ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ಆರ್ ಪಟ್ಟಿ ಬಿಡುಗಡೆ: ನರ್ಸ್ ಸ್ಪರ್ಧಿಸುತ್ತಿಲ್ಲ

By Srinath
|
Google Oneindia Kannada News

BSR Congress Sreeramulu releases 124 candidates list,
ಬಳ್ಳಾರಿ, ಏ.10: ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ ಶ್ರೀರಾಮುಲು ಅವರು ಪಕ್ಷದ ವತಿಯಿಂದ ಅಭ್ಯರ್ಥಿಗಳ 5ನೆಯ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರುಗಳಿವೆ. ಪಟ್ಟಿಯಲ್ಲಿ ಈ ಹಿಂದೆ ಘೋಷಿಸಿದ್ದ ಹೆಸರುಗಳೂ ಕಾಣಿಸಿಕೊಂಡಿದೆ. ಅಲ್ಲಿಗೆ ಇನ್ನೂ 100 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳು ಪ್ರಕಟವಾಗಬೇಕಿವೆ.

ಈಗಿನ ಪಟ್ಟಿಯಲ್ಲಿ 9 ಮಾಜಿ ಶಾಸಕರು ಹಾಗೂ ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಬಿ ಶಿವಪ್ಪ ಹೆಸರು ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ. ಶ್ರೀರಾಮುಲು ತಮ್ಮ ಹಾಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದದಿಂದ ಮತ್ತು ಅಳಿಯ ಸುರೇಶ್‌ ಬಾಬು ಕಂಪ್ಲಿಯಿಂದ ಕಣಕ್ಕಿಳಿದಿದ್ದಾರೆ.

ಇದೇ ವೇಳೆ ಹೊನ್ನಾಳಿ ಕ್ಷೇತ್ರದಲ್ಲಿ ನರ್ಸ್ ಜಯಲಕ್ಷ್ಮಿ ಸ್ಪರ್ಧಿಸುವ ಕುತೂಹಲಕ್ಕೆ ತೆರೆಬಿದ್ದಿದ್ದು. ರೇಣುಕಾಚಾರಿ ಬಿಎಸ್‌ಆರ್ ಅಭ್ಯರ್ಥಿಯಾಗಿದ್ದಾರೆ. ಇದರಿಂದ ಕೆಜೆಪಿಯ ಎಂಪಿ ರೇಣುಕಾಚಾರ್ಯ ನಿರಾಳಗೊಂಡಂತಿದೆ.

ಸಂಸದರಾದ ಜೆ ಶಾಂತಾ ಮತ್ತು ಸಣ್ಣ ಫಕೀರಪ್ಪ ಯಾವುದೇ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ. ಆದರೆ ಹರಪನಹಳ್ಳಿಯಲ್ಲಿ ಬಿಜೆಪಿಯ ಗಾಲಿ ಕರುಣಾಕರ ರೆಡ್ಡಿ ಅವರ ವಿರುದ್ಧ ರೆಡ್ಡಿ ಕುಟುಂಬದ ಆತ್ಮೀಯ ಸಿರಾಜ್‌ ಶೇಖ್ ಅವರ ಸ್ಪರ್ಧೆ ಕದನ ಕುತೂಹಲ ಹುಟ್ಟಿಸಿದೆ.

ಇನ್ನು ಸೋಮಶೇಖರ ರೆಡ್ಡಿ ಅವರು ಬಳ್ಳಾರಿ ನಗರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಹಾಗೆಯೇ ಪಕ್ಷದ ವಕ್ತಾರ, ಪತ್ರಕರ್ತ ರವೀಂದ್ರ ರೇಷ್ಮೆ ಅವರು ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸಿಎಂ ಶೆಟ್ಟರ್ ಅವರ ವಿರುದ್ಧ ಸ್ಪರ್ಧಿಸುವ ಸಾಧ್ಯತೆಯಿದೆ.

