ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಯಾದಗಿರಿಯಲ್ಲಿ ಯಾರಿಗೆ ಗೆಲುವು?

|
Google Oneindia Kannada News

ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕ್ಷೇತ್ರ ಯಾದಗಿರಿ ಜಿಲ್ಲೆ. ಕರ್ನಾಟಕದ ರಾಜ್ಯದ 2ನೇ ಚಿಕ್ಕ ಜಿಲ್ಲೆ ಇದು. ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ಯಾದಗಿರಿ. ಕ್ಷೇತ್ರವು ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದೆ. ಜೋಳ ಮತ್ತು ತೊಗರಿ ಬೆಳೆಗೆ ಕ್ಷೇತ್ರ ಹೆಸರುವಾಸಿ.

ರಾಜ್ಯದಲ್ಲಿಯೇ ಅಧಿಕ ಬೆಳೆ ಕಾಳುಗಳನ್ನು ಬೆಳೆಯುವ ಜಿಲ್ಲೆಯಲ್ಲಿ ಯಾದಗಿರಿಯೂ ಒಂದು. ಕೃಷ್ಣ ಮತ್ತು ಭೀಮಾ ನದಿಗಳ ತಟದಲ್ಲಿದೆ ಯಾದಗಿರಿ. 2008ರ ಸೆಪ್ಟೆಂಬರ್ 26ರಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾದಗಿರಿಯನ್ನು ಹೊಸ ಜಿಲ್ಲೆಯಾಗಿ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.

2009ರಲ್ಲಿ ಯಾದಗಿರಿಯನ್ನು ರಾಜ್ಯದ 30ನೇ ಜಿಲ್ಲೆಯಾಗಿ ಘೋಷಣೆ ಮಾಡಲಾಯಿತು. ರಾಜಕೀಯವಾಗಿ ಕಾಂಗ್ರೆಸ್‌ನ ಎ.ಬಿ.ಮಾಲಕರಡ್ಡಿ ಕ್ಷೇತ್ರದ ಶಾಸಕರು. ಕೆಲವು ದಿನಗಳ ಹಿಂದೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ, 2018ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ.

 Karnataka assembly election 2018 : Yadgir constituency profile

ಕಳೆದ ಬಾರಿಯ ಫಲಿತಾಂಶ : 2013ರ ಚುನಾವಣೆಯಲ್ಲಿ ಡಾ.ಮಾಲಕರಡ್ಡಿ ಅವರು 40,434 ಮತಗಳನ್ನು ಪಡೆದು ಜಯಗಳಿಸಿದ್ದರು. ಕೆಜೆಪಿಯ ವೀರ ಬಸಂತ್ ರೆಡ್ಡಿ ಅವರು 31,330 ಮತಗ, ಜೆಡಿಎಸ್‌ನ ಅಬ್ದುಲ್ ನಬಿ ಅವರು 23,977 ಮತ, ಬಿಜೆಪಿಯ ಚಂದ್ರಶೇಖರ್ ಗೌಡ 3,556 ಮತಗಳನ್ನು ಪಡೆದಿದ್ದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

2018ರಲ್ಲಿ ಕಾಂಗ್ರೆಸ್‌ನಿಂದ ಡಾ.ಮಾಲಕರಡ್ಡಿ, ಜೆಡಿಎಸ್‌ನಿಂದ ಎ.ಸಿ.ಕಡಲೂರ್, ಬಿಜೆಪಿಯಿಂದ ವೆಂಕಟ ರೆಡ್ಡಿ ಕಣದಲ್ಲಿದ್ದಾರೆ.

English summary
Karnataka Assembly Election 2018 : Read all about Yadgir assembly constituency of Yadgir district. Get election news from Yadgir. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X