ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಪ ಮುಂದುವರಿಕೆ : ಮುಜರಾಯಿ ಸಚಿವರು ಚುನಾವಣೆ ಸೋಲು

By Mahesh
|
Google Oneindia Kannada News

ಬೆಂಗಳೂರು, ಮೇ 16 : ಮುಜರಾಯಿ ಖಾತೆ ಸಚಿವರಾದವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ನಂಬಿಕೆ, ಶಾಪ, ಇತಿಹಾಸ ಮತ್ತೆ ಮುಂದುವರೆದಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಮುಜರಾಯಿ ಸಚಿವರಾಗಿದ್ದ ರುದ್ರಪ್ಪ ಲಮಾಣಿ ಅವರು ಈ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

ಇದುವರೆಗೆ ಸರ್ಕಾರದಲ್ಲಿ ಮುಜರಾಯಿ ಖಾತೆ ಸಚಿವರಾಗಿದ್ದವರು ನಂತರದ ಚುನಾವಣೆಯಲ್ಲಿ ಸೋಲನುಭವಿಸುತ್ತಲೇ ಬಂದಿರುವುದು ಕಾಕತಾಳೀಯವೋ, ಶಾಪವೋ ಗೊತ್ತಿಲ್ಲ.

ಕ್ಷೇತ್ರ ಪರಿಚಯ : ಉತ್ತರ ಕರ್ನಾಟಕದ ಹೆಬ್ಬಾಗಿಲುಕ್ಷೇತ್ರ ಪರಿಚಯ : ಉತ್ತರ ಕರ್ನಾಟಕದ ಹೆಬ್ಬಾಗಿಲು

ಕಾಂಗ್ರೆಸ್ ಸರ್ಕಾರದಲ್ಲಿ ಮುಜರಾಯಿ ಇಲಾಖೆ ಸಚಿವರಾಗಿದ್ದ ರುದ್ರಪ್ಪ ಲಮಾಣಿ ಈ ಬಾರಿಯ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇವರ ವಿರುದ್ಧ ಬಿಜೆಪಿಯ ಅಭ್ಯರ್ಥಿ ನೆಹರೂ ಓಲೇಕಾರ್‌ ಗೆಲುವು ಸಾಧಿಸಿದ್ದಾರೆ.

ಸೋತು ಸುಣ್ಣವಾದ ಸಿದ್ದರಾಮಯ್ಯ ಸಂಪುಟದ 15 ಸಚಿವರು ಸೋತು ಸುಣ್ಣವಾದ ಸಿದ್ದರಾಮಯ್ಯ ಸಂಪುಟದ 15 ಸಚಿವರು

ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಈ ಖಾತೆ ಹೊಂದಿದ್ದ ವಿ ಸೋಮಣ್ಣ, ಮಾಲೂರಿನ ಕೃಷ್ಣಯ್ಯ ಶೆಟ್ಟಿ ಅವರು ಸೋಲಿನ ಕಹಿ ಅನುಭವಿಸಿದ್ದಾರೆ. ಇವರಿಬ್ಬರಿಗೂ ತುಂಬ ಮುಂಚಿತವಾಗಿ 90ರ ದಶಕದಲ್ಲಿ ಮುಜರಾಯಿ ಖಾತೆ ಹೊಂದಿದ್ದ ಮುನಿಯಪ್ಪ ಮುದ್ದಪ್ಪ ಸೋಲು ಕಂಡಿದ್ದರು. ಮಿಕ್ಕಂತೆ ಯಾರೆಲ್ಲ ಸೋಲಿನ ಕಹಿ ಅನುಭವಿಸಿದರು. ಲಮಾಣಿ ಅವರ ಸೋಲಿನ ಕಾರಣವೇನು? ಮುಂದೆ ಓದಿ..

ಈ ಖಾತೆ ಹೊಂದಿದ್ದ ವಿ ಸೋಮಣ್ಣ

ಈ ಖಾತೆ ಹೊಂದಿದ್ದ ವಿ ಸೋಮಣ್ಣ

ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಈ ಖಾತೆ ಹೊಂದಿದ್ದ ವಿ ಸೋಮಣ್ಣ, ಮಾಲೂರಿನ ಕೃಷ್ಣಯ್ಯ ಶೆಟ್ಟಿ ಅವರು ಸೋಲಿನ ಕಹಿ ಅನುಭವಿಸಿದ್ದಾರೆ. ಇವರಿಬ್ಬರಿಗೂ ತುಂಬ ಮುಂಚಿತವಾಗಿ 90ರ ದಶಕದಲ್ಲಿ ಮುಜರಾಯಿ ಖಾತೆ ಹೊಂದಿದ್ದ ಮುನಿಯಪ್ಪ ಮುದ್ದಪ್ಪ ಸೋಲು ಕಂಡಿದ್ದರು.

ನಂತರ ಬಿ ನಾಗರಾಜ ಶೆಟ್ಟಿ ಅವರು ಬಂಟ್ವಾಳದಲ್ಲಿ ರಮಾನಾಥ ರೈ ವಿರುದ್ಧ ಸೋಲು ಕಂಡರು. ನಂತರ ವಿರಾಜಪೇಟೆಯಿಂದ ಆಯ್ಕೆಯಾದ ಸುಮಾ ವಸಂತ್ ಅವರು ಈ ಖಾತೆ ಹೊಂದಿದ ಬಳಿಕ ಮುಂದಿನ ಚುನಾವಣೆ ಸೋತರು.