ಅಭ್ಯರ್ಥಿಗಳ ವಿವರ
ಬೀದರ್ ಜಿಲ್ಲೆ:
ಬಸವಕಲ್ಯಾಣ - ಎಂಜಿ ಮೂಳೆ,
ಹುಮನಾಬಾದ್ - ಬ್ಯಾಂಕ್ ರೆಡ್ಡಿ,
ಬೀದರ್ ದಕ್ಷಿಣ - ಪ್ರವೀಣ್ ಪೀಟರ್,
ಔರಾದ್ - ಶಿವಕುಮಾರ್ ಬೆಲ್ಲದಾಳ,
ಭಾಲ್ಕಿ- ಜಗನ್ನಾಥ್ ಜಮಾದಾರ್.

ಬೆಳಗಾವಿ ಜಿಲ್ಲೆ:
ಖಾನಾಪುರ - ನಾಗರಾಜ್ ಶೀಲವಂತ,
ಕಿತ್ತೂರು - ಅಶೋಕ್ ಕಂಬಿ,
ಬೈಲಹೊಂಗಲ - ಅರವಿಂದ್ ಕಲ್ಲಕುಟಿಕರ್,
ಸವದತ್ತಿ ಎಲ್ಲಮ್ಮ - ಹನುಮಂತಪ್ಪ ಕಲ್ಲೂರು,
ನಿಪ್ಪಾಣಿ - ಸಿದ್ದು ಬಿ ಪಾಟೀಲ್,
ಚಿಕ್ಕೋಡಿ ಸದಲಗಾ - ಸಿದ್ದಪ್ಪ ಇಟ್ನಾಳ್,
ಅಥಣಿ - ಸಿಕಂದರ್‌ಮುಲ್ಲಾ ರಾಜಾಸಾಬ್,
ಕಾಗವಾಡ - ದಿವಾಕರ್ ಪೊದ್ದಾರ್,
ರಾಯಬಾಗ್ - ಪಾಲಿ ಶಂಕರ್ ಸಿಂಗೆ,
ಹುಕ್ಕೇರಿ - ವಿರೂಪಾಕ್ಷಿ ಮೂರೆಣ್ಣವರ್,
ಅರಬಾವಿ - ಬಸವರಾಜ್ ಬಸಂತಪ್ಪ ಬಿ ಪಾಟೀಲ್,
ಗೋಕಾಕ್ - ಬಸವಣ್ಣೆಪ್ಪ,
ಯಮಕನಮರಡಿ - ಅಪ್ಪಾ ಸಾಹೇಬ್ ಬಸವಪ್ರಭು ನಾಯಕ್,
ಕುಡಚಿ - ರಾಜೀವ್ ಪಿ.

ವಿಜಾಪುರ ಜಿಲ್ಲೆ:
ದೇವರಹಿಪ್ಪರಗಿ - ಶಿವಪುತ್ರಪ್ಪ ದೇಸಾಯಿ,
ಬಸವನಬಾಗೇವಾಡಿ - ಧನಶೆಟ್ಟಿ,
ಮುದ್ದೇಬಿಹಾಳ - ಬಪ್ಪರಗಿ ನಿಂಗಪ್ಪ,
ನಾಗಠಾಣ - ವಿಲಾಸಬಾಬು ಅಲಮೇಲಕರ್,
ಇಂಡಿ - ಮಂಜುನಾಥ್ ವಂದಾಳ

ಬಾಗಲಕೋಟ ಜಿಲ್ಲೆ
ಮುಧೋಳ - ಅಶೋಕ ಲಿಂಬಾವಳಿ,
ತೇರದಾಳ - ರಮೇಶ್ ಕೇಸರಕೊಪ್ಪ,
ಜಮಖಂಡಿ - ಅಯೂಬ್ ಪಾರ್ಥನಹಳ್ಳಿ,
ಬದಾಮಿ - ಎಂಎಸ್ ಪಾಟೀಲ್

ಯಾದಗಿರಿ ಜಿಲ್ಲೆ:
ಶಹಪುರ - ಶಂಕ್ರಣ್ಣ ವಣಿಕ್ಯಾಳ,
ಯಾದಗಿರಿ - ಮೌಲಾಲಿ,
ಗುರುಮಿಠ್ಕಲ್ - ಬಾಬು ಚೌಹಾಣ್.

