ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ ಜಿಲ್ಲೆ ಅಭ್ಯರ್ಥಿಗಳು; ಯಾರಿಗೆ ಹೂಮಾಲೆ

By Rajendra
|
Google Oneindia Kannada News

ಕೋಲಾರ ಜಿಲ್ಲೆ ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 10,63,271 ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಬಾರಿ ಮತದಾರರ ಚಿತ್ತ ಎತ್ತ? ಫಲಿತಾಂಶಕ್ಕಾಗಿ ಮೇ 8ರ ತನಕ ಕಾಯಬೇಕು. ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಬಳಿಕ ಬಿಜೆಪಿ ಒಡೆದ ಮನೆಯಾಗಿ ಪರಿವರ್ತನೆಯಾಗಿದೆ.

ಕೋಲಾರ- ಮುಳಬಾಗಿಲು ರಸ್ತೆಯಲ್ಲಿ ಶ್ರೀ ಮಧ್ವಾಚಾರ್ಯರ ಪರಮಾಪ್ತ ಶಿ‌ಷ್ಯಾರಾದ ಶ್ರೀ ಮನ್ಮಾಧವ ತೀಥ೯ರ ಮೂಲ ಮಹಾ ಸಂಸ್ಠಾನ ಮಠ ಇದೆ. ಕೋಲಾರವಾಣಿ ಕನ್ನಡ ದಿನ ಪತ್ರಿಕೆ ಇಂದು ಕೋಲಾರ-ತುಮಕೂರು- ಚಿಕ್ಕಬಳ್ಳಾಪುರ- ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಏಕೈಕ ಪ್ರಾದೇಶಿಕ ದಿನ ಪತ್ರಿಕೆಯಾಗಿದೆ ಪ್ರಕಟಗೊಳ್ಳುತ್ತಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಮಾವಿನ ಮಡಿಲು ಶ್ರೀನಿವಾಸಪುರ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎಂದರೆ ಮಾವು ನೆನಪಿಗೆ ಬರುತ್ತದೆ. ಇದು "ಮಾವಿನ ಮಡಿಲು" ಎಂಬ ಖ್ಯಾತಿಗಳಿಸಿದೆ. ಇಲ್ಲಿಯ ಮಾವು ಅತ್ಯಂತ ರುಚಿ. ಇದಕ್ಕೆ ಅಂತರಾಜ್ಯ ಮಾರುಕಟ್ಟೆ ಇದೆ. ಮೇ ತಿಂಗಳಿನಲ್ಲಿ ಆರಂಭವಾಗಿ ಜುಲೈನಲ್ಲಿ ಅಂತ್ಯವಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ಜೀವ ನದಿ ಇಲ್ಲದಿದ್ದರೂ ನೀರಾವರಿಗೆ ಕೆರೆಗಳನ್ನೇ ನಂಬಿಕೊಂಡಿರುವ ಜಿಲ್ಲೆ ಇದು. ಹೈನುಗಾರಿಕೆಯಲ್ಲಿ ಹಾಲಿನ ಹೊಳೆಯನ್ನೇ ಹರಿಸಿದ ಖ್ಯಾತಿ ಕೋಲಾರ ಜಿಲ್ಲೆಯದು. ಇದು ದ್ವೈ ಭಾಷಿಕ( ಕನ್ನಡ ಮತ್ತು ತೆಲುಗು) ಪ್ರದೇಶ.

kolar district
ಕೋಲಾರ ಜಿಲ್ಲೆಯ ಪ್ರಮುಖ ಭಾಷೆ ಕನ್ನಡ. ಇಲ್ಲಿ ಚಾಲ್ತಿಯಲ್ಲಿರುವ ಇತರ ಭಾಷೆಗಳೆಂದರೆ ತೆಲುಗು, ತಮಿಳು ಮತ್ತು ಉರ್ದು. ಕೋಲಾರ ಜಿಲ್ಲೆಯ ಮುಖ್ಯ ಕಸುಬುಗಳೆ೦ದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ.

