ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರೀಕೆರೆ ವಿಧಾನಸಭಾ ಕ್ಷೇತ್ರದ ಪರಿಚಯ

By Mahesh
|
Google Oneindia Kannada News

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ತರೀಕೆರೆ ಕ್ಷೇತ್ರದಲ್ಲಿ ಲಿಂಗಾಯತ ಮತವೇ ನಿರ್ಣಾಯಕವಾಗಿದೆ. ಅರೆ ಮಲೆನಾಡು ಸೀಮೆಯ ಈ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಇಲ್ಲಿ ತನಕ ಸುಲಭವಾಗಿ ತನ್ನ ಪ್ರಾಬಲ್ಯ ಮೆರೆದಿದೆ.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಯಾವ ರೀತಿ ಅಂತ್ಯ ಕಾಣುವುದು ಎಂಬುದರ ಮೇಲೆ ಈ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗುವ ಸಾಧ್ಯತೆಯಿದೆ.

ಕ್ಷೇತ್ರ ಪರಿಚಯ: ಕಡೂರು- ಎಂದಿಗೆ ಸಿಗುವುದು ನೀರಿನ ಸೆಲೆಕ್ಷೇತ್ರ ಪರಿಚಯ: ಕಡೂರು- ಎಂದಿಗೆ ಸಿಗುವುದು ನೀರಿನ ಸೆಲೆ

2008ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ಡಿ.ಎಸ್ ಸುರೇಶ್ ಅವರು ನಂತರ ಯಡಿಯೂರಪ್ಪ ಅವರ ಕೆಜೆಪಿ ಸೇರಿ ಸ್ಪರ್ಧೆಗಿಳಿದು ಸೋಲು ಕಂಡಿದ್ದರು. ಈಗ ಮತ್ತೆ ಬಿಜೆಪಿಯಿಂದ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

2013ರಲ್ಲಿ ಕೊನೆ ಕ್ಷಣದಲ್ಲಿ ಎಲ್ಲರ ಹುಬ್ಬೇರುವಂತೆ ಕಾಂಗ್ರೆಸ್ ಟಿಕೆಟ್ ಪಡೆದು ಗೆಲುವು ಸಾಧಿಸಿದ್ದ ಶ್ರೀನಿವಾಸ್ ಅವರು ಈ ಬಾರಿಯೂ ಬಿ ಫಾರಂ ಪಡೆಯುವುದರಲ್ಲಿ ಅನುಮಾನವಿಲ್ಲ. ಆದರೆ, ಬಿಜೆಪಿ ಭದ್ರಕೋಟೆಯನ್ನು ಮತ್ತೊಮ್ಮೆ ಛಿದ್ರಗೊಳಿಸಲು ಸಾಧ್ಯವೆ ಕಾದು ನೋಡಬೇಕಿದೆ.

Karnataka Assembly Election 2018: Tarikere Constituency Profile

ಮೂಲ ಸೌಕರ್ಯ ಕೊರತೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಇಂಬು ನೀಡದಿರುವುದು, ಕಾಡುಮೃಗಗಳು ಹಾಗೂ ಮಾನವರ ನಡುವಿನ ಸಂಘರ್ಷ, ಕೃಷಿಕರಲ್ಲಿರುವ ಗೊಂದಲ ಎಲ್ಲವೂ ಕ್ಷೇತ್ರದ ಅಳಿಯದ ಸಮಸ್ಯೆಗಳಾಗಿವೆ.

ಕ್ಷೇತ್ರ ಪರಿಚಯ: ಚಿಕ್ಕಮಗಳೂರು- ನೈಸರ್ಗಿಕ ಸಿರಿ ಜಿಲ್ಲೆಯ ಬಡ ಕ್ಷೇತ್ರ ಕ್ಷೇತ್ರ ಪರಿಚಯ: ಚಿಕ್ಕಮಗಳೂರು- ನೈಸರ್ಗಿಕ ಸಿರಿ ಜಿಲ್ಲೆಯ ಬಡ ಕ್ಷೇತ್ರ

ಲಿಂಗಾಯತ ಹಾಗೂ ವೀರಶೈವ ಮತ, ಬಸವಣ್ಣ ಅವರ ಹೆಸರ ಅನುಯಾಯಿಗಳಾಗಿ ಹೊಸ ಮತ ಸ್ಥಾಪನೆ ಬಗ್ಗೆ ಮೂಡಿರುವ ಗೊಂದಲ ಈ ಕ್ಷೇತ್ರಕ್ಕೂ ಬಲವಾಗಿ ತಟ್ಟುವ ಸಾಧ್ಯತೆಯಿದೆ.

ತೆಂಗು, ಬಾಳೆ, ನೆಲಗಡಲೆ, ಸೂರ್ಯಕಾಂತಿ, ಮೆಕ್ಕೆಜೋಳ ಮುಂತಾದ ವಾಣಿಜ್ಯ ಬೆಳೆ, ಭತ್ತ, ರಾಗಿ ಬೆಳೆಯುವ ತರೀಕೆರೆಗೆ ಶಿವಮೊಗ್ಗ, ಭದ್ರಾವತಿ ಪಟ್ಟಣಗಳು ಹತ್ತಿರವಾಗಿದ್ದು ಪ್ರಮುಖ ವಾಣಿಜ್ಯ ವ್ಯವಹಾರಕ್ಕೆ ಅನುಕೂಲಕರ ನೆಲೆಯಾಗಿದೆ.

ಪ್ರವಾಸಿ ತಾಣಗಳೇ ಆಕರ್ಷಣೆ: ಕಲ್ಹತ್ತಗಿರಿ, ಕೆಮ್ಮಣ್ಣುಗುಂಡಿ ಗಿರಿಧಾಮಗಳು, ಹೊಯ್ಸಳರ ಕಾಲದ ಅಮೃತಾಪುರದ ದೇಗುಲ, ಲಕ್ಕವಳ್ಳಿಯ ಅಣೆಕಟ್ಟು ಎಲ್ಲವೂ ಪ್ರಮುಖ ತಾಣಗಳಾಗಿವೆ. ಇದಲ್ಲದೆ ಅಜ್ಜಂಪುರದ ಅಮೃತ್ ಮಹಲ್ ಕಾವಲ್ ರಾಸುಗಳು ತುಂಬಾ ಪ್ರಸಿದ್ಧಿ ಪಡೆದಿವೆ. ಭದ್ರಾ ವನ್ಯಜೀವಿ ಅಭಯಾರಣ್ಯ ನಾಡಿನ ಪ್ರಮುಖ ಜೀವ ತಾ.

2013ರಲ್ಲಿ ಕಾಂಗ್ರೆಸ್ಸಿನ ಜಿ. ಎಚ್ ಶ್ರೀನಿವಾಸ ಅವರು 35,817 ಮತಗಳನ್ನು ಪಡೆದು ವಿಜಯಿಯಾದರೆ, ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ಡಿಎಸ್ ಸುರೇಶ್ 34918 ಮತಗಳನ್ನು ಗಳಿಸಿದ್ದರು.

English summary
Karnataka Assembly Election 2018: Read all about Tarikere assembly constituency of Chikkamagaluru district. Get election news from Tarikere. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X