ರಾಯಚೂರು ಜಿಲ್ಲೆ:
ರಾಯಚೂರು ನಗರ - ಪೂಜಾ ಗಾಂಧಿ,
ಸಿಂಧನೂರು - ಕೆ ಕರಿಯಪ್ಪ,
ಮಾನ್ವಿ - ದದ್ದಲ್ ಬಸನಗೌಡ,
ಲಿಂಗಸುಗೂರು - ಸಿದ್ದು ವೈ ಬಂಡಿ,
ಮಸ್ಕಿ - ಶೇಖರಪ್ಪ.

ಗುಲ್ಬರ್ಗ ಜಿಲ್ಲೆ:
ಜೇವರ್ಗಿ - ಬೈಲಪ್ಪ,
ಚಿತ್ತಾಪುರ - ವೆಂಕಟೇಶ್ ದಂದೂರು,
ಚಿಂಚೋಳಿ - ವಿಠ್ಠಲ್ ಕರೇಅಂಬಲಗಿ,
ಗುಲ್ಬರ್ಗ ಗ್ರಾಮಾಂತರ - ಬಾಬು ಹೊನ್ನಾನಾಯಕ್,
ಗುಲ್ಬರ್ಗ ದಕ್ಷಿಣ - ಸತೀಶ್ ಗುತ್ತೇದಾರ್,
ಆಳಂದ - ಉದಯ್‌ ಕುಮಾರ್ ಬಿರಾದಾರ್.

ಹಾವೇರಿ ಜಿಲ್ಲೆ:
ಹಾನಗಲ್ - ಸೋಮಶೇಖರ್ ಎಂ ಕೊತಂಬ್ರಿ,
ಶಿಗ್ಗಾಂವ - ಬಸವರಾಜ್ ಅಂಗಡಿ,
ಹಾವೇರಿ - ಭಜಂತ್ರಿ,
ಬ್ಯಾಡಗಿ - ದಾದಾಪೀರ್ ಭೂಷಿ,
ಹಿರೇಕೇರೂರು - ಅಶೋಕ್,
ರಾಣೆಬೆನ್ನೂರು - ಗುಡ್ಡೆಪ್ಪ ಡಿ ಓಲೇಕಾರ್.

ಧಾರವಾಡ ಜಿಲ್ಲೆ:
ನವಲಗುಂದ - ಸಿದ್ರಾಮ ಶೆಟ್ಟರ್,
ಕುಂದಗೋಳ - ವಿರೂಪಾಕ್ಷಪ್ಪ ಕಳ್ಳಿಮನಿ,
ಧಾರವಾಡ - ಯೋಗೀಶ್‌ಗೌಡ.

ಕಾರವಾರ ಜಿಲ್ಲೆ:
ಕಾರವಾರ ನಗರ - ಮಂಜುಳಾ ನಾಯಕ,
ಶಿರಸಿ - ನಾಗರಾಜ್ ಹೆಗಡೆ,
ಯಲ್ಲಾಪುರ - ಉಮೇಶ್ ಹೆಗಡೆ,
ಕುಮಟಾ - ದತ್ತು ಪಟಗಾರ.

ದಾವಣಗೆರೆ ಜಿಲ್ಲೆ:
ಹರಪನಹಳ್ಳಿ - ಸಿರಾಜ್‌ ಶೇಖ್,
ಮಾಯಕೊಂಡ - ಜಿಎಚ್ ಕಷ್ಣ,
ಚೆನ್ನಗಿರಿ - ಅಮೀರ್ ಅಹಮದ್,
ಹೊನ್ನಾಳಿ-ರೇಣುಕಾಚಾರಿ

ಚಿತ್ರದುರ್ಗ ಜಿಲ್ಲೆ:
ಮೊಳಕಾಲ್ಮೂರು - ನೇರಲಗುಂಟೆ ತಿಪ್ಪೇಸ್ವಾಮಿ,
ಚೆಳ್ಳಕೆರೆ - ಎಲ್ಎನ್ ನಾಗರಾಜ್,
ಚಿತ್ರದುರ್ಗ - ಫಯಾಜ್,
ಹಿರಿಯೂರು - ಜಯಣ್ಣ,
ಹೊಳಲ್ಕೆರೆ - ಶ್ರೀನಿವಾಸ್,
ಹೊಸದುರ್ಗ - ಗೋವಿಂದರಾಜುಲು.