ಎಂಪಿ ಪ್ರಕಾಶ್ ಅವರು ಕೂಡಾ ಚುನಾವಣೆ ಸೋಲಬೇಕಾಯಿತು. ಗೋವಿಂದರಾಜನಗರದಲ್ಲಿ ವಿ ಸೋಮಣ್ಣ ಅವರು ಪ್ರಿಯಕೃಷ್ಣ ವಿರುದ್ಧ ಸೋಲು ಕಂಡರು.

ಏರಿಳಿತ ಕಂಡ ಲಮಾಣಿ ರಾಜಕೀಯ

ಏರಿಳಿತ ಕಂಡ ಲಮಾಣಿ ರಾಜಕೀಯ

'ಇಂದಿರಾ ವಸ್ತ್ರಭಾಗ್ಯ ಎಂಬ ಯೋಜನೆಯಡಿ ಮಹಿಳೆಯರಿಗೆ ಸೀರೆ ಮತ್ತು ಬೌಸ್ ಪೀಸ್, ಪುರುಷರಿಗೆ ಪಂಚೆ ಮತ್ತು ಶರ್ಟ್ ಪೀಸ್ ನೀಡಲಾಗುತ್ತದೆ' ಎಂದು ಹೇಳಿದ್ದ ಲಮಾಣಿಗೆ ಕೊನೆಗೆ ಗೆಲುವಿನ ಭಾಗ್ಯ ಸಿಗಲಿಲ್ಲ.

ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾದಾಗ ಕೂಡಾ ಲಮಾಣಿ ಸುದ್ದಿಯಲ್ಲಿದ್ದರು. ಆದರೆ, ಸಿದ್ದರಾಮಯ್ಯ ತೆಗೆದುಕೊಂಡ ಹಲವು ನಿರ್ಧಾರಗಳ ಮೊದಲ ಬಲಿ ಲಮಾಣಿ ಆಗುತ್ತಿದ್ದರು.

ದೇಗುಲದಲ್ಲಿನ ಅವ್ಯವಸ್ಥೆ ಬಗ್ಗೆ ಕೂಗು

ದೇಗುಲದಲ್ಲಿನ ಅವ್ಯವಸ್ಥೆ ಬಗ್ಗೆ ಕೂಗು

ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಸುಮಾರು 34 ಸಾವಿರ ದೇವಾಲಯಗಳ ಪೈಕಿ, ಎ ವರ್ಗಕ್ಕೆ ಸೇರಿದ ದೇವಾಲಯಗಳು 125 ಮತ್ತು ಬಿ ವರ್ಗಕ್ಕೆ ಸೇರಿದ 179 ದೇವಾಲಯಗಳಿವೆ. ಈ ಎರಡು ವರ್ಗದ ದೇವಾಲಯಗಳಿಂದಲೇ ಸರಕಾರಕ್ಕೆ ವಾರ್ಷಿಕ 475 ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತದೆ. ಇದೆಲ್ಲವನ್ನು ಹಜ್ ಯಾತ್ರೆ, ಕ್ರೈಸ್ತರ ಮಂದಿರಗಳಿಗೆ ವಿನಿಯೋಗಿಸಲಾಗುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಲಮಾಣಿ ಅಲ್ಲಗೆಳೆದಿದ್ದರು. ಸರ್ಕಾರದ ವ್ಯಾಪ್ತಿಗೆ ಬರುವ ದೇಗುಲದಲ್ಲಿನ ಅವ್ಯವಸ್ಥೆ ಬಗ್ಗೆ ಕೂಗು ಕೇಳಿ ಬಂದಿತ್ತು.

2013ರ ಫಲಿತಾಂಶ

2013ರ ಫಲಿತಾಂಶ

ರುದ್ರಪ್ಪ ಲಮಾಣಿ ಅವರು 83,119 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ಸಿನ ಡಾ. ಮಲ್ಲೇಶ್ವಪ್ಪ ಹರಿಜನ್ ಅವರಿಗೆ ಕೇವಲ 5,153 ಮತಗಳು ಹಾಗೂ ಜೆಡಿಎಸ್ ನ ಪರಮೇಶ್ವರ ತಿಪ್ಪಣ್ಣ ಅವರು 1461 ಮತಗಳು ಸಂಪುಟ ಪುನಾರಚನೆ ಸಂದರ್ಭದಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ನೆಹರು ಓಲೆಕರ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬುದು ಸದ್ಯದ ಸುದ್ದಿ. ರುದ್ರಪ್ಪ ಲಮಾಣಿ ಅವರಿಗೆ ಮತ್ತೊಮ್ಮೆ ಟಿಕೆಟ್ ಸಿಗುವುದು ಖಾತ್ರಿಯಾಗಿದೆ.

English summary
In Karnataka history repeats: In the state that any MLA/Minister who holds the portfolio of Religious Endowment (Muzrai) Minister in the state cabinet has failed to win the next elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X