ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಠಿ ಚಾರ್ಚ್ ನಡುವೆ ಯೋಗಿ ನಾಮಪತ್ರ

By Mahesh
|
Google Oneindia Kannada News

Former minister CP Yogeshwar gets Samajawadi Party Ticket
ಚನ್ನಪಟ್ಟಣ, ಏ.17: ಮಾಜಿ ಸಚಿವ ಸಿಪಿ ಯೊಗೇಶ್ವರ್ ಅವರು ಕೈಲಿದ್ದ ಕಮಲ ಕೊಡವಿಕೊಂಡು ಸೈಕಲ್ ಹತ್ತಿದರೂ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಇಂದು ಕೊನೆ ಕ್ಷಣದಲ್ಲಿ ಎಂಟ್ರಿ ಕೊಟ್ಟಿದ್ದಲ್ಲದೆ ಭಾರಿ ಗೊಂದಲವನ್ನೇ ಸೃಷ್ಟಿಸಿಬಿಟ್ಟರು.

ರಾಷ್ಟ್ರೀಯ ನಾಯಕರ ಹಸ್ತಕ್ಷೇಪದಿಂದ ನನಗೆ ಟಿಕೆಟ್ ತಪ್ಪಿತು. ಬೇರೆ ಬೇರೆ ಪಕ್ಷಗಳಲ್ಲಿ ಜನ ನನ್ನ ಕೈ ಹಿಡಿದು ಗೆಲ್ಲಿಸಿದ್ದಾರೆ. ಈ ಬಾರಿ ಕೂಡಾ ಗೆಲ್ಲುತ್ತೇನೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಕೆಗೆ ಸಿ.ಪಿ ಯೋಗೇಶ್ವರ್ ಬರುವುದಕ್ಕೂ ಮುನ್ನ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಕಚೇರಿಯತ್ತ ಧಾವಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಬಂದ ಅಭಿಮಾನಿಗಳು, ಕಾರ್ಯಕರ್ತರನ್ನು ತಡೆಯಲು ಸಾಧ್ಯವಾಗದೆ ಪೊಲೀಸರು ಪರಿತಪಿಸಿದರು

ಲಾಠಿಚಾರ್ಜ್: ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಯೋಗೇಶ್ವರ್ ಬಂದಾಗ ಅವರ ಜೊತೆ ಅಭಿಮಾನಿಗಳು ನುಗ್ಗಲು ಯತ್ನಿಸಿದರು. ನಿಯಮಗಳ ಪ್ರಕಾರ ನಾಮಪತ್ರ ಸಲ್ಲಿಸಲಿರುವ ಅಭ್ಯರ್ಥಿ ಜೊತೆಗೆ ಐವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹೀಗಾಗಿ ಎಲ್ಲರನ್ನು ಗೇಟಿನ ಹೊರಗಡೆ ನಿಲ್ಲಿಸಲಾಗಿತ್ತು.

ಆದರೆ, ಸುತ್ತಮುತ್ತಲ ಗ್ರಾಮಸ್ಥರು ಗೇಟು ಮುರಿದು ಮುನ್ನುಗ್ಗಿದ ಪರಿಣಾಮ ಓರ್ವ ಪೇದೆ ಹಾಗೂ ಓರ್ವ ಬಿಎಸ್ ಎಫ್ ಯೋಧನಿಗೆ ಗಾಯಗಳಾಯಿತು. ಕಚೇರಿಯತ್ತ ಹೋಗಲು ಬಿಡದ ಪೊಲೀಸರ ಮೇಲೆ ಕಾರ್ಯಕರ್ತರು ಚಪ್ಪಲಿ ತೂರಿದರು. ಪರಿಸ್ಥಿತಿ ಕೈ ಮೀರುವ ಶಂಕೆ ವ್ಯಕ್ತವಾದಾಗ ವಿಧಿವಿಲ್ಲದೆ ಪೊಲೀಸರು ಲಾಠಿ ಚಾರ್ಜ್ ಪ್ರಾರಂಭಿಸಿದರು.