ಶಿವಮೊಗ್ಗ ಜಿಲ್ಲೆ:
ಶಿವಮೊಗ್ಗ ಗ್ರಾಮಾಂತರ - ನವಿಲೇ ಶಿವಕುಮಾರ್,
ತೀರ್ಥಹಳ್ಳಿ - ಅಶೋಕ್‌ಮೂರ್ತಿ,
ಶಿಕಾರಿಪುರ - ಫಕೀರಪ್ಪ,
ಸೊರಬ - ಬಾಸೂರು ಚಂದ್ರೇಗೌಡ,
ಸಾಗರ - ನವನೀತ.

ರಾಮನಗರ ಜಿಲ್ಲೆ:
ಮಾಗಡಿ - ಆನಂದ್‌ ರೆಡ್ಡಿ,
ಕನಕಪುರ - ಗೋವಿಂದ ರಾಜ್,
ಚೆನ್ನಪಟ್ಟಣ - ಪಾರ್ಥಸಾರಥಿ.

ತುಮಕೂರು ಜಿಲ್ಲೆ
ತುರುವೇಕೆರೆ - ರಾಮೇಗೌಡ,
ಕುಣಿಗಲ್ - ಲಕ್ಷ್ಮೀನಾರಾಯಣ,
ತುಮಕೂರು ಗ್ರಾಮಾಂತರ - ರಾಮಾಂಜಿನಪ್ಪ,
ಕೊರಟಗೆರೆ - ಕೆಎಂ ನರಸಿಂಹಮೂರ್ತಿ,
ಗುಬ್ಬಿ - ಹುಚ್ಚೇಗೌಡ,
ಮಧುಗಿರಿ - ಸೌಹಾರ್ದ ಶಿವಕುಮಾರ್.

ಬೆಂಗಳೂರು ಜಿಲ್ಲೆ:
ಬೊಮ್ಮನಹಳ್ಳಿ - ಶ್ರೀನಿವಾಸ್,
ಯಶವಂತಪುರ - ಲೋಕೇಶ್‌ ಗೌಡ,
ದಾಸರಹಳ್ಳಿ - ಕೆಂಪರಾಜು ಪಿಎನ್,
ಮಹದೇವಪುರ - ಮಯೂರ ಪಟೇಲ್,
ಬೆಂಗಳೂರು ದಕ್ಷಿಣ - ರವಿಚಂದ್ರ,
ಗಾಂಧಿನಗರ - ವಿ ನಾಗರಾಜ್,
ರಾಜಾಜಿನಗರ - ಹರೀಶ್ ಆರಾಧ್ಯ,
ಮಹಾಲಕ್ಷ್ಮಿ ಲೇಔಟ್ - ಕಷ್ಣಮೂರ್ತಿ.

ಚಾಮರಾಜನಗರ ಜಿಲ್ಲೆ:
ಚಾಮರಾಜನಗರ - ರಕ್ಷಿತಾ ಪ್ರೇಮ್.

ಚಿಕ್ಕಬಳ್ಳಾಪುರ ಜಿಲ್ಲೆ:
ಗೌರಿಬಿದನೂರು - ಶಿವಪ್ಪ ಬಿಕೆ.

