ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಲಬುರ್ಗಾ ಕ್ಷೇತ್ರ: ಐದು ಬಾರಿ ಶಾಸಕ ರಾಯರೆಡ್ಡಿ ಸೋಲಿಸುವುದು ಸಾಧ್ಯವೇ?

By Sachhidananda Acharya
|
Google Oneindia Kannada News

ಯಲಬುರ್ಗಾ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ. 144 ಹಳ್ಳಿಗಳನ್ನು ಹೊಂದಿರುವ ಈ ಯಲಬುರ್ಗಾ ತಾಲೂಕಿನಲ್ಲಿ ಹಲವು ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳಿವೆ.

ತಾಲೂಕಿನ ಇಟಗಿಯಲ್ಲಿರುವ ಮಹೇಶ್ವರ ದೇವಸ್ಥಾನ, 17ನೇ ಶತಮಾನದಲ್ಲಿ ನಿರ್ಮಿಸಿದ ತಿಮ್ಮಪ್ಪನ ಗುಡಿ ದೇವಸ್ಥಾನ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿವೆ. ಸಾಂಸ್ಕೃತಿಕವಾಗಿ ತಾಲೂಕು ಶ್ರೀಮಂತವಾಗಿದ್ದರೂ ಕೃಷಿ ಚಟುವಟಿಕೆಗೆ ಮಾತ್ರ ಇಲ್ಲಿ ತೊಂದರೆ ಇದೆ. ನೀರಾವರಿ ಸಮಸ್ಯೆಯಿಂದಾಗಿ ವ್ಯವಸಾಯ ಪೂರ್ತಿ ಮಳೆ ಆಧಾರಿತವಾಗಿಯೇ ನಡೆಯಬೇಕಾಗಿದೆ.
ಯಲಬುರ್ಗಾವನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಪ್ರತಿನಿಧಿಸುತ್ತಿದ್ದಾರೆ.

ಇಲ್ಲಿನ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಢಾಳಾಗಿ ಕಾಣಿಸುತ್ತದೆ. ಕ್ಷೇತ್ರದಲ್ಲಿ ಬಸವರಾಜ ರಾಯರೆಡ್ಡಿ 1985, 1989, 1994, 2004 ಮತ್ತು 2013ರಲ್ಲಿ ಜಯ ಸಾಧಿಸಿದ್ದಾರೆ. ಮೊದಲ ಮೂರು ಬಾರಿ ಜಯ ಸಾಧಿಸುವಾಗ ಅವರು ಜನತಾದಳ ಪಕ್ಷದಲ್ಲಿದ್ದರು.
ನಂತರ 2004ರಲ್ಲಿ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯ ಸಾಧಿಸಿದರು. ನಂತರ ಅವರು 2008ರಲ್ಲಿ ಸೋಲೊಪ್ಪಿಕೊಂಡು 2013ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಜಯಸಾಧಿಸಿದರು. ಜೊತೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾದರು.
2013ರಲ್ಲಿ 52,388 ಮತಗಳನ್ನು ಪಡೆದಿದ್ದ ಬಸವರಾಜ ರಾಯರೆಡ್ಡಿ ಬಿಜೆಪಿಯ ಹಾಲಪ್ಪ ಬಸಪ್ಪ ಆಚಾರ್ ಅವರನ್ನು 16,900 ಮತಗಳಿಂದ ಸೋಲಿಸಿದ್ದರು.

Karnataka Assembly Election 2018: Yelburga Constituency Profile

ಈ ಬಾರಿ ಕಾಂಗ್ರೆಸ್ ನಿಂದ ಮತ್ತೆ ರಾಯರೆಡ್ಡಿ ಸ್ಪರ್ಧಿಸುತ್ತಿದ್ದರೆ. 90ರ ದಶಕದಲ್ಲಿ ಜೆಡಿಯುನಲ್ಲಿದ್ದ ಸದ್ಯ ಬಿಜೆಪಿಯಲ್ಲಿರುವ ಅನುಭವಿ ಹಾಲಪ್ಪ ಬಸಪ್ಪ ಆಚಾರಿ ಅವರ ಎದುರಾಳಿಯಾಗಿದ್ದಾರೆ. ಇಲ್ಲಿ ಜೆಡಿಎಸ್ ಈರಣ್ಣಗೌಡ ಪಾಟೀಲ್ ಗೆ ಟಿಕೆಟ್ ನೀಡಿದೆ.

ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ದೊಡ್ಡ ಮಟ್ಟಕ್ಕೆ ಕುಸಿತ ಕಂಡಿವೆ. ಹೀಗಾಗಿ ಆ ಪಕ್ಷದಿಂದ ಪ್ರಬಲ ಪೈಪೋಟಿ ನಿರೀಕ್ಷಿಸುವುದು ಅಸಾಧ್ಯ. ಆದರೆ 2013ರಲ್ಲಿ ಕೆಜೆಪಿ ಮತ್ತು ಬಿಎಸ್ಆರ್ ಪಕ್ಷಗಳಿ ತಲಾ 10 ಸಾವಿರ ಮತಗಳನ್ನು ಬಿದ್ದಿದ್ದವು. ಇವುಗಳನ್ನು ಮತ್ತೆ ಕ್ರೋಢೀಕರಣ ಮಾಡಿದರೆ ಬಿಜೆಪಿಗೆ ಗೆಲುವಿನ ಅವಕಾಶ ಇದೆ.

ಐದು ಬಾರಿಯ ಶಾಸಕ, ಸಚಿವ ಬಸವರಾಜ ರಾಯರೆಡ್ಡಿಗೆ ಸೋಲುಣಿಸುವಲ್ಲಿ ಬಿಜೆಪಿ ಸಫಲವಾಗುತ್ತಾ? ಜೆಡಿಎಸ್ ಅಭ್ಯರ್ಥಿ ಪ್ರಬಲ ಸ್ಪರ್ಧೆ ನೀಡುತ್ತಾರಾ? ಕಾದು ನೋಡಬೇಕಿದೆ.

English summary
Karnataka Assembly Election 2018: Read all about Yelburga assembly constituency of Koppal district. Get election news from Yelburga. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X