ಸೈನಿಕನ ಟಿಕೆಟ್ ಪುರಾಣ: ಅರಣ್ಯ ಸಚಿವರಾಗಿ ಬಿಜೆಪಿಯಲ್ಲಿ ಹಾಯಾಗಿದ್ದ ಯೋಗೇಶ್ವರ್ ಆವರು ಮೊದಮೊದಲು ಕೆಲ ಕಾಲ ರಾಜಕೀಯ ಸನ್ಯಾಸ ಎಂದಿದ್ದರು ನಂತರ ಬಿಜೆಪಿ ಸಹವಾಸ ಸಾಕು ಎಂದು ಸಚಿವ ಸ್ಥಾನದಿಂದ ಕೆಳಗಿಳಿದರು.

ನಂತರ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆ ಟುಸ್ ಆಯಿತು. ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಮೇಲೆ ಕೂಡಾ ಯೋಗೇಶ್ವರ್ ನಿರೀಕ್ಷೆ ಇಟ್ಟುಕೊಂಡಿದ್ದರು. ಸಾದತ್ ಆಲಿಖಾನ್ ಪ್ರಚಾರ ಕಾರ್ಯ ಆರಂಭಿಸಿದ ಮೇಲೆ ಗಾಬರಿಗೊಂಡು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಮನೆ ಬಾಗಿಲು ತಟ್ಟಿ ನಿರಾಶೆ ಮುಖ ಹೊತ್ತು ಹಿಂತಿರುಗಿದ್ದರು.

ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದ ನಂತರವೇ ತಮ್ಮಿಂದ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದಾಗಿ ಯೋಗೀಶ್ವರ್ ಹೇಳುತ್ತಿದ್ದು, ಟಿಕೆಟ್ ಅನ್ನು ಒಂದು ವೇಳೆ ತಮಗೆ ಕೊಡದಿದ್ದಲ್ಲಿ ಪಕ್ಷೇತರಾಗಿ ಸ್ಪರ್ಧಿಸುತ್ತೇನೆ ಎಂದಿದ್ದರು. ಆದರೆ ಈಗ ಸಮಾಜವಾಗಿ ಪಕ್ಷದ ಬಿ ಫಾರಂ ಪಡೆದು ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ.

ಯೋಗೇಶ್ವರ್ ಅವರ ಮೇಲೆ ಹಲವಾರು ಪ್ರಕರಣಗಳು ಸುತ್ತಿಕೊಂಡಿದ್ದೆ. ಹಗರಣದಿಂದ ಹೊರಗೆ ಬರುವ ಆತಂಕ ಅವರನ್ನು ಹೀಗೆ ಮಾಡಿಸಿದೆ. ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಮೆಗಾಸಿಟಿ ಹಗರಣದ ಬಗ್ಗೆ ಎಲ್ಲಿ ತನಿಖೆ ಆರಂಭಿಸಿ ತಮ್ಮ ಬುಡ ಅಲ್ಲಾಡಿಸುತ್ತದೆ ಎಂಬ ಭಯ ಆವರಿಸಿದೆ. ತಮ್ಮ ವಂಚನೆ ಬಯಲಾಗಿ ಜೈಲುಪಾಲಾಗುವ ಭಯದಿಂದ ಕಾಂಗ್ರೆಸ್ ನಾಯಕರ ಹಿಂದೆ ಬಿದ್ದಿದ್ದಾರೆ ಎಂಬುದು ಎಲ್ಲೆಡೆ ಕೇಳಿ ಬಂದ ಮಾತು.

ಕೋಲಾರದಲ್ಲೂ ಗಲಾಟೆ: ಬಿಜೆಪಿ ಬಂಡಾಯ ಅಭ್ಯರ್ಥಿ ನಾಗರಾಜು ಮೇಲೆ ಅವರ ಕೆನ್ನೆಗೆ ಮಹಿಳೆಯೊಬ್ಬರು ಬಾರಿಸಿ ಹೋಗಿದ್ದರು. ಈಗ ಬಂಧಿಸಲಾಗಿದೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಕೆಜಿಫ್ ನಿವಾಸಿ ಸಂಗಮತಿ ಅವರು ಬಾರಿಸಿ ರಾಬರ್ಟ್ ಸನ್ ಪೇಟೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

English summary
Big Chaos and Lathicharge at Channapatna Taluk Office today(Apr.17). Former minister C P Yogeshwar denied Congress ticket and files nomination with Samajawadi Party ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X