ಫ್ಲ್ಯಾಶ್ ಬ್ಯಾಕ್: 2008ರಲ್ಲಿ ಗೆದ್ದ ಅಭ್ಯರ್ಥಿಗಳು
ಕೋಲಾರ: ಆರ್ ವರ್ತೂರು ಪ್ರಕಾಶ್ (ಪಕ್ಷೇತರ) 66446 ಮತಗಳು
ಶ್ರೀನಿವಾಸಪುರ: ಜಿ.ಕೆ.ವೆಂಕಟಶಿವಾರೆಡ್ಡಿ (ಜೆಡಿಎಸ್) 70282 ಮತಗಳು
ಮುಳಬಾಗಿಲು (ಎಸ್ ಸಿ): ಅಮರೇಶ್ (ಕಾಂಗ್ರೆಸ್) 3125 ಮತಗಳು
ಕೆಜಿಎಫ್ (ಎಸ್ ಸಿ): ವೈ ಸಂಪಂಗಿ (ಬಿಜೆಪಿ) 29643 ಮತಗಳು
ಬಂಗಾರಪೇಟೆ (ಎಸ್ ಸಿ): ಎನ್ ನಾರಾಯಣಸ್ವಾಮಿ (ಕಾಂಗ್ರೆಸ್) 49556 ಮತಗಳು
ಮಾಲೂರು: ಎಸ್.ಎನ್.ಕೃಷ್ಣಯ್ಯ ಶೆಟ್ಟಿ (ಬಿಜೆಪಿ) 78280 ಮತಗಳು

ಕೋಲಾರ ಜಿಲ್ಲೆ ಅಭ್ಯರ್ಥಿಗಳು

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಕೆಜೆಪಿ ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ
144 ಶ್ರೀನಿವಾಸಪುರ ರಮೇಶ್ ಕುಮಾರ್ ಕೆ.ಆರ್
ವೆಂಕಟೇಗೌಡ ವೆಂಕಟಶಿವಾರೆಡ್ಡಿ ಶಿವಾರೆಡ್ಡಿ *
145 ಮುಳಬಾಗಿಲು(ಎಸ್ ಸಿ) ಅಮರೇಶ್
ಶ್ರೀನಿವಾಸನ್ ಪಟಾಪಟ್ ಎನ್ ಮುನಿ ಅಂಜನಪ್ಪ ದೊಡ್ಡ ಚೌಡಪ್ಪ ಆದಿನಾರಾಯಣ
146 ಕೆಜಿಎಫ್ (ಎಸ್ ಸಿ) ವಿ ಶಂಕರ್ ರಾಮಕ್ಕ ಭಕ್ತವತ್ಸಲ * ರಾಜಪ್ಪ
147 ಬಂಗಾರಪೇಟೆ (ಎಸ್ ಸಿ) ಎಸ್ ಎನ್ ನಾರಾಯಣಸ್ವಾಮಿ
ಎಂ ನಾರಾಯಣಸ್ವಾಮಿ ರಾಮಚಂದ್ರಪ್ಪ ವಿ ಶೇಷು ಕಳವಂಚಿ ವೆಂಕಟೇಶ್
148 ಕೋಲಾರ ನಜೀರ್ ಅಹಮದ್
ಎಂಎಸ್ ಆನಂದ್ ಶ್ರೀನಿವಾಸಗೌಡ ಅಬ್ದುಲ್ ರೆಹಮಾನ್ ಮಜೀದ್ *
149 ಮಾಲೂರು) ಚೆನ್ನಕೇಶವ
* ಮಂಜುನಾಥ್ ಗೌಡ ನಾರಾಯಣಸ್ವಾಮಿ ಜಯಮ್ಮಜಯರಾಂ, ಕೃಷ್ಣಯ್ಯಶೆಟ್ಟಿ
English summary
Karnataka assembly Election 2013 : Kolar District Assembly Constituency all party candidates list is here. Koalr district consists 4 Assembly constituencies: kolar, Srinivaspur, Mulbagal, KGF, Bangarapet, Malur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X