ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ಆರ್ ಪಟ್ಟಿ-3 ಬಿಡುಗಡೆ: ಜನಾ ರೆಡ್ಡಿ ಸ್ಪರ್ಧಿಸೋಲ್ಲ

By Srinath
|
Google Oneindia Kannada News

BSR Congress Sreeramulu releases 12 candidates list- 3 Janardhan Reddy not to contest
ಬಳ್ಳಾರಿ, ಏ.4: ಅತ್ತ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜತೆ ಮೈತ್ರಿ ಮಾತುಕತೆ ಮುರಿದುಬಿದ್ದ ನಂತರ ಮತ್ತೆ ಏಕಾಂಗಿ ಹೋರಾಟಕ್ಕೆ ಇಳಿದ ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ ಶ್ರೀರಾಮುಲು ಅವರು ಪಕ್ಷದ ವತಿಯಿಂದ ಅಭ್ಯರ್ಥಿಗಳ ಮೂರನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಈ ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಮತ್ತೊಬ್ಬ ಮುಖಂಡ ಸೋಮಶೇಖರ ರೆಡ್ಡಿ ಅವರು ತಮ್ಮ ಸಹೋದರ ಜೆ ಜನಾರ್ದನ ರೆಡ್ಡಿ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ 2 ಹಂತಗಳಲ್ಲಿ 44 ಮಂದಿಯ ಪಟ್ಟಿಯನ್ನು BSR Congress ಬಿಡುಗಡೆ ಮಾಡಿದೆ. ಇದೀಗ 12 ಅಭ್ಯರ್ಥಿಗಳ 3ನೇ ಸಂಭಾವ್ಯಪಟ್ಟಿಯನ್ನು ಪಕ್ಷದ ಕೇಂದ್ರ ಸ್ಥಾನವಾದ ಬಳ್ಳಾರಿಯಲ್ಲಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಬಳ್ಳಾರಿ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗಿದೆ.

ಬಿಜೆಪಿ ಸಚಿವ ಆನಂದ್‌ ಸಿಂಗ್‌ ಸ್ಪರ್ಧಿಸುವ ಹೊಸಪೇಟೆಯ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಆನಂದ್‌ ಸಿಂಗ್‌ ಅವರ ಸಹೋದರಿ, ರಾಣಿ ಸಂಯುಕ್ತ ಅವರನ್ನೇ ಕಣಕ್ಕಿಳಿಸಿರುವುದು ಮತ್ತೂಂದು ವಿಶೇಷವಾಗಿದೆ. ಈ ಮಧ್ಯೆ ಆನಂದ್ ಸಿಂಗ್ ಬಿಜೆಪಿಗೆ ಗುಡ್ ಬೈ ಹೇಳುವುದು ಪಕ್ಕಾ ಆಗಿದೆ.

ಇನ್ನೆರಡು ದಿನಗಳಲ್ಲಿ 70ಕ್ಕೂ ಹೆಚ್ಚು ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಶ್ರೀರಾಮುಲು ಅವರು ಪ್ರಕಟಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

3ನೇ ಸಂಭಾವ್ಯಪಟ್ಟಿಯಲ್ಲಿ ಸ್ಥಾನ ಪಡೆದವರು:
ವಿಜಯನಗರ- ರಾಣಿ ಸಂಯುಕ್ತ
ಕಂಪ್ಲಿ -ಟಿಎಚ್ ಸುರೇಶ್‌ಬಾಬು
ಹಗರಿಬೊಮ್ಮನಹಳ್ಳಿ- ಭೀಮನಾಯ್ಕ
ಸಂಡೂರು- ಚೆನ್ನಬಸಪ್ಪ
ಬೀದರ್‌ ದಕ್ಷಿಣ- ಪ್ರವೀಣ ಪೀಟರ್‌
ಬೈಲಹೊಂಗಲ- ಅರವಿಂದ ಕುಲಕರ್ಣಿ
ಚಿಕ್ಕನಾಯಕನಹಳ್ಳಿ -ದೇವರಾಜ್‌
ತುಮಕೂರು- ರಾಮಾಂಜನೆಪ್ಪ
ಶಿರಾ- ರಂಗನಾಥಪ್ಪ
ದಾಸರಹಳ್ಳಿ- ಕೆಂಪರಾಜು
ಕನಕಗಿರಿ- ಮುಕುಂದರಾವ್‌ ಭವಾನಿಮಠ
ಕಲಘಟಗಿ- ಬಸವರಾಜ್‌ ಮುತ್ತಗಿ.

ಬಿಎಸ್ಆರ್ ಕಾಂಗ್ರೆಸ್ ಮೊದಲನೇ ಪಟ್ಟಿ (ರಾಮುಲು ಕಾಂಗ್ರೆಸ್: 26 ಅಭ್ಯರ್ಥಿಗಳ ಪಟ್ಟಿ ನೋಡಿ)

ಬಿಎಸ್ಆರ್ ಕಾಂಗ್ರೆಸ್ ಎರಡನೆಯ ಪಟ್ಟಿ (ರಾಮುಲು ಕಾಂಗ್ರೆಸ್: 18 ಅಭ್ಯರ್ಥಿಗಳ ಪಟ್ಟಿ ನೋಡಿ)

English summary
BSR Congress Sreeramulu releases 12 candidates list- 3 on April 3 in Bellary. But Janardhan Reddy not to contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X