ಚಿಕ್ಕಮಗಳೂರು ಜಿಲ್ಲೆ:
ಶೃಂಗೇರಿ - ಪೂರ್ಣೇಶ್

ಹಾಸನ ಜಿಲ್ಲೆ:
ಶ್ರವಣಬೆಳಗೊಳ - ಮಂಜುನಾಥ್,
ಅರಸೀಕೆರೆ - ಸಂಜಯ ನಾಗತಿಹಳ್ಳಿ,
ಹಾಸನ ನಗರ - ಸಲೀಂ,
ಹೊಳೆನರಸೀಪುರ - ಶೋಭಾ ಪ್ರಕಾಶ್,
ಅರಕಲಗೂಡು - ಲಿಂಗರಾಜ್,
ಸಕಲೇಶಪುರ - ಶ್ರೀಧರ್ ಕಲವೀರ

ಕೋಲಾರ ಜಿಲ್ಲೆ:
ಮುಳಬಾಗಿಲು - ಲೋಕೇಶ್,
ಬಂಗಾರಪೇಟೆ - ಕಲವಂಚಿ ವೆಂಕಟೇಶ್.

ಮೈಸೂರು ಜಿಲ್ಲೆ:
ಪಿರಿಯಾಪಟ್ಟಣ - ಗಶ್,
ಕಷ್ಣರಾಜ ನಗರ - ಡಾ ಬಿ ಮಹದೇವಸ್ವಾಮಿ,
ಹುಣಸೂರು - ನಿಂಗಾನಾಯಕ,
ಚಾಮುಂಡೇಶ್ವರಿ - ಕೆಪಿ ಚಿದಾನಂದ್,
ಕಷ್ಣರಾಜ - ನಂಜುಂಡಸ್ವಾಮಿ ಎಚ್ಎಸ್
ಚಾಮರಾಜ - ಜಯಪ್ರಕಾಶ್,
ನರಸಿಂಹರಾಜ - ಇಕ್ರಮ್ ಸಿದ್ಧಿಕ್.

ಉಡುಪಿ ಜಿಲ್ಲೆ:
ಬೈಂದೂರು - ಉದಯ ಕಾರವಿ,
ಉಡುಪಿ - ಸತೀಶ್ ಪೂಜಾರಿ,
ಕಾಪು- ವೆಂಕಟೇಶ್ ಅಂಚನ್,
ಕಾರ್ಕಳ - ಸಂತೋಷ್.

ಮಂಡ್ಯ ಜಿಲ್ಲೆ:
ಮಳವಳ್ಳಿ - ಡಾ ಮೂರ್ತಿ,
ಮದ್ದೂರು - ಪ್ರವೀಣ್,
ಮೇಲುಕೋಟೆ - ಉದಯಕುಮಾರ್,
ಶ್ರೀರಂಗಪಟ್ಟಣ - ಗಂಜಂ ಶಿವು.

ಬಳ್ಳಾರಿ ಜಿಲ್ಲೆ:
ಬಳ್ಳಾರಿ ಗ್ರಾಮಾಂತರ - ಬಿ ಶ್ರೀರಾಮುಲು,
ಸಂಡೂರು - ಚೆನ್ನಬಸಪ್ಪ,
ಹಗರಿಬೊಮ್ಮನಹಳ್ಳಿ - ಭೀಮಾ ನಾಯಕ್,
ಕಂಪ್ಲಿ - ಟಿ ಸುರೇಶ್‌ ಬಾಬು,
ಹೂವಿನಹಡಗಲಿ - ಹೇಮಂತ್ ಭಾರತಿ,
ಹೊಸಪೇಟೆ - ರಾಣಿ ಸಂಯುಕ್ತ.

ಕೊಪ್ಪಳ ಜಿಲ್ಲೆ:
ಯಲಬುರ್ಗಾ - ನವೀನ್ ಗುಳಗಣ್ಣನವರ್,
ಕನಕಗಿರಿ - ಮುಕುಂದರಾವ್ ಭವಾನಿಮಠ,
ಕುಷ್ಟಗಿ - ರಾಜಶೇಖರ್‌ ಗೌಡ.

ಗದಗ ಜಿಲ್ಲೆ:
ಗದಗ - ಅನಿಲ್ ಮೆಣಸಿನಕಾಯಿ,
ಶಿರಹಟ್ಟಿ - ಜಯಶ್ರೀ ಹಳ್ಳೆಪ್ಪನವರ್.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
BSR Congress Sreeramulu released 124 candidates list on April 9 in Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X