ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಬಳ್ಳಾಪುರ ಜಿಲ್ಲೆ ಯಾರು ಗೆಲುವಿನ ಸರದಾರ?

By Rajendra
|
Google Oneindia Kannada News

ಈ ಬಾರಿ ಮತದಾರರ ಒಲವು ಎತ್ತಕಡೆ. ಹೇಳುವುದು ಕಷ್ಟ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳ ಆರ್ಭಟ ಅಷ್ಟಾಗಿ ಇಲ್ಲ. ಇಲ್ಲೇನಿದ್ದರೂ ನೇರ ಹಣಾಹಣಿ ಇರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಕುತ್ತಿಗೆ ಮಟ್ಟದ ಸ್ಪರ್ಧೆ ಇದ್ದರೂ ಯಾರೇ ಗೆದ್ದರೂ ಅಂತರ ತೀರಾ ಕಡಿಮೆ ಇರುತ್ತದೆ. 2008ರಲ್ಲಿ ಜೆಡಿಎಸ್ ನ ಕೆಪಿ ಬಚ್ಚೇಗೌಡ ಅವರಿಗೆ ವಿಜಯಮಾಲೆ ಬಿದ್ದಿತ್ತು. ಈ ಬಾರಿ ಗಾಳಿ ಎತ್ತ ಬೀಸುತ್ತದೋ ಕಾದುನೋಡಬೇಕು. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಮತಗಳು ಇಲ್ಲಿ ಎಲ್ಲಾ ಪಕ್ಷಕ್ಕೂ ನಿರ್ಣಾಯಕ. ದ್ರಾಕ್ಷಿ, ಆಲೂ, ರೇಷ್ಮೆ ಸೇರಿದಂತೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾಗಿರುವ ಚಿಕ್ಕಬಳ್ಳಾಪುರ ಹೈನುಗಾರಿಕೆಯಲ್ಲೂ ಮೈಲುಗಲ್ಲು ಸಾಧಿಸಿದೆ.

ಪ್ರಸಿದ್ದ ನಂದಿ ಗಿರಿಧಾಮ, ಸ್ಕಂದಗಿರಿ ಬಿಟ್ಟರೆ ಪರಿಸರ ಪ್ರಿಯರು ನೋಡುವಂತ ಮತ್ತೊಂದು ಸ್ಥಳ ಕ್ಷೇತ್ರದಲ್ಲಿಲ್ಲ. ಮತ್ತೆ ಯಥಾಪ್ರಕಾರ ರಾಜಧಾನಿಗೆ ಹತ್ತಿರವಿರುವುದರಿಂದ ರಿಯಲ್ ಎಸ್ಟೇಟ್ ವ್ಯವಹಾರ ಜೋರು ಜೋರು.

2008ರಲ್ಲಿ ಚುನಾವಣೆಯಲ್ಲಿ ಗೆದ್ದವರು
ಚಿಕ್ಕಬಳ್ಳಾಪುರ: ಕೆಪಿ ಬಚ್ಚೇಗೌಡ (ಜೆಡಿಎಸ್) 49774 ಮತಗಳು
ಬಾಗೇಪಲ್ಲಿ: ಎನ್ ಸಂಪಂಗಿ (ಕಾಂಗ್ರೆಸ್) 32244 ಮತಗಳು
ಗೌರಿಬಿದನೂರು: ಎನ್ಎಚ್ ಶಿವಶಂಕರ ರೆಡ್ಡಿ (ಕಾಂಗ್ರೆಸ್) 39127 ಮತಗಳು
ಶಿಡ್ಲಘಟ್ಟ: ವಿ ಮುನಿಯಪ್ಪ (ಕಾಂಗ್ರೆಸ್) 65939 ಮತಗಳು
ಚಿಂತಾಮಣಿ: ಎಂಸಿ ಸುಧಾಕರ್ (ಕಾಂಗ್ರೆಸ್) 58103 ಮತಗಳು

2013 ಕರ್ನಾಟಕ ವಿಧಾನಸಭೆ ಚುನಾವಣೆ ಚಿಕ್ಕಬಳ್ಳಾಪುರ ಜಿಲ್ಲೆ ಅಭ್ಯರ್ಥಿಗಳು:

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಕೆಜೆಪಿ ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ
139 ಗೌರಿಬಿದನೂರು ಶಿವಶಂಕರ್ ರೆಡ್ಡಿ ಎನ್ ಎಚ್
ರವಿನಾರಾಯಣ ರೆಡ್ಡಿ ಅಶ್ವತ್ಥ್ ನಾರಾಯಣ ರೆಡ್ಡಿ ಬಿ.ಎಸ್ ಮುರಳೀಧರ್ ಸೋಮಶೇಖರ್ -
140 ಬಾಗೇಪಲ್ಲಿ ಸಂಪಂಗಿ ಎನ್
ಎಂ ನಾರಾಯಣ ಸ್ವಾಮಿ ಹರೀಂದ್ರ ನಾಥ್ ರೆಡ್ಡಿ ಮುನಿರಾಜು ಎಸ್ ವಿ ಶಿವಶಂಕರ್,
ಜಿ ವಿ ಶ್ರೀರಾಮರೆಡ್ಡಿ
141 ಚಿಕ್ಕಬಳ್ಳಾಪುರ ಡಾ ಸುಧಾಕರ್ ಎವಿ ಭೈರೇಗೌಡ ಬಚ್ಚೇಗೌಡ ಡಾ.ಲಕ್ಷ್ಮೀಪತಿ ಬಾಬು ಎಸ್ ವಿ ಲೋಕೇಶ್
142 ಶಿಡ್ಲಘಟ್ಟ ವಿ ಮುನಿಯಪ್ಪ
ಜೆ.ವಿ ಸದಾಶಿವ ಜಿಕೆ ರಾಜಣ್ಣ ಶಿವಕುಮಾರ್ ಗೌಡ ಎಂಟಿ ನಾರಾಯಣಸ್ವಾಮಿ;
143 ಚಿಂತಾಮಣಿ ವಾಣಿ ಕೃಷ್ಣಾರೆಡ್ಡಿ
ಸತ್ಯನಾರಾಯಣ ಮಹೇಶ್ ಜಿಕೆ ರೆಡ್ಡಿ ಟಿಆರ್ ಕುರ್ಲಾರೆಡ್ಡಿ ಡಾ.ಎಂಸಿ ಸುಧಾಕರ್;

ನಂದಿಯ ತಾಣ ಚಿಕ್ಕಬಳ್ಳಾಪುರ ಜಿಲ್ಲೆ ಕ್ಷೇತ್ರ ಪರಿಚಯ

English summary
Karnataka assembly Election 2013 : Chikkaballapur District Assembly Constituency all party candidates list is here. Chikkaballapur district consists 8 Assembly constituencies: Gauribidanur, Bagepalli, Chikkaballapur, Yelahanka, Hosakote, Devanahalli, Doddaballapur, Nelamangala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X