಮಪ್ಪ ಬಾಳಪ್ಪ (44,457) ಅವರನ್ನು 7,378 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ತೇರದಾಳ (ಹಾಲಿ ಶಾಸಕರು, ಸಿದ್ದು ಸವದಿ, ಬಿಜೆಪಿ)
2008ರ ಚುನಾವಣೆಯಲ್ಲಿ ಸಿದ್ದು ಸವದಿ (ಪಡೆದ ಒಟ್ಟು ಮತಗಳು 62,595) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ನಟಿ ಉಮಾಶ್ರೀಯವರನ್ನು (50,351) ಅವರನ್ನು 12,244 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

ಇಲ್ಲಿಯ ಜನರ ಸಮಸ್ಯೆಗಳು

* ಪ್ರವಾಸೋದ್ಯಮ : ಸಾಕಷ್ಟು ಪ್ರವಾಸಿ ಸ್ಥಳಗಳಿದ್ದರೂ ಪ್ರವಾಸೋದ್ಯಮದ ದೃಷ್ಟಿಯಿಂದ ಇನ್ನೂ ಸಾಕಷ್ಟು ಅಭಿವೃದ್ಧಿಗೊಳ್ಳಬೇಕಿದೆ. ಪ್ರವಾಸಿಗಳಿಗೆ ಉಳಿದುಕೊಳ್ಳಲು ಸಾಕಷ್ಟು ಸೌಲಭ್ಯವಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ.

* ಬರ ಪರಿಸ್ಥಿತಿ : ಜಿಲ್ಲೆಯಲ್ಲಿ ಮೂರು ಪ್ರಮುಖ ನದಿಗಳು ಹರಿಯುತ್ತಿದ್ದರೂ ಬೇಸಿಗೆಯಲ್ಲಿ ಬರದ ಬವಣೆ ತಪ್ಪದು. ಬೇರೆ ದಾರಿಯಿಲ್ಲದೆ ರೈತ ಕುಟುಂಬಗಳು ಬೆಂಗಳೂರಿನ ದಾರಿ ಹಿಡಿಯುತ್ತಿವೆ. ನೀರಿನ ನಿರ್ವಹಣೆಯನ್ನು ಇನ್ನೂ ಉತ್ತಮವಾಗಿ ನಿಭಾಯಿಸಬೇಕಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election watch - Bagalkot : Historically, Bagalkote was the capital of the Chalukyan Empire of South India under Pulakesi I. It has tourists attractions like Badami, Ihole, Pattadakallu built by Chalukyas. The district has Bagalkot, Badami, Bilagi, Jamakhandi, Mudhol, Terdal assembly constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X